Advertisement

ಭಾರತೀಯ ಕಾನ್ಸುಲೇಟ್‌ ಎದುರು ಪ್ರತಿಭಟನೆ, ರಾಜಪಕ್ಷ ಪುತ್ರ ಬಂಧನ

03:11 PM Oct 11, 2017 | Team Udayavani |

ಕೊಲಂಬೊ : ಭಾರತೀಯ ಕಂಪೆನಿಯೊಂದಕ್ಕೆ ಲಂಕೆಯ ಹಂಬನತೋಟದಲ್ಲಿನ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಲೀಸಿಗೆ ನೀಡುವ ಪ್ರಸ್ತಾವವನ್ನು ವಿರೋಧಿಸಿ ಹಂಬನತೋಟದಲ್ಲಿನ ಭಾರತೀಯ ಕಾನ್ಸುಲೇಟ್‌ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದ ಲಂಕೆಯ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಷ ಅವರ ಹಿರಿಯ ಪುತ್ರ ಮತ್ತು ಇತರ ಇಬ್ಬರು ಸಂಸದರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಲಂಕೆಯ ದಕ್ಷಿಣ ಪ್ರಾಂತ್ಯದಲ್ಲಿನ ಹಂಬನತೋಟದಲ್ಲಿರುವ ಮತ್ತಾಲ ಮಹಿಂದ ರಾಜಪಕ್ಷ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು  ಭಾರತೀಯ ಕಂಪೆನಿಗೆ ಗುತ್ತಿಗೆ ಆಧಾರದ ಮೇಲೆ ವಹಿಸಿಕೊಡುವ ಪ್ರಸ್ತಾವವನ್ನು ವಿರೋಧಿಸಿ ದೇಶದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಷ ಅವರನ್ನು ಬೆಂಬಲಿಸುತ್ತಿರುವ ಜಂಟಿ ವಿರೋಧ ಪಕ್ಷಗಳ ಸದಸ್ಯರು ಭಾರತೀಯ ಕಾನ್ಸುಲೇಟ್‌ ಕಾರ್ಯಾಲಯದ ಎದುರು ಬೃಹತ್‌ ಪ್ರತಿಭಟನೆ ನಡೆಸಿದರು. 

ಹಂಬನತೋಟ ವಿಮಾನ ನಿಲ್ದಾಣವು ರಾಜಪಕ್ಷ ಅವರ ಅಧ್ಯಕ್ಷಾವಧಿಯಲ್ಲಿ ಚೀನದ ಸಾಲ ನೆರವಿನಿಂದ ರೂಪಿಸಲಾಗಿದ್ದ ಅತ್ಯಂತ ಪ್ರಮುಖ ಮಹತ್ವಾಕಾಂಕ್ಷೀ ಮೂಲ ಸೌಕರ್ಯ ಯೋಜನೆಯಾಗಿತ್ತು. 

ಬಂಧಿತ ಪ್ರತಿಭಟನಕಾರರನ್ನು ಅ.16ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುವುದಾಗಿ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next