Advertisement
ಮುಂದಿನ ಮೂರು ದಿನಗಳಲ್ಲಿ ದಕ್ಷಿಣ ಒಳನಾಡಿನ ಕೋಲಾರ, ಕೊಡಗು, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೂನ್ 18 ರಿಂದ 21ರ ವರೆಗೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆಗಳಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಾರೀ ಮಳೆಯಾಗುವ ಸಾಧ್ಯತೆ ಕಡಿಮೆಯಿದ್ದು, ವಾಡಿಕೆ ಮಳೆಯಾಗಲಿದೆ. 66 ಸೆಂ.ಮೀ 96 ಸೆಂ.ಮೀ.ವರೆಗೆ ಮಳೆಯಾದರೆ ಅದನ್ನು ವಾಡಿಕೆ ಮಳೆ ಎನ್ನಲಾಗುತ್ತದೆ. ಮುಂದಿನ ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 83ಸೆಂ.ಮೀ. ಮಳೆಯಾಗುವ ಸಾಧ್ಯತೆಗಳಿವೆ. ಬಿಪರ್‌ಜೋಯ್ ಚಂಡಮಾರುತದಿಂದ ಮುಂಗಾರು ಪ್ರವೇಶ ಕೆಲವೆಡೆ ವಿಳಂಬವಾಗಿದೆ. ಇದರ ಪ್ರಭಾವ ರಾಜ್ಯದ ಕರಾವಳಿ ದಾಟಿ ಒಳಗೆ ಹೋಗಿದೆ. ಚಂಡಮಾರುತ ಪ್ರಭಾವವು ಇನ್ನು ಎರಡು ದಿನಗಳಲ್ಲಿ ಸಂಪೂರ್ಣವಾಗಿ ಕಡಿಮೆಯಾಗಲಿದೆ. ಆ ವೇಳೆ ಮುಂಗಾರು ಮತ್ತೆ ಚುರುಕಾಗಲಿವೆ.