Advertisement

ಉಡುಪಿ ಜಿಲ್ಲೆಯಲ್ಲಿ ಮಳೆ ಚುರುಕು

02:18 AM Jul 07, 2020 | Sriram |

ಉಡುಪಿ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ.

Advertisement

ಸೋಮವಾರ ಬೆಳಗ್ಗೆ 8.30ರ ವರೆಗಿನ ಅದರ ಹಿಂದಿನ 24 ತಾಸುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 19 ಮಿ. ಮೀ. ಮಳೆಯಾಗಿದೆ.

ರವಿವಾರ ತಡರಾತ್ರಿ ಸುರಿದ ಮಳೆಗೆ ಕಾಪು ತಾಲೂಕಿನ ಪಡುವಂತಿಲ ನಿವಾಸಿ ಜಯಂತಿ ಅವರ ಮನೆಗೆ ಹಾನಿಯಾಗಿದ್ದು ಸುಮಾರು ರೂ. 10 ಸಾವಿರ ನಷ್ಟ ಸಂಭವಿಸಿದೆ.

ಇದೇ ಗ್ರಾಮದ ನಿವಾಸಿ ಗಳಾದ ಚಂದ್ರಾವತಿ ಮತ್ತು ಸುಶೀಲಾ ಅವರ ಮನೆಗಳಿಗೂ ಹಾನಿಯಾಗಿ ತಲಾ 5 ಸಾವಿರ ರೂ.ಗಳಷ್ಟು ನಷ್ಟ ಉಂಟಾಗಿದೆ. ಹೆಬ್ರಿ ತಾಲೂಕಿನ ಶೇಡಿಮನೆ ನಿವಾಸಿ ಆಶಾ ಅವರ ಮನೆಗೆ ಹಾನಿಯಾಗಿ ಅಂದಾಜು ರೂ.25 ಸಾವಿರದಷ್ಟು ನಷ್ಟ ಆಗಿದೆ.

ನಗರದಲ್ಲಿ ಸೋಮವಾರ ಬೆಳಗ್ಗೆ ಹಗುರ ವಾಗಿ ಮಳೆ ಸುರಿದಿತ್ತು. ಅನಂತ ರದಲ್ಲಿ ಮಳೆ ಬಿರುಸು ಪಡೆದುಕೊಂಡಿತ್ತು. ಸಂಜೆ ವೇಳೆಗೆ ಉತ್ತಮ ಮಳೆಯಾಗಿದೆ. ಮಣಿಪಾಲ, ಉದ್ಯಾವರ, ಮಲ್ಪೆ, ಪರ್ಕಳ, ದೊಡ್ಡಣಗುಡ್ಡೆ ಸಹಿತ ವಿವಿಧೆಡೆ ಮಳೆ ಯಾಗಿದೆ. ಹಲವೆಡೆ ಮಳೆ ನೀರು ರಸೆ, ಇಳಿಜಾರು ಪ್ರದೇಶಕ್ಕೆ ಹರಿದು ಸಮಸ್ಯೆ ಸೃಷ್ಟಿಸಿತು.

Advertisement

ಮಳೆಗೆ ಶಾಲಾ ಕಟ್ಟಡದ ಗೋಡೆ ಕುಸಿತ
ಉಡುಪಿಯ ಶಿರಿಬೀಡು ಸರಸ್ವತಿ ಹಿ.ಪ್ರಾ. ಶಾಲಾ ಕಟ್ಟಡದ ಒಂದು ಭಾಗ ರವಿವಾರ ರಾತ್ರಿ ಸುರಿದ ಮಳೆಗೆ ಕುಸಿದು ಬಿದ್ದಿದೆ.

ಹಳೆಯದಾದ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ಪ್ರತಿ ಮಳೆಗಾಲ ಕಟ್ಟಡವನ್ನು ದುರಸ್ತಿ ಮಾಡಿಕೊಂಡು ಬರಲಾಗಿತ್ತು. ಈ ಬಾರಿಲಾಕ್‌ಡೌನ್‌ನಿಂದಾಗಿ ಶಾಲೆ ಸುದೀರ್ಘ‌ ಅವಧಿಯಿಂದ ಮುಚ್ಚಿದೆ. ಶಾಲಾ ಕಟ್ಟಡದ ಮೇಲ್ಛಾವಣಿ ಶಿಥಿಲಗೊಂಡು ಸೋರಿಕೆಯಾಗಿ ನೀರು ಒಳ ಪ್ರವೇಶಿಸಿದೆ. ಅದು ಗೋಡೆ ಮೇಲೆ ಹರಿದು ಗೋಡೆ ಜರಿದು ಬಿದ್ದಿದೆ. 2ನೇ ಮತ್ತು 7ನೇ ತರಗತಿ ಕೊಠಡಿಯಿರುವ ಭಾಗದ ಗೋಡೆ ಜರಿದಿದೆ.

ಕುಂದಾಪುರ ತಾಲೂಕಿನಲ್ಲಿ ಮಳೆ
ಕುಂದಾಪುರ: ಬಿಸಿಲಿನ ವಾತಾವರಣ ಇತ್ತು. ಸೋಮವಾರ ಬೆಳಗ್ಗೆವರೆಗೆ ಬಿದ್ದ ಮಳೆ ವಿವರ ಮಿ.ಮೀ.ಗಳಲ್ಲಿ ಹೀಗಿದೆ: ಕಾಪು 2, ಆಲೂರು 27, ನಾಡ 12, ನಾವುಂದ 11, ಕಾಳಾವರ 12, ಶಂಕರ ನಾರಾಯಣ 24.

Advertisement

Udayavani is now on Telegram. Click here to join our channel and stay updated with the latest news.

Next