Advertisement

ಆಕೆಯ ಅಕ್ರಮ ಸಂಬಂಧವೇ ಕಾರಣ: ಮೊದಲ ಪತ್ನಿಯ ವಿಚ್ಚೇದನ ಬಗ್ಗೆ ಮಾತನಾಡಿದ ರಾಜ್ ಕುಂದ್ರಾ

09:04 AM Jun 13, 2021 | Team Udayavani |

ಮುಂಬೈ: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್‌ ಕುಂದ್ರಾ ಅವರು ಸಂದರ್ಶನವೊಂದರಲ್ಲಿ ತಮ್ಮ ಮೊದಲ ಪತ್ನಿ ಕವಿತಾರೊಂದಿಗಿನ ವಿಚ್ಛೇದನಕ್ಕೆ ಸಂಬಂಧಿಸಿ ಹಲವು  ವಿಚಾರಗಳನ್ನು ಬಾಯಿಬಿಟ್ಟಿದ್ದಾರೆ. ಈವರೆಗೆ ಈ ವಿಷಯದಲ್ಲಿ ತುಟಿ ಬಿಚ್ಚದ ಕುಂದ್ರಾ ಈಗ ಮೌನ ಮುರಿದಿರುವುದು ಅಚ್ಚರಿ ಮೂಡಿಸಿದೆ.

Advertisement

ಇದನ್ನೂ ಓದಿ:ಎಲೆಕ್ಟ್ರಿಕ್ ಸ್ಕೂಟರ್ ಪ್ರಿಯರಿಗೆ ಸಿಹಿಸುದ್ದಿ: ಸಬ್ಸಿಡಿ ಹೆಚ್ಚಳ,ವಾಹನದ ದರ ಇಳಿಕೆ ಸಾಧ್ಯತೆ

2006ರಲ್ಲಿ ಕುಂದ್ರಾ ಅವರು ಮೊದಲ ಪತ್ನಿ ಕವಿತಾರಿಗೆ ವಿಚ್ಛೇದನ ನೀಡಿದ್ದರು. “ನಮ್ಮಿಬ್ಬರ ವಿಚ್ಛೇದನಕ್ಕೆ ಶಿಲ್ಪಾ ಶೆಟ್ಟಿ ಕಾರಣ ಎಂದು ಕವಿತಾ ಆರೋಪಿಸಿದ್ದರು. ಆದರೆ, ಅದು ಸತ್ಯಕ್ಕೆ ದೂರವಾದ ಸಂಗತಿ. ಕವಿತಾ ನನ್ನ ಸಹೋದರಿಯ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ನನ್ನ ತಾಯಿಯೆದುರೇ ಅವರಿಬ್ಬರೂ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರು. ಅಲ್ಲದೇ ಅವರಿಬ್ಬರ ನಡುವಿನ ಮೊಬೈಲ್‌ ಸಂದೇಶಗಳನ್ನು ನೋಡಿದ ಮೇಲೆ, ಆಕೆ ನನಗೆ ಮೋಸ ಮಾಡಿದ್ದು ಗೊತ್ತಾಯಿತು. ಕೊನೆಗೆ ಆಕೆಯಿಂದ ಪ್ರತ್ಯೇಕವಾಗುವ ನಿರ್ಧಾರ ಕೈಗೊಂಡೆ’ ಎಂದು ರಾಜ್‌ ಕುಂದ್ರಾ ಹೇಳಿದ್ದಾರೆ.

ಜತೆಗೆ, ಈ ಸತ್ಯವನ್ನು ಹೇಳಿದ ಬಳಿಕ ನನ್ನ ಮನಸ್ಸು ಹಗುರಾಗಿದೆ ಎಂದೂ ರಾಜ್ ಕುಂದ್ರಾ ಹೇಳಿದ್ದಾರೆ. ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ 2009ರ ನವೆಂಬರ್ ನಲ್ಲಿ ವಿವಾಹವಾಗಿದ್ದರು. ದಂಪತಿಗೆ ವಿಯಾನ್ ಮತ್ತು ಸಮಿಶಾ ಎಂಬ ಇಬ್ಬರು ಮಕ್ಕಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next