Advertisement
ಠಾಕ್ರೆ ಸೋಮವಾರ ಹೊಸದಿಲ್ಲಿಯಲ್ಲಿ ಸೋನಿಯಾ ಅವರನ್ನು ಭೇಟಿಯಾಗಿ ಇವಿಎಂಗಳ ಸಮಸ್ಯೆ ಮತ್ತು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಿದ್ದರು. ಕ್ಯಾಬಿನೆಟ್ ಸಭೆಯ ಅನಂತರ ಇಲ್ಲಿ ಮಾತನಾಡಿದ ಮುಂಗಂತಿವಾರ್, ಇಬ್ಬರೂ ಪರಾಜಿತ ನಾಯಕರು ಒಗ್ಗೂಡಿದಾಗ, ಅವರ ನಷ್ಟದ (ಚುನಾವಣ) ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕುಹುಕವಾಡಿದರು.
ಅಲ್ಲದೆ, ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಜವಾಬ್ದಾರಿಯನ್ನು ಹೊತ್ತು ಪಕ್ಷದ ಮುಖ್ಯಸ್ಥ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡಿದ ಅನಂತರ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಮಂಥನವನ್ನು ಕೂಡ ಅವರು ಲೇವಡಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನಾಯಕರ ಪರಸ್ಪರ ಕಚ್ಚಾಟದ ಸಂಬಂಧ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ನ ಅವನತಿಯನ್ನು ಪ್ರಸ್ತುತ ಯಾರಿಗೂ ನೋಡಲಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ವಾಸ್ತವವಾಗಿ, ಕಾಂಗ್ರೆಸ್‌ನ ಮುಂಬಯಿ ಘಟಕದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಕೇಂದ್ರ ಸಚಿವ ಮಿಲಿಂದ್ ದೇವ್ರಾ ಮತ್ತು ಘಟಕದ ಮಾಜಿ ಮುಖ್ಯಸ್ಥ ಸಂಜಯ್ ನಿರುಪಮ್ ಅವರ ನಡುವೆ ಟ್ವಿಟ್ಟರ್‌ನಲ್ಲಿ ಕಚ್ಚಾಟ ನಡೆಯುತ್ತಿದೆ.
Related Articles
ದೇವ್ರಾ ರಾಜೀನಾಮೆ ಸಲ್ಲಿಸಿದ ಅನಂತರ, ನಾನು ಮೂರು ಸದಸ್ಯರ ಸಮಿತಿಯನ್ನು (ನಗರ ಪಕ್ಷದ ಘಟಕದ ಮೇಲ್ವಿಚಾರಣೆಗೆ) ಸೂಚಿಸಿದ್ದೇನೆ ಮತ್ತು ಹೆಸರುಗಳನ್ನು ಗುರುತಿಸಲು ನಾಯಕರನ್ನು ಸಂಪರ್ಕಿಸುತ್ತಿದ್ದೇನೆ. ಪಕ್ಷವನ್ನು ಸ್ಥಿರಗೊಳಿಸಲು ರಾಷ್ಟ್ರೀಯ ಪಾತ್ರವನ್ನು ವಹಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿದಾಳಿ ನಡೆಸಿರುವ ನಿರುಪಮ್, ರಾಜೀನಾಮೆ ತ್ಯಾಗದ ಭಾವನೆಯೊಂದಿಗೆ ಸಂಬಂಧ ಹೊಂದಿದೆ. ಆದರೆ, ಈ ವಿಷಯದಲ್ಲಿ “ರಾಷ್ಟ್ರೀಯ’ ಮಟ್ಟದ ಹು¨ªೆಯನ್ನು ಕೋರಲಾಗುತ್ತಿದೆ. ಇದು ರಾಜೀನಾಮೆಯೇ ಅಥವಾ ರಾಜಕೀಯವಾಗಿ ಬೆಳೆಯಲು ಏಣಿಯೇ? ಇಂತಹ ಜನರ ಬಗ್ಗೆ ಪಕ್ಷವು ಜಾಗರೂಕವಾಗಿರಬೇಕು ಎಂದಿದ್ದಾರೆ.
Advertisement