ಮಂಗಳೂರು: ಕೋಸ್ಟಲ್‌ವುಡ್‌ನಲ್ಲಿ ಬಹುನಿರೀಕ್ಷೆ ಮೂಡಿಸಿರುವ, ವಿದೇಶದ ಪ್ರೀಮಿಯರ್ ಶೋದಲ್ಲಿ ಮೆಚ್ಚುಗೆಗೆ ಪಾತ್ರವಾದ “ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ತುಳು ಸಿನೆಮಾ ಕರಾವಳಿಯಾದ್ಯಂತ ಶುಕ್ರವಾರ ತೆರೆಕಂಡಿದೆ.
ಮಂಗಳೂರಿನ ರೂಪವಾಣಿ, ಭಾರತ್ ಮಾಲ್‌ನ ಬಿಗ್ ಸಿನೆಮಾಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ, ಭಾರತ್ ಸಿನೆಮಾಸ್, ಮಣಿಪಾಲದ ಐನಾಕ್ಸ್, ಬೆಳ್ತಂಗಡಿಯ ಭಾರತ್, ಸುಳ್ಯದ ಸಂತೋಷ್, ಪುತ್ತೂರಿನ ಅರುಣಾ, ಸುರತ್ಕಲ್‌ನ ನಟರಾಜ್, ಸಿನೆಗ್ಯಾಲಕ್ಸಿ, ಕೊಪ್ಪದ ಜೆಎಂಜೆ, ಕಾಸರಗೋಡಿನ ಕೃಷ್ಣಾ, ಮೂಡುಬಿದಿರೆಯ ಅಮರಶ್ರೀ, ಕಾರ್ಕಳದ ಪ್ಲಾನೆಟ್, ರಾಧಿಕಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮೊದಲ ದಿನವೇ ಚಿತ್ರಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತುಳು ಭಾಷೆ ಅಂದರೆ ಮೂರು ಜಿಲ್ಲೆಗಳ ಜನರ ಆಚಾರ ವಿಚಾರ, ಸಂಸ್ಕೃತಿಯಾಗಿದೆ. ಭಾಷೆ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ಕರಾವಳಿಯ ಎಲ್ಲ ವರ್ಗದ ಜನರನ್ನು ಒಗ್ಗಟ್ಟಿನಲ್ಲಿ ಕೊಂಡೊಯ್ಯುವುದಿದ್ದರೆ ಅದು ತುಳು ಭಾಷೆ ಮಾತ್ರ ಎಂದು ಮಂಗಳೂರಿನ ಭಾರತ್ ಮಾಲ್‌ನ ಬಿಗ್ ಸಿನೆಮಾಸ್‌ನಲ್ಲಿ ನಡೆದ ಚಿತ್ರಬಿಡುಗಡೆ ಕಾರ್ಯಕ್ರಮದಲ್ಲಿ ಶಾಸಕ, ಮಾಜಿ ಸಚಿವ ಯು.ಟಿ. ಖಾದರ್ ಹೇಳಿದರು.
11 ದೇಶಗಳಲ್ಲಿ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಪ್ರೀಮಿಯರ್ ಶೋ ಮೂಲಕ ಸದ್ದು ಮಾಡಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹರ್ಷ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಶುಭ ಹಾರೈಸಿದರು.
ದೇವದಾಸ್ ಕಾಪಿಕಾಡ್, ವಿಜಯ ಕುಮಾರ್ ಕೊಡಿಯಾಲಬೈಲ್, ಪ್ರಕಾಶ್ ಪಾಂಡೇಶ್ವರ, ಡಾ| ದೇವರಾಜ್, ಮೋಹನ್ ಕೊಪ್ಪಲ, ಚಿತ್ರ ನಿರ್ಮಾಪಕ ಆನಂದ್ ಕುಂಪಲ, ನಿರ್ದೇಶಕ ರಾಹುಲ್ ಅಮೀನ್, ಕದ್ರಿ ನವನಿತ್ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ, ಭೋಜರಾಜ್ ವಾಮಂಜೂರು, ಡಾ| ಅಣ್ಣಯ್ಯ ಕುಲಾಲ್, ಶೈಲಶ್ರೀ ಮೂಲ್ಕಿ, ಪದ್ಮರಾಜ್ ಕುದ್ರೋಳಿ, ಲೀಲಾಕ್ಷ ಕರ್ಕೇರ, ಜಗನ್ನಾಥ ಶೆಟ್ಟಿ ಬಾಳ, ವಿನೀತ್, ಅಥರ್ವ ಪ್ರಕಾಶ್, ಯತೀಶ್ ಬೈಕಂಪಾಡಿ, ಬಾಲಕೃಷ್ಣ ಶೆಟ್ಟಿ, ಮಮತಾ ಗಟ್ಟಿ, ಶರ್ಮಿಳಾ ಕಾಪಿಕಾಡ್, ಅರ್ಜುನ್ ಕಾಪಿಕಾಡ್, ತಮ್ಮ ಲಕ್ಷ್ಮಣ, ಸತೀಶ್ ಕುಂಪಲ, ಅವಿನಾಶ್ ಶೆಟ್ಟಿ, ಕಿಶೋರ್ ಕೊಟ್ಟಾರಿ ಉಪಸ್ಥಿತರಿದ್ದರು. ನಟ ವಿನೀತ್ ಪ್ರಸ್ತಾವಿಸಿ, ನಿತೇಶ್ ಶೆಟ್ಟಿ ಎಕ್ಕಾರ್ ನಿರೂಪಿಸಿದರು.
ತುಳುಭಾಷೆಗೆ ಮಾನ್ಯತೆ ಸಿಗಲಿ ಎಂಬ ಆಶಯದೊಂದಿಗೆ ತುಳುಲಿಪಿಯ ಬಾವುಟವನ್ನು ಕ್ರೇನ್ ಮುಖಾಂತರ ಹಾರಿಸಿ ಅತಿಥಿಗಳಿಗೆ ಹಸ್ತಾಂತರ ಮಾಡಲಾಯಿತು.