Advertisement

ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮದುವೆ ವಯಸ್ಸು 18 ಕ್ಕೆ ಏರಿಕೆ

08:26 PM Feb 27, 2023 | Team Udayavani |

ಲಂಡನ್ : ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ವಿವಾಹಕ್ಕೆ ಕಾನೂನುಬದ್ಧ ವಯಸ್ಸನ್ನು 18 ವರ್ಷಕ್ಕೆ ಹೆಚ್ಚಿಸುವ ಹೊಸ ಕಾನೂನು ಸೋಮವಾರ ಜಾರಿಗೆ ಬಂದಿದೆ. ಯುವ ಜನಾಂಗವನ್ನು ಅವರ ಇಚ್ಛೆಗೆ ವಿರುದ್ಧವಾಗಿ ಮದುವೆಗೆ ಒತ್ತಾಯಿಸುವುದರಿಂದ ರಕ್ಷಿಸುವ ಗುರಿಯನ್ನು ಹೊಂದಿ ಕಾನೂನು ಜಾರಿ ಮಾಡಲಾಗಿದೆ.

Advertisement

ಇಲ್ಲಿಯವರೆಗೆ, 16 ಅಥವಾ 17 ವರ್ಷ ವಯಸ್ಸಿನವರು ಪೋಷಕರ ಒಪ್ಪಿಗೆಯೊಂದಿಗೆ ಮದುವೆಯಾಗಬಹುದಾಗಿತ್ತು. ಬಲವಂತದ ಮದುವೆಗಳ ವಿರುದ್ಧ ಪ್ರಚಾರ ಮಾಡುತ್ತಿರುವ ದತ್ತಿ ಸಂಸ್ಥೆಗಳು ಹೊಸ ಕಾನೂನನ್ನು ಸ್ವಾಗತಿಸಿವೆ.  ಇದು ಇಂಗ್ಲೆಂಡ್ ನಲ್ಲಿನ ದಕ್ಷಿಣ ಏಷ್ಯಾ ಮತ್ತು ಆಫ್ರಿಕನ್ ಸಮುದಾಯಗಳ  ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ.

“ನಮ್ಮ ಸಮಾಜದಲ್ಲಿ ಬಲವಂತದ ಮದುವೆಯನ್ನು ಹತ್ತಿಕ್ಕುವ ಮೂಲಕ ದುರ್ಬಲ ಯುವ ಜನರನ್ನು ಈ ಕಾನೂನು ಉತ್ತಮವಾಗಿ ರಕ್ಷಿಸುತ್ತದೆ” ಎಂದು ಯುಕೆ ಉಪ ಪ್ರಧಾನ ಮಂತ್ರಿ ಮತ್ತು ನ್ಯಾಯಕ್ಕಾಗಿ ರಾಜ್ಯ ಕಾರ್ಯದರ್ಶಿ ಡೊಮಿನಿಕ್ ರಾಬ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next