Advertisement

Raipur; ಸಹೋದರಿಯರಿಬ್ಬರ ಮೇಲೆ ಗ್ಯಾಂಗ್ ರೇಪ್; ಹತ್ತು ಮಂದಿ ಬಂಧನ

06:22 PM Sep 01, 2023 | Vishnudas Patil |

ರಾಯ್‌ಪುರ: ಛತ್ತೀಸ್‌ಗಢದಲ್ಲಿ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಪುತ್ರ ಸೇರಿದಂತೆ ಹತ್ತು ಮಂದಿಯನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಸಹೋದರಿಯರು ಒಬ್ಬ ವ್ಯಕ್ತಿಯೊಂದಿಗೆ ರಕ್ಷಾಬಂಧನ ಹಬ್ಬವನ್ನು ಆಚರಿಸಿ ಹಿಂದಿರುಗುತ್ತಿದ್ದಾಗ ಭನ್ಸೋಜ್ ಗ್ರಾಮದ ಬಳಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ರಾಯ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಅಗರವಾಲ್ ಹೇಳಿದ್ದಾರೆ.

ಸಹೋದರಿಯರು 19 ವರ್ಷ ಮತ್ತು 16 ವರ್ಷ ವಯಸ್ಸಿನ ಸಂತ್ರಸ್ತೆಯರು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮಂದಿರ ಹಸೌದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬದುಕುಳಿದವರು ಮೋಟಾರ್ ಸೈಕಲ್‌ನಲ್ಲಿ ಸ್ನೇಹಿತನೊಂದಿಗೆ ತುಮಗಾಂವ್ ಗ್ರಾಮದಿಂದ ರಾಯ್‌ಪುರಕ್ಕೆ ಹಿಂತಿರುಗುತ್ತಿದ್ದಾಗ ಮೂವರು ಆರೋಪಿಗಳು ಭನ್ಸೋಜ್ ಬಳಿ ಅವರನ್ನು ಅಡ್ಡಗಟ್ಟಿ ಕೃತ್ಯ ಎಸಗಿದ್ದಾರೆ.

ದೂರಿನ ಪ್ರಕಾರ ಮೂವರೂ ನಗದು ಹಾಗೂ ಮೊಬೈಲ್ ದೋಚಿದ್ದು, ಇತರ ಏಳು ಆರೋಪಿಗಳು ಈ ಮಧ್ಯೆ ನಾಲ್ಕು ದ್ವಿಚಕ್ರವಾಹನಗಳಲ್ಲಿ ಸ್ಥಳಕ್ಕೆ ತಲುಪಿ ಕೃತ್ಯ ಎಸಗಿದ್ದಾರೆ. ಆರೋಪಿಗಳು ಇಬ್ಬರು ಸಹೋದರಿಯರನ್ನು ಮುಖ್ಯ ರಸ್ತೆಯಿಂದ ದೂರವಿರುವ ಪ್ರತ್ಯೇಕ ಸ್ಥಳಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಜತೆಗಿದ್ದ ವ್ಯಕ್ತಿಯನ್ನು ಥಳಿಸಿದ್ದಾರೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next