Advertisement

ಕೇಂದ್ರ ಜಲಶಕ್ತಿ ಯೋಜನೆಯ ಅರಿವು ಮೂಡಿಸಿ

09:31 PM Jul 14, 2019 | Team Udayavani |

ಹಾಸನ: ನೀರಿನ ಮಹತ್ವವನ್ನು ಪ್ರತಿಯೊಬ್ಬರಿಗೂ ಸಾರುವ ನಿಟ್ಟಿನಲ್ಲಿ ಜಲಶಕ್ತಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನೀರಿನ ಸಂರಕ್ಷಣೆ, ಸಧºಳಕೆ ಹಾಗೂ ಅದರ ಮಹತ್ವದ ಕುರಿತು ಇತರರಿಗೂ ಮಾಹಿತಿ ನೀಡಿ ಎಂದು ಸ್ಕೌಟ್ಸ್‌ ಮತ್ತು ಗೈಡ್ಸ್‌ಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಸಲಹೆ ನೀಡಿದರು.

Advertisement

ಭಾರತ ಸ್ಕೌಟ್‌ ಮತ್ತು ಗೈಡ್ಸ್‌ನ ಜಿಲ್ಲಾ ಶಾಖೆಯ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ತೃತೀಯ ಸೋಪಾನ ಪರೀಕ್ಷಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ ಮಾನಸಿಕ ಸದೃಢತೆಗೆ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳು ಸದಾ ಇತರರಿಗೆ ಮಾದರಿಯಾಗಬೇಕು. ಇದಕ್ಕೆ ಪೂರಕವಾಗಿ ಅಗತ್ಯರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಹನಿನೀರು ಸದ್ಬಳಕೆಯಾಗಲಿ: ನೀರಿನ ಸಮಸ್ಯೆಗಳನ್ನು ಅರಿತು ಕೇಂದ್ರ ಸರ್ಕಾರವು ಜಲಶಕ್ತಿ ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಹನಿ ನೀರಿನ ಸದ್ಬಳಕೆ ಈ ಯೋಜನೆಯ ಉದ್ದೇಶವಾಗಿದ್ದು ಸಾರ್ವಜನಿಕರಿಗೆ ಇದರ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ.

ಆದ್ದ‌ರಿಂದ ಇದೊಂದು ಅಭಿಯಾನವಾಗಬೇಕು, ಹನಿ ನೀರಿನ ಮಹತ್ವದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು ಈ ನಿಟ್ಟಿನಲ್ಲಿ ಯುವಶಕ್ತಿ ಪಾತ್ರ ಪ್ರಮುಖವಾಗಿದೆ ಎಂದು ಸ್ಕೌಟ್‌ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳು. ಮುಂದಿನ ದೇಶದ ರಕ್ಷಣೆಯ ಹೊಣೆ ಹೊತ್ತ ಉದಯೋನ್ಮುಖ ಸೈನಿಕರಿದಂತೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಹೇಳಿದರು.

ಜಲ ಕ್ಷಾಮ ನಿಯಂತ್ರಿಸಿ: ಉಪವಿಭಾಗಾಧಿಕಾರಿ ಎಚ್‌.ಎಲ್‌. ನಾಗರಾಜ್‌ ಮಾತನಾಡಿ, ಜಲಕ್ಷಾಮವನ್ನು ನಿಯಂತ್ರಿಸದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಕುಸಿಯುತ್ತಿರುವ ಅಂತರ್ಜಲವನ್ನು ಮರುಪೂರಣ ಮಾಡದಿದ್ದಲ್ಲಿ ಮುಂಬರುವ ದಿನಗಳಲ್ಲಿ ನಾವೆಲ್ಲರೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಪರಿಸರ ಕಾಳಜಿ ಅಗತ್ಯ: ನಿಸರ್ಗಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಲ್ಲಿ ಜೀವ ಸಂಕುಲಗಳ ನಾಶ ಖಚಿತ. ಆದ್ದರಿಂದ ಪರಿಸರ ಕಾಳಜಿಯ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಜಲಸಂರಕ್ಷಣೆಯ ಕುರಿತು ಪರತಿಯೊಬ್ಬರೂ ಯೋಚಿಸಬೇಕಿದೆ ಹಾಗೂ ಮುಂದಿನ ಪೀಳಿಗೆಗಾಗಿ ಪರಿಸರವನ್ನು ಸುರಕ್ಷಿತ ಸ್ಥಿತಿಯಲ್ಲಿ ಮೀಸಲಿಡಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸ್ಕೌಟ್‌ ಮತ್ತು ಗೈಡ್ಸ್‌ ನ ವಾರ್ಷಿಕ ಯೋಜನೆಯ ಕಾರ್ಯಕ್ರಮದ ಪುಸ್ತಕ ಬಿಡುಗಡೆ ಮಾಡಲಾಯಿತು. ರಾಜ್ಯ ಮಟ್ಟದ ಪ್ರಮಾಣ ಪತ್ರವನ್ನು ಫ‌ಲಾನುಭವಿಗಳಿಗೆ ಜಿಲ್ಲಾಧಿಕಾರಿ ವಿತರಿಸಿದರು.

ಸ್ಕೌಟ್‌ ಮತ್ತು ಗೈಡ್ಸ್‌ ನ ಜಿಲ್ಲಾ ಮುಖ್ಯ ಆಯುಕ್ತ ವೈ.ಎಸ್‌. ವೀರಭದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಸುರೇಶ್‌ ಗುರೂಜಿ, ಜಂಟಿ ಕಾರ್ಯದರ್ಶಿ ಕಾಂಚನಾ ಜಿಲ್ಲಾ ಆಯುಕ್ತ ಪ್ರಕಾಶ್‌ ಎಸ್‌. ಯಾಜಿ, ಶಿಬಿರದ ನಾಯಕರಾದ ಎಂ.ಎಸ್‌.ಪ್ರಕಾಶ್‌, ವನಜಾಕ್ಷಿ, ಜಿಲ್ಲಾ ತರಬೇತಿ ಆಯುಕ್ತ ಕಾಮೇಶ್ವರಿ ಭಟ್‌, ಜಿಲ್ಲಾ ಸಂಘಟಕಿ ಪ್ರಿಯಾಂಕ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next