ಬೆಂಗಳೂರು: ನಗರದಲ್ಲಿ ಸತತ ಎರಡನೇ ದಿನವೂ ಮಳೆ ಅಬ್ಬರ ಮುಂದುವರಿದಿದ್ದು, ಭಾನುವಾರ ಕೂಡ ಇದೇ ವಾತಾವರಣ ಇರಲಿದೆ. ಶನಿವಾರ ಸಂಜೆ 4ರ ಸುಮಾರಿಗೆ ಶುರುವಾದ ಮಳೆ ಒಂದು ತಾಸಿಗೂ ಹೆಚ್ಚು ಕಾಲ ಸುರಿಯಿತು.
ಇದರಿಂದ ನಗರದ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳು ಜಲಾವೃತಗೊಂಡವು. ಇದರಿಂದ ವಾಹನಗಳ ಸವಾರರರು ಪರದಾಡಿದರು. ಭಾನುವಾರ ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರಕ್ಕೆ ಹೋಲಿಸಿದರೆ, ಮಳೆ ಅಬ್ಬರ ಕೊಂಚ ಕಡಿಮೆ ಇತ್ತು. ಭಾನುವಾರ ಮತ್ತಷ್ಟು ಇಳಿಮುಖ ಆಗಲಿದೆ. ಆದರೆ, ಚದುರಿದಂತೆ ಆಗಲಿದೆ. ಈ ಮಧ್ಯೆ ಹವಾಮಾನ ಇಲಾಖೆಯ ಮಳೆ ಮಾಪನದಲ್ಲಿ 16 ಮಿ.ಮೀ. ದಾಖಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನಗರದ ವಿವಿಧೆಡೆ ಅಳವಡಿಸಿದ ಮಳೆ ಮಾಪನಗಳಲ್ಲಿ ಶನಿವಾರ ಗರಿಷ್ಠ 52 ಮಿ.ಮೀ. ಮಳೆ ದಾಖಲಾಗಿದೆ. ಅದರಲ್ಲೂ ಕೋರ್ ಏರಿಯಾದಲ್ಲೂ ಮಳೆ ಅಬ್ಬರ ಹೆಚ್ಚಿದೆ ಎಂದು ಸ್ಪಷ್ಟಪಡಿಸುತ್ತದೆ.
ಎಲ್ಲೆಲ್ಲಿ ಎಷ್ಟು ಮಳೆ?: ಎಚ್‌ಎಸ್‌ಆರ್ ಲೇಔಟ್‌ನಲ್ಲಿ 28 ಮಿ.ಮೀ., ರಾಜರಾಜೇಶ್ವರಿ ನಗರ 39, ಬಸವನಗುಡಿ 29, ಲಾಲ್‌ಬಾಗ್ 27, ಸಾರಕ್ಕಿ 36.5, ಕೆಂಗೇರಿ 31, ಉತ್ತರಹಳ್ಳಿ 22.5, ಕೋಣನಕುಂಟೆ 24.5, ಬೇಗೂರು 38.5, ನಾಗಪುರ 22.5, ಯಶವಂತಪುರ 9, ಅಗ್ರಹಾರ ದಾಸರಹಳ್ಳಿ 18.5 ಮಿ.ಮೀ. ಮಳೆ ಆಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.