Advertisement
ಅಲಸಂಡೆಕಾಳು ವಡೆಬೇಕಾಗುವ ಸಾಮಗ್ರಿ: 1 ಕಪ್ ಅಲಸಂಡೆಕಾಳು, 1/2 ಕಪ್ ಈರುಳ್ಳಿ ಚೂರು, 2 ಚಮಚ ಕೊತ್ತಂಬರಿಸೊಪ್ಪು , 1 ಎಸಳು ಕರಿಬೇವು, 1/2 ಚಮಚ ಜೀರಿಗೆ, 2-3 ಹಸಿಮೆಣಸು, ಕರಿಯಲು ಬೇಕಾದಷ್ಟು ಎಣ್ಣೆ , ಉಪ್ಪು ರುಚಿಗೆ ತಕ್ಕಷ್ಟು.
ಬೇಕಾಗುವ ಸಾಮಗ್ರಿ: 1 ಕಪ್ ಚಿರೋಟಿ ರವೆ, 1 ಕಪ್ ಮೊಸರು, 1/4 ಕಪ್ ಈರುಳ್ಳಿ ಚೂರು, 1 ಎಸಳು ಕರಿಬೇವು, 2-3 ಹಸಿಮೆಣಸು, 2 ಚಮಚ ಕೊತ್ತಂಬರಿ ಸೊಪ್ಪು , ಚಿಟಿಕೆ ಇಂಗು, 1/4 ಚಮಚ ಶುಂಠಿ ಚೂರು, ಉಪ್ಪು ರುಚಿಗೆ ತಕ್ಕಷ್ಟು , ಕರಿಯಲು ಬೇಕಾದಷ್ಟು ಎಣ್ಣೆ.
Related Articles
Advertisement
ಗೆಣಸು ಪೋಡಿಬೇಕಾಗುವ ಸಾಮಗ್ರಿ: 1 ಕಪ್ ಉರುಟಾಗಿ ಹೆಚ್ಚಿದ ಗೆಣಸು, ಚಿಟಿಕೆ ಇಂಗು, 1/2 ಕಪ್ ಖಾರದ ಪುಡಿ, 1 ಕಪ್ ಕಪ್ ಅಕ್ಕಿಹಿಟ್ಟು , ಕರಿಯಲು ಬೇಕಾದಷ್ಟು ಎಣ್ಣೆ , ಉಪ್ಪು ರುಚಿಗೆ ತಕ್ಕಷ್ಟು. ತಯಾರಿಸುವ ವಿಧಾನ: ಅಕ್ಕಿಹಿಟ್ಟು, ಖಾರದ ಪುಡಿ, ಇಂಗು, ಉಪ್ಪು , ಸ್ವಲ್ಪ ನೀರು ಹಾಕಿ ಪೋಡಿ ಹಿಟ್ಟಿನ ಹದಕ್ಕೆ ಕಲಸಿ. ಗೆಣಸನ್ನು ತೊಳೆದು ತೆಳ್ಳಗೆ ಉರುಟಾಗಿ ತುಂಡು ಮಾಡಿ. ನಂತರ ಮಾಡಿಟ್ಟ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕರಿದು ತೆಗೆಯಿರಿ. ಈಗ ರುಚಿಯಾದ ಪೋಡಿಯನ್ನು ಸವಿದು ನೋಡಿ. ಸ್ವೀಟ್‌ಕಾರ್ನ್ ಅಂಬೊಡೆ
ಬೇಕಾಗುವ ಸಾಮಗ್ರಿ: 1 ಕಪ್ ಸಿಹಿ ಜೋಳ, 1-2 ಹಸಿಮೆಣಸು, 1 ಕಪ್ ಕಡಲೆಹಿಟ್ಟು , 2 ಚಮಚ ಅಕ್ಕಿಹಿಟ್ಟು , 1/4 ಕಪ್ ತೆಂಗಿನತುರಿ, 1 ಚಮಚ ಕೊತ್ತಂಬರಿಸೊಪ್ಪು , 1/4 ಚಮಚ ಶುಂಠಿ ಪೇಸ್ಟ್ , ರುಚಿಗೆ ತಕ್ಕಷ್ಟು ಉಪ್ಪು , ಕರಿಯಲು ಬೇಕಾದಷ್ಟು ಎಣ್ಣೆ. ತಯಾರಿಸುವ ವಿಧಾನ: ಸಿಹಿ ಜೋಳ, ಹಸಿಮೆಣಸು ಮಿಕ್ಸಿಗೆ ಹಾಕಿ ತರಿಯಾಗಿ ರುಬ್ಬಿ. ನಂತರ ಕಡಲೆಹಿಟ್ಟು , ಅಕ್ಕಿಹಿಟ್ಟು, ತೆಂಗಿನತುರಿ, ಕೊತ್ತಂಬರಿ ಸೊಪ್ಪು , ಶುಂಠಿ ಪೇಸ್ಟ್ , ಉಪ್ಪು ಸೇರಿಸಿ ಸರಿಯಾಗಿ ಬೆರೆಸಿ. ನಂತರ ಉಂಡೆ ಮಾಡಿ. ನಂತರ ಅಂಬೊಡೆಯಂತೆ ಮಾಡಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಗರಿ ಗರಿಯಾದ ಅಂಬೊಡೆ ನಮ್ಮ ಬಾಯಿ ರುಚಿ ಹೆಚ್ಚಿಸಲು ಸಿದ್ಧ. ಮದ್ದೂರು ವಡೆ
ಬೇಕಾಗುವ ಸಾಮಗ್ರಿ: 1 ಕಪ್ ಅಕ್ಕಿಹಿಟ್ಟು , 1/4 ಕಪ್ ಚಿರೋಟಿ ರವೆ, ತರಿಯಾಗಿ ಪುಡಿಮಾಡಿದ 2 ಚಮಚ ನೆಲಗಡಲೆ ಬೀಜ, 1/4 ಚಮಚ ಓಮ, ಚಿಟಿಕೆ ಇಂಗು, 1-2 ಹಸಿಮೆಣಸು, 1/4 ಕಪ್ ಈರುಳ್ಳಿ ಚೂರು, 1 ಚಮಚ ಕೊತ್ತಂಬರಿಸೊಪ್ಪು , ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ: ಬೌಲ್‌ಗೆ ಅಕ್ಕಿಹಿಟ್ಟು, ಚಿರೋಟಿ ರವೆ, ಹುರಿದು ತರಿಯಾಗಿ ಮಾಡಿದ ನೆಲಗಡಲೆ ಬೀಜ, ಉಪ್ಪು , ಓಮ, ಹಸಿಮೆಣಸು, ಇಂಗು, ನೀರುಳ್ಳಿ ಚೂರು, ಕೊತ್ತಂಬರಿ ಸೊಪ್ಪು , ಸ್ವಲ್ಪ ಬಿಸಿ ಮಾಡಿದ 3-4 ಚಮಚ ಎಣ್ಣೆ , ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿ. ನಂತರ ಉಂಡೆ ಮಾಡಿ ವಡೆಯಂತೆ ತಟ್ಟಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ರುಚಿಯಾದ ಮದ್ದೂರು ವಡೆಯನ್ನು ಸವಿಯಿರಿ. ಸರಸ್ವತಿ ಎಸ್. ಭಟ್