ಕೊಲೊಂಬೋ: ಶ್ರೀಲಂಕೆಯ ಪ್ರಧಾನಿಯಾಗಿ ನೇಮಕಗೊಂಡಿದ್ದ ಮಹಿಂದ ರಾಜಪಕ್ಸೆ ಅಲ್ಲಿನ ಸಂಸತ್‌ನಲ್ಲಿ ವಿಶ್ವಾಸ ಮತ ಗೊತ್ತುವಳಿಯಲ್ಲಿ ಸೋಲು ಅನುಭವಿಸಿದ್ದಾರೆ. ಹೀಗಾಗಿ ದ್ವೀಪ ರಾಷ್ಟ್ರದ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ಅಧ್ಯಕ್ಷ ಮೈತ್ರಿ ಪಾಲ ಸಿರಿಸೇನ ಸಂಸತ್ ವಿಸರ್ಜಿಸಿದ ಕ್ರಮ ಮತ್ತು ಜ.5ರಂದು ಚುನಾವಣೆ ಘೋಷಣೆ ಕ್ರಮಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದ ಬಳಿಕ ಬುಧವಾರ ಅ.26ರ ಬಳಿಕ ಮೊದಲ ಬಾರಿಗೆ ಸಮಾವೇಶ ಗೊಂಡಿತು. ಸ್ಪೀಕರ್ ಕರು ಜಯಸೂರ್ಯ ಅವರು 122 ಮಂದಿ ಸಂಸದರು ಪ್ರಧಾನಿ ಮಹಿಂದ ರಾಜಪಕ್ಸೆ ಮೇಲೆ ವಿಶ್ವಾಸ ಹೊಂದಿಲ್ಲ. ಹೀಗಾಗಿ ಸರಕಾರ ಬಹುಮತ ಹೊಂದಿಲ್ಲವೆದು ಘೋಷಿಸಿದರು. ನಂತರ ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು. ಈ ಸಂದರ್ಭದಲ್ಲಿ ರಾಜಪಕ್ಸೆ ಬೆಂಬ ಲಿಗರು ಪ್ರತಿಭಟಿಸಿದರು. ಬಳಿಕ ಮಾತ ನಾಡಿದ ಪದಚ್ಯುತ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ರಾಜಪಕ್ಸೆ ರಾಜೀನಾಮೆ ನೀಡಬೇಕು. ಅ.26ರ ಮೊದಲು ಇದ್ದ ಸರಕಾರ ಮುಂದುವರಿಯುವುದಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.