Advertisement
ಇದರಿಂದ ಇಟ್ಟಂಗಿ ಭಟ್ಟಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಇಟ್ಟಂಗಿ ತಯಾರಿಕೆ ಕಾರ್ಮಿಕರಿಗೆ ದಿಕ್ಕೇ ತೋಚದಂತಾಗಿದೆ.ಇಟ್ಟಂಗಿ ತಯಾರಿಕೆಗೆ ಉತ್ತಮವಾದ ಬಿಸಿಲು ಅವಶ್ಯವಿದ್ದು, ಹಲವು ದಿನಗಳಿಂದ ಮೋಡ ಕವಿದ ವಾತಾವರಣ ಇದೆ. ಸುಮಾರು ಒಂದೂವರೆ-ಎರಡು ತಿಂಗಳಿಂದ ಇಟ್ಟಂಗಿ ತಯಾರಿಕೆ ಕಾರ್ಯ ಬಹುತೇಕ ಸ್ಥಗಿತಗೊಂಡಂತಾಗಿದೆ. ಹುಬ್ಬಳ್ಳಿ-ಕಲಘಟಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ನೂರಾರು ಇಟ್ಟಂಗಿ ಭಟ್ಟಿಗಳ ಮಾಲಿಕರು ಈಗೀಗ ನಿಧಾನವಾಗಿ ಇಟ್ಟಂಗಿ ತಯಾರಿಕೆಗೆ ಅಣಿಯಾಗುತ್ತಿದ್ದಾರೆ.
Related Articles
Advertisement
ಸತತ ಮಳೆಯಿಂದ ಎರಡು ತಿಂಗಳಿಂದ ಇಟ್ಟಂಗಿ ತಯಾರಿಕೆಸಾಧ್ಯವಾಗಿಲ್ಲ. ಇದ್ದ ದಾಸ್ತಾನು ಖಾಲಿಯಾಗಿದೆ. ಪ್ರತಿ ವರ್ಷ ದೀಪಾವಳಿ ಮುಗಿದ ನಾಲ್ಕೈದು ದಿನಕ್ಕೆ ಇಟ್ಟಂಗಿ ತಯಾರಿಕೆ ಕಾರ್ಯ ಆರಂಭವಾಗುತ್ತಿತ್ತು. ಈ ಬಾರಿ ದೀಪಾವಳಿ ವೇಳೆ ಸುರಿದ ಮಳೆ ಹಾಗೂ ಅನಂತರದ ಅಕಾಲಿಕ ಮಳೆ ತಯಾರಿಕೆಗೆ ಅಡ್ಡಿಯುಂಟು ಮಾಡಿತು. ದಾಸ್ತಾನು ಇಲ್ಲದೆ ಇಟ್ಟಂಗಿ ಬೆಲೆಯಲ್ಲಿ ಹೆಚ್ಚಳವಾಗಿದೆ.ಕಲ್ಲಪ್ಪ ಬೆಳಗಲಿ, ಕೆ.ಬಿ.ಬ್ರಿಕ್ಸ್ ಮಾಲಿಕರು. ಗುತ್ತಿಗೆ ಪಡೆದು ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇಟ್ಟಂಗಿ ದರದಲ್ಲಿ ದಿಢೀರ್ ಏರಿಕೆಯಿಂದ ತುಂಬಾ ಹಾನಿಯಾಗುತ್ತಿದೆ. ಆರಂಭದಲ್ಲಿ 1 ಸಾವಿರ ಇಟ್ಟಂಗಿಗೆ 5, 500ರೂ ಇದ್ದದ್ದು ಏಕಾಏಕಿ 2 ಸಾವಿರ ರೂ. ಹೆಚ್ಚಳವಾಗಿದ್ದು, ಗುತ್ತಿಗೆ ಮೇಲೆ ಕಟ್ಟಡ ನಿರ್ಮಿಸುವವರಿಗೆ ನಷ್ಟವಾಗತೊಡಗಿದೆ.
ರಾಜು ಕೇಶಣ್ಣವರ,
ಸಿವಿಲ್ ಇಂಜನಿಯರ್ -ಬಸವರಾಜ ಹೂಗಾರ