Advertisement

ಎಇಇಗಳ ಹೆಗಲಿಗೆ ಮಳೆ ಅನಾಹುತ ನಿರ್ವಹಣೆ ಹೊಣೆ

10:55 AM May 10, 2019 | pallavi |

ಬೆಂಗಳೂರು: ನಗರದಲ್ಲಿ ಮಳೆಯಿಂದ ಉಂಟಾಗುವ ಅನಾಹುತಗಳನ್ನು ತಪ್ಪಿಸುವ ಹೊಣೆ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರುಗಳದ್ದಾಗಿದೆ. ಈ ಸಂಬಂಧ 24 ತಂಡಗಳನ್ನು ರಚಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ತಿಳಿಸಿದರು.

Advertisement

ಮಳೆಗಾಲ ಎದುರಿಸುವುದಕ್ಕೆ ಈ ವರ್ಷ ಹಲವಾರು ನೂತನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಖ್ಯವಾಗಿ ರಾಜಕಾಲುವೆ ಹೂಳು ತೆಗೆಯುವುದಕ್ಕೆ ವಾರ್ಷಿಕ ಗುತ್ತಿಗೆ ನೀಡಲಾಗಿದೆ. ನಗರದಲ್ಲಿ 1,900 ಕಿ.ಮೀ ಮುಖ್ಯರಸ್ತೆ ಇದ್ದು, 24 ಸಹಾಯಕ ಎಂಜಿನಿಯರ್‌ಗಳಿಗೆ ಪ್ರತ್ಯೇಕವಾಗಿ ಒಂದು ತಂಡ ರಚನೆ ಮಾಡಿಕೊಂಡು ರಸ್ತೆ ನಿರ್ವಹಣೆಗೆ ಸೂಚನೆ ನೀಡಲಾಗಿದೆ. ಪ್ರತಿ ಎಂಜಿನಿಯರ್‌ಗೆ ಸುಮಾರು 50 ಕಿ.ಮೀ. ನಂತೆ ಹಂಚಿಕೆ ಮಾಡಲಾಗುವುದು. ಆಯಾ ವ್ಯಾಪ್ತಿಯ ರಸ್ತೆಯಲ್ಲಿನ ಹೂಳು ಮತ್ತು ಕಸ ತೆಗೆಯುವುದು, ಗುಂಡಿ ಮುಚ್ಚುವ ಜವಾಬ್ದಾರಿಯನ್ನು ಈ ತಂಡಗಳು ನಿರ್ವಹಿಸಲಿವೆ. ಯಾವುದೇ ಸಮಸ್ಯೆ ಉಂಟಾದರೂ ಸಂಬಂದಪಟ್ಟ ಎಂಜಿನಿಯರ್‌ ಅನ್ನು ಹೊಣೆ ಮಾಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಈ ಮೊದಲು ಮಳೆ ಅನಾಹುತಗಳನ್ನು ವಾರ್ಡ್‌ ಎಂಜಿನಿಯರ್‌ಗಳು ನೋಡುತ್ತಿದ್ದರು. ಆದರೆ, ಆ ಎಂಜಿನಿಯರ್‌ಗಳ ವ್ಯಾಪ್ತಿ ಚಿಕ್ಕದಾಗಿದ್ದರಿಂದ ಅವರೆಲ್ಲಾ ಇತರೆ ವಾರ್ಡ್‌ಗಳತ್ತ ನೋಡುತ್ತಿರಲಿಲ್ಲ. ಹಾಗಾಗಿ, ಬೃಹತ್‌ ಕಾಮಗಾರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಈ ಜವಾಬ್ದಾರಿ ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಶೀಘ್ರ ಮತ್ತಷ್ಟು ಕಸ ಗುಡಿಸುವ ಯಂತ್ರ: ಪ್ರತಿ ಎಂಜಿನಿಯರ್‌ಗೆ ಶೀಘ್ರದಲ್ಲೇ ಒಂದೊಂದು ಕಸ ಗುಡಿಸುವ ಯಂತ್ರ ನೀಡಲಾಗುವುದು. ಸದ್ಯ ಪಾಲಿಕೆಯಲ್ಲಿ 9 ಕಸ ಗುಡಿಸುವ ಯಂತ್ರಗಳಿದ್ದು, 17 ಯಂತ್ರಗಳ ಖರೀದಿಗೆ ಕ್ರಮ ಕೈಗೊಳ್ಳಲಾಗಿದ್ದು, ತಂಡದಲ್ಲಿರುವ ತಲಾ ಹತ್ತು ಮಂದಿ ಸಿಬ್ಬಂದಿ ರಸ್ತೆ ನಿರ್ವಹಣೆ ಮಾಡಲಿದ್ದಾರೆ ಎಂದ ಅವರು, ಈಗಾಗಲೇ ಧರೆಗುರುಳಿದ ಮರಗಳ ತೆರವು ಕಾರ್ಯ ಪೂರ್ಣಗೊಂಡಿದೆ. ಬೇರು ಸಡಿಲಗೊಂಡ ಮರಗಳ ಪರೀಕ್ಷೆ ಕಾರ್ಯ ಕೂಡ ನಡೆದಿದೆ ಎಂದು ಹೇಳಿದರು.

ಬಿದ್ದ ಮಗರಗಳ ತೆರವು ಮಾಡುವುದಕ್ಕೆ ಒಟ್ಟು 21 ತಂಡಗಳಿದ್ದು, ಇನ್ನು 7 ತಂಡಗಳ ಅವಶ್ಯಕವಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದಿಂದ ಮನವಿ ಬಂದಿದೆ. ಹೆಚ್ಚುವರಿ ತಂಡ ನೇಮಕಕ್ಕೆ ಅನುಮತಿ ನೀಡಲಾಗಿದೆ. ಇದರಿಂದ 28 ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದರಂತೆ ತಂಡ ಕಾರ್ಯನಿರ್ವಹಿಸಲಿವೆ. ಅಗತ್ಯಬಿದ್ದರೆ ಒಂದು ವಿಧಾನ‌ಸಭಾ ಕ್ಷೇತ್ರದ ತಂಡವನ್ನು ಮತ್ತೂಂದು ಕ್ಷೇತ್ರಕ್ಕೆ ಬಳಸಿಕೊಳ್ಳಲು ಅಧಿಕಾರಿಗಳಿಗೆ ಅವಕಾಶ ಇರುತ್ತದೆ ಎಂದರು.

Advertisement

ನಗರದಲ್ಲಿ ಮೇ 7ರಂದು ಸುರಿದ ಮಳೆಯಿಂದಾಗಿ ಸುಮಾರು 70 ಮರಳಗಳು ಧರೆಗುರುಳಿದ್ದು, 160 ಕೊಂಬೆಗಳು ನೆಲಕಚ್ಚಿವೆ. ಅಲ್ಲಲ್ಲಿ ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು, ಬಿಟಿಎಂ ಮತ್ತು ಎಚ್ಎಸ್‌ಆರ್‌ ಬಡಾವOೆಗ‌ಳಲ್ಲಿ ಅತಿ ಹೆಚ್ಚು ಮರಗಳು ಉರುಳಿವೆ. ಈ ಹಿನ್ನೆಲೆಯಲ್ಲಿ ಮಳೆಯಿಂದಾಗುವ ಅವಘಡಗಳನ್ನು ನಿಯಂತ್ರಿಸಲು 24 ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲಿ ತಲಾ ಹತ್ತು ಜನ ಕಾರ್ಮಿಕರಿದ್ದು, ಮಳೆ ಅನಾಹುತಗಳು ಸಂಭವಿಸಿದ ತಕ್ಷಣ ಕಾರ್ಯಪ್ರವೃತ್ತರಾಗಲಿದ್ದಾರೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next