Advertisement

ಪೂರ್ವ ಮುಂಗಾರು ಬಿತ್ತನೆ ಕುಂಠಿತ

07:01 PM May 19, 2021 | Team Udayavani |

ತುಮಕೂರು:ಕಲ್ಪತರು ನಾಡಿನಲ್ಲಿ ಕೊರೊನಾರ್ಭಟದನಡುವೆಯೇ ರೈತರ ಬದುಕಿಗೆ ಆಶಾದಾಯಕವಾಗಿದ್ದಪೂರ್ವ ಮುಂಗಾರು ಮಳೆ ವಿಶೇಷವಾಗಿ ಭರಣಿ ಮಳೆಕೈಕೊಟ್ಟ ಹಿನ್ನೆಲೆ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಬೆಳೆಬಿತ್ತನೆಯಲ್ಲಿಕುಂಠಿತ ಕಂಡಿದೆ.

Advertisement

ಜಿಲ್ಲಾದ್ಯಂತ ಈ ವರ್ಷ ಪೂರ್ವ ಮುಂಗಾರುಮಳೆ ಆಶಾದಾಯಕವಾಗಿ ಬರುತ್ತದೆ ಎಂದು ರೈತರುನಿರೀಕ್ಷಿಸಿದ್ದರು. ಈ ಬಾರಿ ದ್ವಿದಳ ಧಾನ್ಯ ಉತ್ತಮವಾಗಿಬೆಳೆದು ಬಂಪರ್‌ ಬೆಳೆ ನಿರೀಕ್ಷಿಸಿದ್ದ ರೈತರಿಗೆ ನಿರಾಶೆಮೂಡಿಸಿದೆ. ಹೆಸರು, ತೊಗರಿ, ಅಲಸಂದೆ, ಎಳ್ಳು,ಉದ್ದು ಸೇರಿದಂತೆ ದ್ವಿದಳ ಧಾನ್ಯ ಬಿತ್ತನೆಗೆ ಭರಣಿ ಮಳೆಬರಬೇಕು.

ಮೇ 10ರಿಂದ 12ರವರೆಗೆ ಪೂರ್ವಮುಂಗಾರು ಬಿತ್ತನೆಗೆ ಅವಕಾಶವಿತ್ತು. ಬೀಜ ಬಿತ್ತನೆಮಾಡುವ ಸಮಯದಲ್ಲಿ ಪೂರ್ವ ಮುಂಗಾರು ಮಳೆಕೈಕೊಟ್ಟಿದ್ದು, ರೈತರನ್ನು ಆತಂಕಕ್ಕಿಡು ಮಾಡಿದೆ.ಪೂರ್ವ ಮುಂಗಾರು ಮಳೆ ಈ ಬಾರಿ ಜಿಲ್ಲಾದ್ಯಂತವಾಡಿಕೆ ಮಳೆಗಿಂತ ಕಡಿಮೆ ಮಳೆ ಬಂದಿದ್ದು,ಆರಂಭದಲ್ಲಿ ಮಳೆ ಅಧಿಕವಾಗಿ ಸುರಿದ ಪರಿಣಾಮರೈತರು ಹರ್ಷದಿಂದ ದ್ವಿದಳ ಧಾನ್ಯಗಳಾದ ಹೆಸರು,ಉದ್ದು, ಅಲಸಂದೆ, ಎಳ್ಳು ಮುಂತಾದ ಬೆಳೆಗಳನ್ನುಬೆಳೆಯಲು ಭೂಮಿ ಹಸನು ಮಾಡಿ ಬೀಜ ಬಿತ್ತಲುಸಿದ್ಧತೆ ಮಾಡಿಕೊಂಡಿದ್ದರು. ಆರಂಭದಲ್ಲಿ ಏಪ್ರಿಲ್‌,ಮೇ ತಿಂಗಳ ಆರಂಭದಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಬರುವ ಲಕ್ಷಣಗಳು ಗೋಚರವಾಯಿತು. ಅದಕ್ಕಾಗಿರೈತರು ಬಿತ್ತನೆಕಾರ್ಯದಲ್ಲಿ ತಲ್ಲೀನರಾದರು.

ನಿರೀಕ್ಷೆಯಷ್ಟು ಬಿತ್ತನೆ ಆಗಿಲ್ಲ: ಆದರೆ, ಜಿಲ್ಲೆಯಲ್ಲಿ ಮೇಮಾಹೆಯಲ್ಲಿ ವಾಡಿಕೆ ಮಳೆ 37.4 ಮಿ.ಮೀ.ಮಳೆಆಗಬೇಕಾಗಿತ್ತು. 48.3 ಮಿ.ಮೀ ಮಳೆಯಾಗಿದೆ.ಆದರೆ, ಹೆಸರು ಬಿತ್ತನೆ ಮಾಡಬೇಕು ಎಂದು ಭೂಮಿಹಸನು ಮಾಡಿಕೊಂಡಾಗ ಭರಣಿ ಮಳೆ ಬರಲಿಲ್ಲ.ಜಿಲ್ಲೆಯಲ್ಲಿ 13 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಹೊಂದಿದ್ದು, 7,230 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರಬಿತ್ತನೆಯಾಗಿದೆ. ಇದರಲ್ಲಿ ಹೆಸರು 6,495 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಉದ್ದು 216ಹೆಕ್ಟೇರ್‌, ಅಲಸಂದೆ 322 ಹಾಗೂ ಎಳ್ಳು 100 ಹೆಕ್ಟೇರ್‌ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಆದರೆ,ನಿರೀಕ್ಷೆಯಷ್ಟು ಬಿತ್ತನೆ ಜಿಲ್ಲೆಯಲ್ಲಿ ಆಗಿಲ್ಲ.

ಚಿ.ನಿ. ಪುರುಷೋತ್ತಮ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next