Advertisement

ಮುಂಬೈನಲ್ಲಿ ಈಶಾನ್ಯ ಮಾರುತದ ಅಬ್ಬರ : ಭೂಕುಸಿತ, ಕೆಲವೆಡೆ ಅಸ್ತವ್ಯಸ್ಥಗೊಂಡ ರಸ್ತೆ ಸಂಚಾರ

03:15 PM Aug 31, 2021 | Team Udayavani |

ಮಹಾರಾಷ್ಟ್ರ : ಈಶಾನ್ಯ ಮಾರುತಗಳ ಕಾರಣದಿಂದಾಗಿ ಹಲವು ದಿನಗಳ ನಂತರ ವಾಣಿಜ್ಯ ನಗರಿ ಮುಂಬೈ ನಲ್ಲಿ ಭಾರಿ ಮಳೆ ಆಗಿದೆ. ಮಳೆಯಿಂದಾಗಿ ಮುಂಬೈ ನ ತಗ್ಗು ಪ್ರದೇಶಗಳು ಮುಳುಗಿ ಹೋಗಿವೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

Advertisement

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಬೈನ ಅಸಲ್ಪಾ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದ್ದು, ಹಲವರಿಗೆ ಗಾಯಗಳಾಗಿವೆ,. ಇನ್ನು, ಅಂಧೇರಿ, ಪರೆಲ್, ಭಾಂದೂಪ್ ಮತ್ತು ಇತರ ಕೆಲವು ಪ್ರದೇಶಗಳು ಭಾರಿ ಮಳೆಯಿಂದಾಗಿ ಮುಳುಗಿ ಹೋಗಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಗೃಹ ಸಚಿವರ ಭಾಷಣದ ವೇಳೆ ಕುಸಿದು ಬಿದ್ದ ಪೊಲೀಸ್ ಸಿಬ್ಬಂದಿ: ಮಾನವೀಯತೆ ಮೆರೆದ ಎಸ್ ಪಿ

ಮಳೆಯಿಂದಾಗಿ ಮುಂಬೈ ನ ಬಹುತೇಕ ನಗರಗಳಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ಹಲವರು ಮಾರ್ಗ ಮಧ್ಯೆ ಸಿಲುಕಿಕೊಂಡಿದ್ದಾರೆ ಎಂದು ಸುದ್ದಿ ಮೂಲಗಳು ಮಾಹತಿ ನೀಡಿವೆ.

ಈ ಬಗ್ಗೆ ಮಾಹಿತಿ ನೀಡಿದ ಭಾರತೀಯ ಹವಾಮಾನ ಇಲಾಖೆ (ಐಎಂಡಿ), ಮುಂಬೈ ಮಹಾನಗರ, ನವಿ ಮುಂಬೈ, ಥಾಣೆ  ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಿನ್ನೆ( ಸೋಮವಾರ, ಆಗಸ್ಟ್ 30) ಇಡೀ ರಾತ್ರಿ 20 ಮಿಮೀ ನಿಂದ 70 ಮಿಮೀ ಮಳೆಯಾಗಿದೆ ಎಂದು ತಿಳಿಸಿದೆ.

Advertisement

ಇನ್ನು, ಇಂದು (ಆಗಸ್ಟ್ 31, ಮಂಗಳವಾರ) ಬೆಳಿಗ್ಗೆ 8.30ರವರೆಗಿನ ಮಳೆ ದಾಖಲೆಯ ಪ್ರಕಾರ, 29.8 ಮಿಮೀ ಮಳೆಯಾಗಿದೆ ಎಂದು ದಕ್ಷಿಣ ಮುಂಬೈ ಭಾಗದಲ್ಲಿರುವ ಕೊಲಾಬಾ ವೀಕ್ಷಣಾಲಯ ಮಾಹಿತಿ ನೀಡಿದೆ. ಸಾಂತಾಕ್ರೂಜ್‌ ಪ್ರದೇಶದಲ್ಲಿರುವ ಹವಾಮಾನ ಇಲಾಖೆಯ ವೀಕ್ಷಣಾಲಯದಲ್ಲಿ 49 ಮಿಮೀ ಮಳೆಯಾಗಿರುವುದಾಗಿ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ : ಗುರುನಾರಾಯಣ “ಯಕ್ಷಗಾನ ಕಲಾ ಪ್ರಶಸ್ತಿ – 2021′ ಗೆ ಜಬ್ಟಾರ್‌ ಸಮೋ ಆಯ್ಕೆ

Advertisement

Udayavani is now on Telegram. Click here to join our channel and stay updated with the latest news.

Next