ಕನ್ನಡ ಚಿತ್ರರಂಗದ ಸದ್ಯದ ಬಹು ನಿರೀಕ್ಷಿತ ಚಿತ್ರ ರಾಜ್ ಬಿ ಶೆಟ್ಟಿಯವರ ಟೋಬಿ ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ರಾಜ್ ಬಿ ಶೆಟ್ಟಿಯವರು ಹೇಳಿಕೊಂಡಂತೆ ಮತ್ತೊಂದು ಮಾಸ್ ಚಿತ್ರವನ್ನು ಅವರು ಜನರ ಮುಂದೆ ತರುತ್ತಿದ್ದಾರೆ.
‘ಮಾರಿಗೆ ದಾರಿ’ ಎಂದು ಹೇಳುತ್ತಾ ಟೀಸರ್ ನೊಂದಿಗೆ ಬಂದಿದ್ದ ರಾಜ್ ಬಿ ಶೆಟ್ಟಿಯವರು ಈ ಬಾರಿ ‘ಟೋಬಿ ಕಣ್ಣು ಬಿಟ್ಟಾಗಿದೆ’ ಮುಂದೈತೆ ಹಬ್ಬ ಎಂದು ಸಿನಿಪ್ರಿಯರ ಕುತೂಹಲ ಹೆಚ್ಚು ಮಾಡಿದ್ದಾರೆ.
“ಹರಕೆಯ ಕುರಿಯೊಂದು ತಪ್ಪಿಸಿಕೊಂಡಿದೆ, ಯಾವುದೇ ಕಾರಣಕ್ಕೂ ಕುರಿ ಮತ್ತೆ ಊರಿಗೆ ಕಾಲಿಡಬಾರದು” ಎಂದು ಆರಂಭವಾಗುವ ಟ್ರೇಲರ್, ಟೋಬಿಯ ಜಗತ್ತಿನ ಹಲವು ಮಜಲುಗಳ ಪರಿಚಯ ಮಾಡುವ ಪ್ರಯತ್ನ ಮಾಡಿದೆ.
ಈ ಹಿಂದೆ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿದ್ದ ಹೆಚ್ಚಿನ ಕಲಾವಿದರು ಇದರಲ್ಲೂ ಮುಂದುವರಿದಿದ್ದಾರೆ. ರಾಜ್ ಬಿ ಶೆಟ್ಟಿಯವರು ಮುಗ್ಧ ಮತ್ತು ಭೀಕರ ಎರಡೂ ಶೇಡ್ ನಲ್ಲಿ ಮಿಂಚಿದ್ದಾರೆ. ಚೈತ್ರ ಆಚಾರ್ ಅವರು ಹಳ್ಳಿ ಹುಡುಗಿಯಾಗಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಬಾಸಿಲ್ ನಿರ್ದೇಶನವಿದ್ದು, ಮಿಥುನ್ ಮುಕುಂದನ್ ಸಂಗೀತವಿದೆ.