ಮುಂಬಯಿ: ರಾಜ್ ಕುಂದ್ರಾ ಅವರ ಆಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ಗೆಹಾನಾ ವಸಿಷ್ಟ್ ಮತ್ತೊಮ್ಮೆ ಪ್ರಕರಣ ಸಂಬಂಧ ಮಾತನಾಡಿದ್ದಾರೆ.
ಇತ್ತೀಚೆಗೆ ಭೋಪಾಲ್ ನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ರಾಜ್ ಕುಂದ್ರಾ ಜೊತೆಗೆ ಅಶ್ಲೀಲ ಚಿತ್ರಗಳನ್ನು ನಿರ್ಮಿಸಿದ್ದಕ್ಕಾಗಿ ಮತ್ತು ಅದರಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ನನ್ನನ್ನು ಬಂಧಿಸಲಾಗಿತ್ತು. ಆದರೆ ಆ ಬಳಿಕ ನಿರಪರಾಧಿಗಳಾಗಿದ್ದರಿಂದ ಜಾಮೀನು ನೀಡಲಾಯಿತು. ನಾವು ನಿಜವಾಗಿಯೂ ವಯಸ್ಕರ ವೀಡಿಯೊಗಳನ್ನು ಮಾಡುತ್ತಿದ್ದರೆ, ಅದು ಎಲ್ಲಿದೆ? ನಟಿ ಪ್ರಶ್ನಿಸಿದ್ದಾರೆ.
ನಾನು ʼಗಾಂದಿ ಬಾತ್ʼ ಸೇರಿದಂತೆ ಇತರೆ ಪ್ಲಾಟ್‌ಫಾರ್ಮ್‌ಗಳ ಶೋಗಳಲ್ಲಿ ಹಲವಾರು ಬೋಲ್ಡ್ ಶೋಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಅದು ಕಾಮಪ್ರಚೋದಕತೆಯ (Erotic) ಶೋ ಆಗಿತ್ತು ವಿನಃ ಆಶ್ಲೀಲವಾಗಿರಲಿಲ್ಲ ಎಂದಿದ್ದಾರೆ.
2021 ರಲ್ಲಿ ಶೆರ್ಲಿನ್ ಚೋಪ್ರಾ ಅವರು ರಾಜ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿಕೊಂಡಿದ್ದರು. ಶೆರ್ಲಿನ್ ತನ್ನ ಆರ್ಮ್ಸ್‌ಪ್ರೈಮ್ ಆ್ಯಪ್‌ಗಾಗಿ ಕೆಲಸ ಮಾಡಿದ್ದಕ್ಕಾಗಿ ರಾಜ್‌ನಿಂದ 30 ಲಕ್ಷ ರೂಪಾಯಿಗಳನ್ನು ನಿಯಮಿತವಾಗಿ ಸಂಬಳ ತೆಗೆದುಕೊಳ್ಳುತ್ತಿದ್ದರು. ಆದರೆ ಅವರ(ರಾಜ್) ಹೆಸರು ಅಶ್ಲೀಲ ವಿಷಯದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಾಗ ಅವರ ವಿರುದ್ಧವೇ ತಿರುಗಿ ದ್ರೋಹ ಮಾಡಿದಳು ಎಂದು ನಟಿ ಹೇಳಿದ್ದಾರೆ.
“ರಾಜ್ ಶೆರ್ಲಿನ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬೇಕು. ಆಕೆಯ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಬೇಕು. ಶೆರ್ಲಿನ್ ಮೇಲೆ ಯಾರು ಅತ್ಯಾಚಾರ ಮಾಡುತ್ತಾರೆ? ಆದರ್ಶನಗರದ ಬ್ರೋಕರ್‌ಗಳು ಆಕೆಯ ಫೋಟೋಗಳನ್ನು ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಾರೆ” ಎಂದು ಗೆಹಾನಾ ಹೇಳಿದ್ದಾರೆ.
2021 ರಲ್ಲಿ ಗೆಹಾನಾ ಅಶ್ಲೀಲ ವಿಡಿಯೋ ದಂಧೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ವಯಸ್ಕರ ವೀಡಿಯೋಗಳಲ್ಲಿ ಕಾಣಿಸಿಕೊಳ್ಳಲು ಯುವತಿಯರಿಗೆ ಹಣದ ಆಮಿಷ ಒಡ್ಡಿ ಬೆದರಿಕೆ ಹಾಕುತ್ತಿದ್ದಳು ಎಂಬ ಆರೋಪ ಆಕೆಯ ಮೇಲಿತ್ತು.