Advertisement
ರಾಜ್ಯ ಹೆದ್ದಾರಿ ಅಗಲಗೊಳಿಸಲು ಕೆಲವೆಡೆ ಚರಂಡಿಯನ್ನೇ ಮುಚ್ಚಿ ಹಾಕಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೇಟೆಯ ಪ್ರದೇಶದಲ್ಲಿ ಮಳೆ ನೀರು ಚರಂಡಿ ಇಲ್ಲದೆ ರಸ್ತೆಯಲ್ಲೇ ಹರಿಯುವಂತಾಗಿದೆ.
ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಮ್ಮಡೆ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಚರಂಡಿ ಇದ್ದ ಕಡೆಗಳಲ್ಲಿ ಹೂಳು ತೆಗೆಯದೆ ಸಮಸ್ಯೆ ಉದ್ಭವಿಸಿದೆ. ಉಲ್ಲಂಜೆಯ ಬ್ರಹ್ಮ ಸ್ಥಾನ ರಸ್ತೆ ಹಾಗೂ ಭಾಸ್ಕರ ಉಲ್ಲಂಜೆ ರಸ್ತೆಯ ಬದಿಯಲ್ಲೂ ಚರಂಡಿ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಈ ಬಗ್ಗೆ ಹಲವು ಬಾರಿ ಗ್ರಾ.ಪಂ. ಗೆ ಮನವಿ ನೀಡಿದರೂ ಪ್ರಯೋಜವಾಗಿಲ್ಲ ಎನ್ನುತ್ತಾರೆ ಸ್ಥಳೀಯರಾದ ಗಿರೀಶ್.
Related Articles
ಉಲ್ಲಂಜೆ ಹಾಗೂ ಮುಖ್ಯ ರಸ್ತೆಯಲ್ಲಿ ಕೆಲವು ಪ್ರದೇಶ ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತಿದೆ. ಆದರೆ ಒಂದು ರಾಜ್ಯ ಹೆದ್ದಾರಿ, ಇನ್ನೊಂದು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿದೆ. ಉಲ್ಲಂಜೆ ರಸ್ತೆಯಲ್ಲಿ ಕೆಲವು ಪ್ರದೇಶದಲ್ಲಿ ಚರಂಡಿ ಇಲ್ಲ. ಇನ್ನು ಕೆಲ ವೆಡೆ ಚರಂಡಿ ಮತ್ತು ರಸ್ತೆ ಒಂದೇ ಆಗಿದೆ.
Advertisement
ಆದ್ಯತೆಯ ಮೇರೆಗೆ ಕ್ರಮಕೆಮ್ಮಡೆ, ನೇಕಾರ ಕಾಲನಿ, ಕೊಡೆತ್ತೂರು ಮುಕ್ಕ ಹಾಗೂ ತೀರ ಅಗತ್ಯವಿದ್ದ ಕಡೆಗಳಲ್ಲಿ ರಸ್ತೆ, ಚರಂಡಿ ಕಾಮಗಾರಿ ನಡೆಸಲಾಗಿದೆ. ಇನ್ನು ಉಳಿದಡೆ ಸಭೆಯ ಸದಸ್ಯರ ಆದ್ಯತೆಯ ಮೇರೆಗೆ ಜನರ ಸಮಸ್ಯೆಗೆ ಸ್ಪಂದಿಸಲಾಗುವುದು.
- ರಮ್ಯಾ ಕೆ.
ಪಿಡಿಒ, ಮೆನ್ನಬೆಟ್ಟು ಗ್ರಾಮ
ಪಂಚಾಯತ್