Advertisement

ಜಿಲ್ಲೆಯ ರೈತರಿಗೆ ಬೆಳೆ ವಿಮೆ ಜಾಗೃತಿ ಮೂಡಿಸಿ

03:07 PM Apr 01, 2021 | Team Udayavani |

ಚಿಕ್ಕಬಳ್ಳಾಪುರ: ಬೆಳೆ ವಿಮೆ ಬಗ್ಗೆ ಮಾಹಿತಿಕೊರತೆಯಿಂದ ಇನ್ನೂ ಸಾಕಷ್ಟು ರೈತರು ಬೆಳೆ ವಿಮೆಮಾಡಿಸಿಲ್ಲ. ಹೀಗಾಗಿ ಕೃಷಿ ಇಲಾಖೆ ಒಳಗೊಂಡಂತೆಸಂಬಂಧಪಟ್ಟ ಇತರೆ ಇಲಾಖೆ ಅಧಿಕಾರಿಗಳು ಬೆಳೆವಿಮೆ ಯೋಜನೆ ಬಗ್ಗೆ ರೈತರಿಗೆ ಹೆಚ್ಚಿನ ಅರಿವುಮೂಡಿಸಬೇಕು.

Advertisement

ಎಲ್ಲರೂ ಬೆಳೆ ವಿಮೆ ಮಾಡಿಸುವಂತೆಪ್ರೇರೇಪಿಸಬೇಕು ಎಂದು ಯುವ ಸಬಲೀಕರಣಮತ್ತು ಕ್ರೀಡೆ ಇಲಾಖೆ ಸಚಿವ ಎ.ನಾರಾಯಣಗೌಡ ಸೂಚಿಸಿದರು.ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಷ್ಟವಾಗುತ್ತಿದೆ: ರೈತರ ಅನುಕೂಲಕ್ಕಾಗಿ ಬೆಳೆ ವಿಮೆಯೋಜನೆಯಿದೆ. ಆದರೆ, ವಿಮೆ ಕಂಪನಿಗಳನ್ನು ನಾವುಸಾಕುತ್ತಿದ್ದೇವೆ. ಸರಿಯಾದ ಅನುಷ್ಠಾನಇಲ್ಲದಿರುವುದೇ ಇದಕ್ಕೆ ಕಾರಣ. ವಿಮೆ ಹಣಕಟ್ಟಿರುವುದರಲ್ಲಿ ಶೇ.50 ರಷ್ಟು ಹಣ ಸಹ ರೈತರಿಗೆಸಿಗುತ್ತಿಲ್ಲ. ಬೆಳೆ ಕಟಾವು ಮಾಡಿ ತೂಕಕ್ಕೆ ಹಾಕುವಲ್ಲಿಮೋಸ ನಡೆಯುತ್ತದೆ. ಸರ್ವೆ ನಂಬರ್‌ನ ಸ್ಥಳದಲ್ಲೇಹೋಗಿ ಪರಿಶೀಲನೆ ಆಗಬೇಕು. ಅಧಿಕಾರಿಗಳ ಸಣ್ಣತಪ್ಪಿನಿಂದ ರೈತರಿಗೆ ದೊಡ್ಡ ನಷ್ಟವಾಗುತ್ತದೆ. ಈ ಬಗ್ಗೆಎಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಅನ್ಯಾಯ: ರೈತರಿಗೆ ಬೆಳೆ ವಿಮೆ ಪರಿಹಾರದೊರೆಯುವಲ್ಲಿ ಅನ್ಯಾಯವಾಗುತ್ತಿದೆ. ಬೆಳೆ ನಷ್ಟಆಗಿದ್ದರೂ ಪರಿಶೀಲನೆ ನಡೆಸದೆ ವರದಿ ನೀಡುವಕಾರಣ ರೈತರಿಗೆ ವಿಮೆ ಹಣ ಸಿಗುತ್ತಿಲ್ಲ. ತಕ್ಷಣಅಧಿಕಾರಿಗಳು ರೈತರ ಜತೆಗೆ ಸಭೆ ನಡೆಸಬೇಕು ಎಂದುಸೂಚಿಸಿದರು.ಸ್ಥಳ ಪರಿಶೀಲನೆ ಮಾಡಿ: ಶಾಸಕರ ಸ್ಥಳೀಯಪ್ರದೇಶಾಭಿವೃದ್ಧಿ ಅನುದಾನದಲ್ಲಿ ಜಿಲ್ಲೆಯಲ್ಲಿ 21ಕೋಟಿ ರೂ. ಹಣ ಇನ್ನೂ ಪಿಡಿ ಖಾತೆಯಲ್ಲೆ ಉಳಿದಿದೆ.ಶೇ.26 ರಷ್ಟು ಮಾತ್ರ ಕೆಲಸ ಆಗಿದೆ. ಶಾಸಕರ ಸ್ಥಳೀಯಪ್ರದೇಶಾಭಿವೃದ್ಧಿ ಅನುದಾನದಡಿ ಹಣ ಬಳಕೆಮಾಡದೆ ಬಿಟ್ಟರೆ ಆ ಹಣವನ್ನು ಹಣ ವಾಪಸ್‌ಪಡೆಯುತ್ತೇವೆ.

ಶಾಸಕರು ಕ್ರಿಯಾಯೋಜನೆ ನೀಡಿಅನುದಾನ ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿಅಧಿಕಾರಿಗಳು ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು.ಎಇಇ ಸೇರಿದಂತೆ ಎಲ್ಲಾ ಅಧಿಕಾರಿಗಳುತಾಲೂಕುವಾರು ಪರಿಶೀಲನೆಗೆ ಹೋಗಿ ಸ್ಥಳಪರಿಶೀಲನೆ ನಡೆಸಬೇಕು. ಕಚೇರಿಯಲ್ಲಿ ಕುಳಿತು ಕೆಲಸಮಾಡೋದಲ್ಲ ಎಂದು ಹೇಳಿದರು.

Advertisement

ಹೈಟೆಕ್‌ ಹಾಸ್ಟೆಲ್‌: ಜಿಲ್ಲೆಯಲ್ಲಿ ಕ್ರೀಡಾ ಹಾಸ್ಟೆಲ್‌ಸದ್ಯ ತಾತ್ಕಾಲಿಕ ಕಟ್ಟಡದಲ್ಲಿ ಇದೆ. ಜಿಲ್ಲಾ ಕ್ರೀಡಾಂಗಣದಆವರಣದಲ್ಲೇ 2.5 ಕೋಟಿ ರೂ.ವೆಚ್ಚದಲ್ಲಿ ಹೈಟೆಕ್‌ಕ್ರೀಡಾ ಹಾಸ್ಟೆಲ್‌ ನಿರ್ಮಾಣ ಮಾಡಲಾಗುವುದು.ಸಿಂಥೆಟಿಕ್‌ ಟ್ಯಾಂಕ್‌ ನಿರ್ಮಾಣಕ್ಕೆ ಖೇಲೊಇಂಡಿಯಾದಡಿ ಮಂಜೂರಾತಿ ಕೋರಿ ಕೇಂದ್ರಕ್ಕೆ 9ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಸಭೆಯಲ್ಲಿ ಜಿಪಂ ಅಧ್ಯಕ್ಷಎಂ.ಬಿ.ಚಿಕ್ಕನರಸಿಂಹಯ್ಯ,(ಚಿನ್ನಿ) ಬಾಗೇಪಲ್ಲಿ ಶಾಸಕಎಸ್‌.ಎನ್‌.ಸುಬ್ಟಾರೆಡ್ಡಿ, ಜಿಲ್ಲಾಧಿಕಾರಿ ಆರ್‌.ಲತಾ,ಜಿಪಂ ಸಿಇಒ ಪಿ.ಶಿವಶಂಕರ್‌, ಅಪರ ಜಿಲ್ಲಾಧಿಕಾರಿಎಚ್‌.ಅಮರೇಶ್‌, ಉಪ ವಿಭಾಗಾಧಿಕಾರಿರಘುನಂದನ್‌, ಯೋಜನೆ, ಕಾರ್ಯಕ್ರಮಸಂಯೋಜನೆ ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗದನಿರ್ದೇಶಕ ಚಂದ್ರಶೇಖರಯ್ಯ, ಜಿಪಂ ಮುಖ್ಯಯೋಜನಾಧಿಕಾರಿ ವಿ.ಧನುರೇಣುಕಾ, ವಿವಿಧಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next