Advertisement

ಗ್ರಾಮಾಂತರ ಭಾಗದ ವಿವಿಧೆಡೆ ಮಳೆ

10:26 AM Mar 15, 2018 | Team Udayavani |

ಮೂಡಬಿದಿರೆ/ ಉಳ್ಳಾಲ: ಮೂಡಬಿದಿರೆ, ಮೂಲ್ಕಿ, ಬಜಪೆ, ಹಳೆಯಂಗಡಿ, ಕಿನ್ನಿಗೋಳಿ ಮತ್ತು ಉಳ್ಳಾಲ ಸುತ್ತಮುತ್ತ ಬುಧವಾರ ಅಪರಾಹ್ನ ಉತ್ತಮ ಮಳೆ ಸುರಿದಿದೆ. ಮೂಡಬಿದಿರೆ ಪ್ರದೇಶದಲ್ಲಿ ಒಂದು ಗಂಟೆ ವಿಪರೀತ ಮಳೆಯಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಗಾಳಿ, ಗುಡುಗು ಸಹಿತ ಭಾರೀ ಮಳೆ ಉಂಟಾಗಿದೆ. ಇದರಿಂದಾಗಿ ಕೆಲವೆಡೆ ವಿದ್ಯುತ್‌ ಕಡಿತಗೊಂಡಿದೆ.

Advertisement

ಉಳ್ಳಾಲ ಸಹಿತ ಮುಡಿಪು, ದೇರಳಕಟ್ಟೆ, ಕೊಣಾಜೆ ಪ್ರದೇಶದಲ್ಲಿ ಬುಧವಾರ ಅಪರಾಹ್ನ ಮಳೆ ಸುರಿದಿದ್ದು, ಮುಡಿಪಿನಲ್ಲಿ ಅರ್ಧ ಗಂಟೆಗಳ ಕಾಲ ಜಡಿ ಮಳೆ ಸುರಿಯಿತು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಬಿಸಿಲು ಹೆಚ್ಚಾಗಿತ್ತು. ಮಧ್ಯಾಹ್ನವಾಗುತ್ತಿದ್ದಂತೆ ಮೋಡ ಕವಿದಿದ್ದು, ಮುಡಿಪು ಪ್ರದೇಶದಲ್ಲಿ ಮಧ್ಯಾಹ್ನ ಹಾಗೂ ತೊಕ್ಕೊಟ್ಟು, ಉಳ್ಳಾಲ ಭಾಗದಲ್ಲಿ ಸಂಜೆ ಮಳೆ ಸುರಿಯಿತು.

ಅನಿರೀಕ್ಷಿತವಾಗಿ ಸುರಿದ ಮಳೆಯಿಂದಾಗಿ ಪಾದಚಾರಿಗಳು, ದ್ವಿಚಕ್ರ ವಾಹನ ಚಾಲಕರು ಒದ್ದೆಯಾಗಿ ಸಂಚಾರ ನಡೆಸಿದರು. ಕೆಲವೆಡೆ ಮಹಿಳೆಯರು ಕೊಡೆ ಹಿಡಿದು ಸಾಗುವುದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next