Advertisement
ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ನೂತನ ಕಟ್ಟಡ ಲೋಕಾರ್ಪಣೆ, ಕಾಳಿಕಾದೇವಿ ಮೂರ್ತಿಯ ಪುನಃ ಪ್ರಾಣ ಪ್ರತಿಷ್ಠಾಪನೆ ಹಾಗೂ ಗೋಪುರದ ಕಳಸಾರೋಹಣ ಕಾರ್ಯಕ್ರಮದ ಪ್ರಯುಕ್ತ ನಡೆದ ಧರ್ಮಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ನಮ್ಮ ಮಕ್ಕಳು ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಬಿಟ್ಟು, ಪಾಶ್ಚಾತ್ಯ ಸಂಸ್ಕೃತಿಯತ್ತ ಮುಖ ಮಾಡುತ್ತಿರುವುದರಿಂದ ಸಮಾಜ ಆತಂಕದ ಸ್ಥಿತಿಯಲ್ಲಿದೆ. ಈ ಕುರಿತು ಮಕ್ಕಳಲ್ಲಿಸಂಸ್ಕಾರವನ್ನು ತುಂಬುವ ಮನಸ್ಸು ತಂದೆ, ತಾಯಂದಿರಲ್ಲಿ ಜಾಗೃಗೊಳ್ಳಬೇಕಿದೆ.
ವಿಷಾದನೀಯವಾಗಿದೆ. ಇದು ಕೇವಲ ವಿಶ್ವಕರ್ಮ ಸಮುದಾಯಕ್ಕಲ್ಲದೇ, ಭಾರತೀಯ ಶಿಲ್ಪ ಪರಂಪರೆಗೆ ಮಾಡುತ್ತಿರುವ ಅವಮಾನವಾಗಿದೆ ಎಂದರು. ಶಿಲ್ಪಿಗಳು ಕೇವಲ ಒಂದು ಸಮುದಾಯಕ್ಕಾಗಿ ಶಿಲ್ಪಕಲೆಗಳನ್ನು ಮಾಡದೇ, ಜಗತ್ತಿನಲ್ಲಿ ಅತ್ಯಂತ ಸಾಮರಸ್ಯದಿಂದ ಬದುಕುತ್ತಿರುವ ದೇಶವಾದ ಭಾರತದಲ್ಲಿ ಧಾರ್ಮಿಕ ಅನೇಕ ಗುಡಿ, ಗೋಪುರಗಳನ್ನು, ಮಠ, ಮಂದಿರಗಳನ್ನು, ಮಸೀದಿ-ಚರ್ಚ್‌ಗಳನ್ನು, ಜೈನ ತೀರ್ಥಂಕರರ ಮೂರ್ತಿಗಳನ್ನು, ಅಜಂತಾ, ಯಲ್ಲೋರಾಗಳಲ್ಲಿನ ಶಿಲ್ಪಕಲೆಗಳನ್ನು ನೀಡಿದ ಸಮುದಾಯ ವಿಶ್ವಕರ್ಮ ಸಮುದಾಯವಾಗಿದೆ.ಆದರೆ, ಇಂದು ವಿಶ್ವಕರ್ಮ ಸಮುದಾಯ ಜಾಗೃತಗೊಳ್ಳಬೇಕಿದೆ.
Related Articles
Advertisement
ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಈಶ್ವರ ಅರ್ಕಸಾಲಿ ಧರ್ಮ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದನ್ವಯ ವಿವಿಧ ರೂಪದಲ್ಲಿ ದಾನ ನೀಡಿದ ಮಹನೀಯರನ್ನು ಶ್ರೀ ಕಾಳಿಕಾದೇವಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಗಣೇಶಪ್ಪ ಕಮ್ಮಾರ ತಾಲೂಕು ಅಧ್ಯಕ್ಷ ಪೂರ್ವಾಚಾರಿ ಬಡಿಗೇರ, ಡಾ.ಪದ್ಮಾವತಿ ಪತ್ತಾರ, ಮಹೇಂದ್ರ ಬಡಿಗೇರ, ಹನುಮಂತಗೌಡ ಮುದಿಗೌಡ್ರ, ಕು.ಸಮರ್ಥ ಮಹೇಶ ಪ್ರಸಾದ, ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಮುಖಂಡ ರಮಾಕಾಂತ ಶೆಂಡಗೆ ಸೇರಿದಂತೆಸಮಾಜ ಬಾಂಧವರು ಭಾಗವಹಿಸಿದ್ದರು.