Advertisement
ನಂದಳಿಕೆ ಗೋಳಿಕಟ್ಟೆಯಿಂದ ಜಂತ್ರವನ್ನು ಸಂಪರ್ಕ ಪಡೆದು ಮುಂದೆ ಶಿರ್ವ ಹಾಗೂ ಉಡುಪಿ ಸಾಗುವ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಈ ಕೂಡು ರಸ್ತೆ ಹಲವು ವರ್ಷಗಳಿಂದಲೂ ಡಾಮರು ಕಾಣದೆ ತೀರ ಹದಗೆಟ್ಟಿದೆ. ನಂದಳಿಕೆ ಪಂಚಾಯತ್ ವ್ಯಾಪ್ತಿಗೆ ಬರುವ ಗೋಳಿಕಟ್ಟೆಯಿಂದ ಸುಮಾರು 500 ಮೀ. ಉದ್ದದ ರಸ್ತೆಗೆ ಡಾಮರೀಕರಣ ಮಾಡಲಾಗಿದ್ದು ಆ ಬಳಿಕ ಬೆಳ್ಮಣ್ ಗ್ರಾ.ಪಂ. ವ್ಯಾಪ್ತಿಯಲ್ಲಿನ 250ರಿಂದ 300 ಮೀ. ರಸ್ತೆ ಈಗಲೂ ಡಾಮರಿಲ್ಲದೆ ಬರೀ ಮಣ್ಣಿನ ರಸ್ತೆಯಂತಾಗಿದೆ. ಮಳೆ ನೀರು ರಸ್ತೆಯಲ್ಲೇ ಹರಿಯು ವುದರಿಂದ ರಸ್ತೆ ಮಧ್ಯದಲ್ಲೇ ಚರಂಡಿ ನಿರ್ಮಾಣ ಗೊಂಡಿದೆ.
ನಂದಳಿಕೆಯಿಂದ ಶಿರ್ವ, ಜಂತ್ರ, ಕಟಪಾಡಿ, ಉಡುಪಿ ಕಡೆಯತ್ತ ಪ್ರಯಾಣ ಬೆಳೆಸಲು ಇದು ಹತ್ತಿರದ ರಸ್ತೆ ಯಾಗಿದ್ದು, ಬಹುತೇಕ ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿವೆ. ಆದರೆ ಈ 300 ಮೀ. ಉದ್ದದ ರಸ್ತೆ ಸಂಪೂರ್ಣ ಹದಗೆಟ್ಟ ಪರಿಣಾಮ ವಾಹನ ಸವಾರರು ಸಂಕಟ ಅನುಭವಿಸುವಂತಾಗಿದೆ. ಈ ಭಾಗದಲ್ಲಿ ಯಾವುದೇ ಬಸ್ಸು ಸೌಕರ್ಯವಿಲ್ಲದ ಪರಿಣಾಮ ಗ್ರಾಮಸ್ಥರು ಹೆಚ್ಚಾಗಿ ರಿಕ್ಷಾ, ಕಾರು, ಹಾಗೂ ಬೈಕ್‌ಗಳಂತಹ ಸಣ್ಣ ಪುಟ್ಟ ವಾಹನಗಳನ್ನೇ ಅವಲಂಬಿಸಬೇಕಾಗಿದೆ. ಆದರೆ ಬಾಡಿಗೆ ವಾಹನಗಳು ಕೂಡ ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುತ್ತಿದ್ದು ಬೈಕ್ ಸವಾರರಂತು ನಿತ್ಯ ಇಲ್ಲಿ ಬಿದ್ದು ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.
Related Articles
Advertisement
ಪರ್ಯಾಯ ವ್ಯವಸ್ಥೆರಸ್ತೆಯ ಸ್ವಲ್ಪ ಭಾಗ ಪಟ್ಟಾ ಜಾಗದಲ್ಲಿ ಬರುತ್ತದೆ. ಅದು ಪಂಚಾಯತ್‌ಗೆ ಹಸ್ತಾಂತರ ಆಗಿಲ್ಲ. ಹೀಗಾಗಿ ವಿಳಂಬವಾಗಿದೆ. ತಕ್ಕ ಮಟ್ಟಿಗೆ ಕೂಡಲೇ ಪರ್ಯಾಯ ವ್ಯವಸ್ಥೆಯನ್ನು ಮಾಡುವಲ್ಲಿ ಕ್ರಮ ಕೈಗೊಳ್ಳುತ್ತೇವೆ.
-ಪ್ರಕಾಶ್, ಬೆಳ್ಮಣ್ ಪಿಡಿಒ ಸಂಚಾರಕ್ಕೆ ಅಯೋಗ್ಯ
ಈ ರಸ್ತೆಯು ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಎರಡೂ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ ಬರುವುದರಿಂದ ಅರ್ಧ ಮಾತ್ರ ಡಾಮರೀಕರಣಗೊಂಡಿದೆ. ಉಳಿದ ರಸ್ತೆ ಕಚ್ಚಾ ರಸ್ತೆಯಂತಾಗಿದೆ.
– ನಿತ್ಯಾನಂದ ಅಮೀನ್, ಗ್ರಾಮಸ್ಥ