Advertisement

ಮಳೆಹಾನಿ: ಸೂಕ್ತ ಪರಿಹಾರಕ್ಕೆ ಒತ್ತಾಯ

02:51 PM Jan 17, 2021 | Team Udayavani |

ಚಿಕ್ಕಮಗಳೂರು: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಕಾಫಿ, ಭತ್ತ, ರಾಗಿ ಹಾಗೂ ತರಕಾರಿ ಬೆಳೆ ಹಾನಿಗೊಂಡು ಕೋಟ್ಯಂತರ ರೂ. ನಷ್ಟ ಸಂಭವಿಸಿದ್ದು, ಸಮೀಕ್ಷೆ ನಡೆಸಿ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಪ್ರಮುಖರು ಒತ್ತಾಯಿಸಿದ್ದಾರೆ.

Advertisement

ಈ ಸಂಬಂಧ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ| ಅಂಶುಮಂತ್‌ ನೇತೃತ್ವದಲ್ಲಿ ವಿವಿಧ ಮುಖಂಡರನ್ನು ಒಳಗೊಂಡ ನಿಯೋಗ ಜಿಲ್ಲಾ ಧಿಕಾರಿ ಡಾ| ಬಗಾದಿ ಗೌತಮ್‌ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಸುಮಾರು 70 ಸಾವಿರ ಹೆಕ್ಟೇರ್‌ನಲ್ಲಿ ಕಾಫಿ ಬೆಳೆ ಇದ್ದು, 3 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳು ಅವಲಂಬಿತವಾಗಿವೆ. ಸಹಸ್ರಾರು ಕೋಟಿ ರೂ. ವಿದೇಶಿ ವಿನಿಮಯವನ್ನು ಕಾಫಿ ಉದ್ಯಮ ತಂದುಕೊಡುತ್ತಿದೆ.

ಜೊತೆಗೆ ಪರಿಸರ ಸಂರಕ್ಷಣೆಯಲ್ಲೂ ಪ್ರಮುಖ ಪಾತ್ರವನ್ನು ಕಾಫಿ ಬೆಳೆ ವಹಿಸಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿ ಇಂದು ವಾತಾವರಣ ವೈಪರೀತ್ಯ ಹಾಗೂ ಅಕಾಲಿಕ ಮಳೆಯಿಂದ ಹಿಂದೆಂದೂ ಕಾಣದಷ್ಟು ಹಾನಿಗೆ ಒಳಗಾಗಿದೆ ಎಂದು ತಿಳಿಸಿದ್ದಾರೆ.

ಉದುರಿರುವ ಕಾಫಿ ಹಣ್ಣು ಹೆಕ್ಕಲು ಕಾರ್ಮಿಕರ ಕೊರತೆ ತೀವ್ರವಾಗಿದೆ. ಈಗ ಅಂದಾಜು ಮಾಡಿರುವ ಪ್ರಕಾರ ಸುಮಾರು 10,000 ಕಾರ್ಮಿಕರ ಅಗತ್ಯವಿದೆ. ವಾಸ್ತವ ಸಂಗತಿಗಳನ್ನು ಸರ್ಕಾರಕ್ಕೆ ತಿಳಿಸುವ ಮೂಲಕ ನರೇಗಾ ಯೋಜನೆ ಮೂಲಕ ಕಾರ್ಮಿಕರನ್ನು ತೋಟಗಳಿಗೆ ಒದಗಿಸಬೇಕು. ಜೊತೆಗೆ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರ ಕೊಡಿಸಿಕೊಡಬೇಕೆಂದು ಒತ್ತಾಯಿಸಿದರು.

ನರಸಿಂಹರಾಜಪುರ, ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳಲ್ಲಿ 2020ನೇ ನ.30 ರಿಂದ ಡಿ.20 ರವರೆಗೆ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವುದಾಗಿ ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿತ್ತು. ಆದರೆ, ಇಲ್ಲಿಯವರೆಗೂ ಖರೀದಿ ಕೇಂದ್ರ ತೆರೆದಿಲ್ಲ. ಈಗಾಗಲೇ ಕಟಾವು ಮಾಡಿದ ಭತ್ತವನ್ನು ರೈತರು ಬೆಂಬಲಬೆಲೆ 1886 ರೂ.ಗಳಿಗೆ ಬದಲಾಗಿ ಖಾಸಗಿಯವರಿಗೆ ರೂ.1,200 ಗಳಿಗೆ ಮಾರಾಟ ಮಾಡುತ್ತಿರುವುದರಲ್ಲೂ ನಷ್ಟ ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ.

Advertisement

ಜಿಲ್ಲೆಯ ಬಯಲು ಸೀಮೆ ಕಡೂರು ತಾಲೂಕು, ಚಿಕ್ಕಮಗಳೂರು ತಾಲೂಕಿನ ಅಂಬಳೆ, ಲಕ್ಯಾ ಹೋಬಳಿ, ಅಜ್ಜಂಪುರ ತಾಲೂಕಿನಲ್ಲಿ ರಾಗಿ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ರಾಗಿ ಅಕಾಲಿಕ ಮಳೆಗೆ ಸಿಕ್ಕಿ ಹಾನಿಗೆ ಒಳಗಾಗಿದೆ. ಈ ಪ್ರದೇಶಗಳಲ್ಲಿ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕೆಂದು ತಿಳಿಸಿದರು.

ಇದನ್ನೂ ಓದಿ:ನಂದಗಡ ಎಪಿಎಂಸಿ ಅಧ್ಯಕ್ಷರ ಮೇಲೆ ಅವಿಶ್ವಾಸ ಅಸ್ತ್ರ?

ಕೆಪಿಸಿಸಿ ಮಾಧ್ಯಮ ಘಟಕ ಅಧ್ಯಕ್ಷ ಹಾಗೂ ಮಾಜಿ ಸಭಾಪತಿ ಡಾ|ಬಿ.ಎಲ್‌. ಶಂಕರ್‌, ವಿಧಾನ ಪರಿಷತ್‌ ಮಾಜಿ ಶಾಸಕಿ ಎ.ವಿ. ಗಾಯತ್ರಿ ಶಾಂತೇಗೌಡ, ಮಾಜಿ ಅಧ್ಯಕ್ಷ ಎಂ.ಎಲ್‌. ಮೂರ್ತಿ, ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್‌, ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ, ಪದವೀಧರ ವಿಭಾಗದ ಅಧ್ಯಕ್ಷ ಪವನ್‌, ಕಾರ್ಯದರ್ಶಿ ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next