Advertisement
ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಂಗಳೂರು ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಭಾರಿ ಪ್ರವಾಹ ಉಂಟಾಗಿರುವುದರಿಂದ ಗಣೇಶೋತ್ಸವ ಆಚರಣೆಯನ್ನು ಅದ್ಧೂರಿಯಾಗಿ ಮಾಡುವ ಬದಲಾಗಿ ಸರಳವಾಗಿ ಆಚರಣೆ ಮಾಡಲು ಈಗಾಗಲೆ ತಾಲೂಕಿನ ಹಲವು ಸಂಘ ಸಂಸ್ಥೆಗಳು ಲೆಕ್ಕಾಚಾರ ಮಾಡುತ್ತಿವೆ. ಇನ್ನು ಉತ್ತರ ಹಾಗೂ ಈಶಾನ್ಯ ಭಾರತದಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡುವ ಬಗ್ಗೆಯೂ ಕೆಲ ದಾನಿಗಳು ಆಲೋಚನೆ ಮಾಡಿದ್ದು ಅದ್ಧೂರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಬೇಡ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.
Related Articles
Advertisement
ಊರಿಗೊಂದು ಗಣಪ: ಗಣೇಶ ಮೂರ್ತಿ ಕೊರತೆ ಕಾಡುತ್ತಿರುವುದು ಹಾಗೂ ದೇಶದಲ್ಲಿ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿ ಇರುವುದರಿಂದ ಊರಿಗೆ ಒಂದೇ ಗಣಪ ಮೂರ್ತಿ ಸ್ಥಾಪನೆ ಬಗ್ಗೆ ಚಿಂತನೆ ಮಾಡ ಬೇಕಾಗಿದೆ. ಗಲ್ಲಿ ಗಲ್ಲಿಯಲ್ಲೂ ಸ್ಥಾಪನೆ ಗೊಳ್ಳು ತ್ತಿರುವ ಮೂರ್ತಿ ಸಂಖ್ಯೆ ತಗ್ಗಿಸಿ ಒಂದೇ ಕಡೆ ಎಲ್ಲರೂ ಒಗ್ಗೂಡಿ ಹಬ್ಬ ಆಚರಿಸುವುದರಿಂದ ಸಮಾ ಜವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಾಧ್ಯ ವಾಗುತ್ತದೆ. ಜೊತೆಗೆ ವ್ಯವಸ್ಥಿತ ಆಡಳಿತ ನಿರ್ವಹಣೆಗೂ ಅನುಕೂಲ ಎನ್ನುವ ಮಾತು ಗಳು ತಾಲೂಕಿನ ಕೆಲ ಗ್ರಾಮದಲ್ಲಿ ಕೇಳಿ ಬರುತ್ತಿವೆ.
ಪರಿಸರ ಸ್ನೇಹಿಗೆ ಮಾರು ಹೋಗುತ್ತಿದ್ದಾರೆ: ರಾಸಯನಿಕ ಬಣ್ಣ ಲೇಪಿತ ಮೂರ್ತಿ ಹಾಗೂ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಬೇಡ ಎಂಬ ಆಲೋಚನೆ ಹೊಂದಿರುವ ಭಕ್ತರು ಈಗಾ ಗಲೇ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿ ಷ್ಠಾಪನೆಗೆ ಮುಂದಾಗಿದ್ದು ಮೂರ್ತಿ ತಯಾರಿಕೆ ಮಾಡು ವವರಿ ಗೆ ಮುಂಗಡ ಹಣ ನೀಡಿ ಪರಿಸರ ಸ್ನೇಹಿ ಹಬ್ಬ ಆಚ ರಣೆಗೆ ಮುಂದಾಗುತ್ತಿರುವುದು ಶ್ಲಾಘನೀಯ ಸಂಗತಿ.
ಮಳೆಯಿಂದ ಮೂರ್ತಿ ಕೊರತೆ ಸಾಧ್ಯತೆ: ಸೋನೆ ಮಳೆಯಿಂದ ಹಲವು ರಾಜ್ಯದ ಕೆಲ ಜಿಲ್ಲೆಗಳು ಪ್ರಕೃತಿ ವಿಕೋಪಕ್ಕೆ ತುತ್ತಾಗಿವೆ. ಇನ್ನು ಉತ್ತರ ಭಾರತದಲ್ಲಿ ಮಹಾಮಳೆಗೆ ಸಾಕಷ್ಟು ರಾಜ್ಯಗಳು ಸಂಪೂರ್ಣ ಜಲಾವೃತ್ತ ಗೊಂಡಿರು ವುದರಿಂದ ವಿಘ್ನೇಶ್ವರ ಮೂರ್ತಿ ಹೆಚ್ಚು ತಯಾರಿಕೆ ಆಗಿಲ್ಲ. ಇದರಿಂದಾಗಿ ಮಹಾ ನಗರದಲ್ಲಿ ಜೇಡಿ ಮಣ್ಣಿನ ಗಣಪ ಮೂರ್ತಿ ಕೊರತೆ ಆಗುವ ಲಕ್ಷಣಗಳು ಗೋಚರಿಸುತ್ತಿದ್ದು ಅನೇಕ ಮಂದಿ ಅನ್ಯ ಮಾರ್ಗವಿಲ್ಲದೆ ಗಣೇಶ ಭಾವ ಚಿತ್ರದ ಮೊರೆ ಹೋಗಬೇಕಾಗಲಿದೆ.
ನೆರವಿನ ಹಸ್ತ ನೀಡಿ ಗಣೇಶ್ ಹಬ್ಬ ಸಂಭ್ರಮಿಸಿ: ಪುರಸಭೆ ವ್ಯಾಪ್ತಿ 23 ವಾರ್ಡ್‌ನಲ್ಲಿ ಇರುವ ನೂರಾರು ರಸ್ತೆಗಳಲ್ಲಿ ಪ್ರತಿ ರಸ್ತೆ, ಕೇರಿ, ಬೀದಿ ಹೀಗೆ ಸಾವಿರಾರು ವಿನಾ ಯಕ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡ ಲಾಗುತ್ತಿದೆ. ಆದರೆ, ಈ ಸಾಲಿನಲ್ಲಿ ಇದನ್ನು ತ್ಯಜಿಸಿ ಪ್ರತಿ ವಾರ್ಡ್ ಗೆ ಒಂದೇ ಮೂರ್ತಿ ಸ್ಥಾಪನೆ ಮಾಡುವ ಕಡೆ ಸಾರ್ವಜನಿಕರು ಚಿಂತನೆ ಮಾಡಬೇಕಿದೆ. ಗಣೇಶ ಮೂರ್ತಿ ಸ್ಥಾಪನೆಗೆ ವೆಚ್ಚ ಮಾಡುವ ಹಣವನ್ನು ಉತ್ತರ ಭಾರತದಲ್ಲಿನ ನೆರೆ ಸಂತ್ರಸ್ತ ಗ್ರಾಮಗಳಿಗೆ ಇಲ್ಲವೆ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗುವಂತೆ ಆಲೋಚನೆ ಮಾಡಬೇಕಿದೆ.
ಪ್ರಸಕ್ತ ವರ್ಷ ಹೆಚ್ಚು ಮಂದಿ ಗಣಪ ಮೂರ್ತಿ ಬೇಕೆಂದು ಮುಂಗಡವಾಗಿ ಮೂರ್ತಿಯನ್ನು ಕಾಯ್ದಿರಿಸಿಲ್ಲ. ಹಾಗಾಗಿ ಕಡಿಮೆ ಮೂರ್ತಿಯನ್ನು ತಯಾರು ಮಾಡಿದ್ದೇವೆ. ಕಳೆದ ಒಂದು ತಿಂಗಳಿನಿಂದ ವಾತಾವರಣ ಶೀಥವಾಗಿದೆ ಮೂರ್ತಿ ತಯಾರಿಕೆಗೆ ಸೂಕ್ತ ವಾತಾವರಣವಿಲ್ಲ. ●ವಸಂತ, ಜೇಡಿ ಮಣ್ಣಿನ ಗಣಪ ಮೂರ್ತಿ ತಯಾರಕ.
-ಶಾಮಸುಂದರ್ ಕೆ ಅಣ್ಣೇನಹಳ್ಳಿ