Advertisement

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ

02:44 PM Dec 13, 2019 | Suhan S |

ಪಿರಿಯಾಪಟ್ಟಣ: ಪಟ್ಟಣದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗ ಮತ್ತು ರಾಜಕಾಲುವೆಗಳ ಸರ್ವೆ ನಡೆಸಿ, ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಪುರ ಸಭಾ ಮುಖ್ಯಾಧಿಕಾರಿ ಚಂದ್ರು ಕುಮಾರ್‌ತಿಳಿಸಿದರು.

Advertisement

ಪಟ್ಟಣದ ಬಿ.ಎಂ.ರಸ್ತೆಗೆ ಹೊಂದಿ ಕೊಂಡಿರುವ 4ನೇ ವಾರ್ಡ್‌ನ ಬಾನು ಕೋಟಿ ಬಡಾವಣೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರಾಜಕಾಲುವೆಯನ್ನು ತೆರವುಗೊಳಿಸಲು ಪುರಸಭೆ ವತಿಯಿಂದ ಮೂಲ ನಕ್ಷೆಯಂತೆ ಸರ್ವೆ ಕಾರ್ಯ ಕೈಗೊಂಡಿರುವುದಾಗಿ ತಿಳಿಸಿದರು.

ಮನೆಗಳಿಗೆ ಕೊಳಚೆ ನೀರು: ಈ ವೇಳೆ ಇಲ್ಲಿನ ನಿವಾಸಿ ಗಿರೀಶ್‌ ಮಾತನಾಡಿ, ಪಟ್ಟಣದ ಹೊರ ವಲಯದ ತಾವರೆ ಕೆರೆ ಕೋಡಿ ಬಿದ್ದ ಸಂದರ್ಭದಲ್ಲಿ ಬಿ.ಎಂ.  ರಸ್ತೆಯ ಎಡಭಾಗದ ಬಡಾವಣೆಗಳು ಅಂಗಡಿ ಮುಂಗ್ಗಟ್ಟುಗಳು ಮುಳುಗಡೆಗೊಂಡು ಇಲ್ಲಿನ ನಿವಾಸಿಗಳು ಮತ್ತು ಸಾರ್ವಜನಿಕರು ನರಕಯಾತನೆ ಅನುಭವಿಸುವಂತಾಗಿದೆ. ಇತ್ತೀಚೆಗೆ ಪಟ್ಟಣದಲ್ಲಿ ನಡೆಯುತ್ತಿರುವ ಒಳ ಚರಂಡಿ ಕಾಮಗಾರಿಯಿಂದ ಅಲ್ಲಲ್ಲಿ ನೀರು ನಿಂತು ಮನೆಯ ಗಲೀಜು ನೀರು ಮನೆಗಳಿಗೆ ನುಗ್ಗುತ್ತಿದೆ ಎಂದು ಅವಲತ್ತು ಕೊಂಡರು. ಈ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪುರ ಸಭಾ ಮುಖ್ಯಾಧಿಕಾರಿ ಚಂದ್ರುಕುಮಾರ್‌ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭಾ ಸಿಬ್ಬಂದಿ ಆದರ್ಶ, ಕುಮಾರ್‌, ಸ್ಥಳೀಯ ನಿವಾಸಿಗಳಾದ ಲಾದುಲಾಲ್‌ ಜೈನ್‌, ಸ್ವಾಮೀ ಗೌಡ, ನಾಗರಾಜು, ಶಿವ ಕುಮಾರ್‌, ಜೋಸಫ್, ಕ್ಯಾಲಿ ನಾತು ರಾಮ್‌ ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next