Advertisement
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಬೆಳಗ್ಗಿನಿಂ ದಲೂ ಮೋಡಕವಿದ ವಾತಾವರಣವಿದ್ದು ಕೆಲವೆಡೆ ತುಂತುರು ಮಳೆಯಾದರೆ ಹಲವೆಡೆ ಧಾರಾಕಾರ ಮಳೆಯಾಗುತಿತ್ತು. ಇದರ ಪರಿಣಾಮ ಬಸ್‌ನಿಲ್ದಾಣ, ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದ್ದವು. ವರಮಹಾಲಕ್ಷ್ಮೀ ಹಬ್ಬದ ಆಚರಣೆಗಾಗಿ ಜನರು ರಸ್ತೆಗಿಳಿದುದು ಕಂಡು ಬರಲೇಯಿಲ್ಲ.
ಕರ್ನಾಟಕ-ತಮಿಳುನಾಡು ರಾಜ್ಯಗಳ ಗಡಿಭಾಗದ ಅರಣ್ಯ ದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೊಳ್ಳೇಗಾಲ – ಹಸನೂರು ಘಾಟ್ ರಸ್ತೆ ಸಂಪೂರ್ಣ ಬಂದ್ ಆಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸತತ ಮೂರ್‍ನಾಲ್ಕು ದಿನಗಳಿಂದಲೂ ಕೊರಮನಕತ್ತರಿ ಸಮೀಪದ ಜೆ ವಿಲೇಜ್ ಉಡುತೊರೆಹಳ್ಳ ಉಕ್ಕಿ ಹರಿಯುತ್ತಿರುವುದರ ಪರಿಣಾಮ ವಾಹನಗಳು ಗಂಟೆಗಟ್ಟಲೇ ಸಾಲುಗಟ್ಟಿ ನಿಲ್ಲುತ್ತಿವೆ. ಮಳೆ ಗುರುವಾರ ಬೆಳಗ್ಗೆ ಇಳುಮುಖವಾಗಿದ್ದ ಹಳ್ಳದ ಹರಿವು ಮಧ್ಯಾಹ್ನ 12 ಗಂಟೆಯಾಗುತ್ತಲೇ ಏಕಾಏಕಿ ಹೆಚ್ಚಳಗೊಂಡು ವಾಹನ ಸಂಚಾರ ಸ್ಥಗೊತಗೊಂಡಿತು. ಈ ವೇಳೆ ಕೆಲ ಸವಾರರು ಬದಲೀ ರಸ್ತೆಗಳ ಮೂಲಕ ತಾವು ಸೇರಬೇಕಾದ ಸ್ಥಳಗಳಿಗೆ ತೆರಳಿದರು. ಕೆರೆಯಂತಾದ ಜಮೀನುಗಳು: ತಾಲೂಕಾದ್ಯಂತ ಕೃಷಿ ಚಟುವಟಕೆಗಳಿಗಾಗಿ ರೈತರು ಜಮೀನು ಗಳನ್ನು ಉಳುಮೆ ಮಾಡಿ, ಹದಮಾಡಿ ಬಿತ್ತನೆ ಕಾರ್ಯಕ್ಕೆ ಸಿದ್ಧಮಾಡಿ ಕೊಂಡಿದ್ದರು. ಆದರೆ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಮೀನುಗಳೆಲ್ಲ ಕೆರೆಯಂತಾಗಿವೆ. ಇದರ ಪರಿಣಾಮ ಹದಗೊಳಿಸಿದ್ದ ಜಮೀನೆಲ್ಲಾ ಹಾಳಾಗಿದ್ದು ಮಳೆ ನೀರಿನ ರಭಸಕ್ಕೆ ಮಣ್ಣಿನ ಮೇಲ್ಪದರ ಸಂಪೂರ್ಣ ಹಾನಿಗೀಡಾಗಿದೆ. ಇದರಿಂದಾಗಿ ಬಿತ್ತನೆ ಕಾರ್ಯಮಾಡಲು ರೈತರು ಇನ್ನೊಮ್ಮೆ ಭೂಮಿಯನ್ನು ಹದಗೊಳಿ ಸಬೇಕಾದ ಅನಿವಾರ್ಯತೆ ಎದುರಾಗಿದೆ.
Related Articles
ಕೊಳ್ಳೇಗಾಲ – ಹಸನೂರು ಘಾಟ್ ರಸ್ತೆಯ ಮುಳುಗು ಸೇತುವೆಯು ದುರಸ್ತಿಗೊಂಡು ಗುಂಡಿ ಬಿದ್ದಿರುವ ಬಗ್ಗೆ ಉದಯವಾಣಿ ಆ.4ರಂದು ವರದಿ ಪ್ರಕಟಗೊಳಿಸಿದ ಬೆನ್ನಲ್ಲೇ ಎಚ್ಚೆತ್ತ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಸೇತುವೆಯ ಗುಂಡಿಗೆ ಗ್ರಾಹೋಲ್ ಮತ್ತು ಕಲ್ಲುಗಳನ್ನು ಹಾಕಿ ಮುಚ್ಚಿ ತೇಪೆ ಹಚ್ಚುವ ಕೆಲಸ ಮಾಡಿದರು. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಹಳ್ಳ ಮತ್ತೂಮ್ಮೆ ಉಕ್ಕಿಹರಿದಿದ್ದು ಅವಸರದಲ್ಲಿ ಕೈಗೊಂಡ ತೇಪೆ ಕಾಮಗಾರಿ ಏನಾಗಿದೆಯೋ ಎಂಬುದನ್ನು ಕಾದುನೋಡ ಬೇಕಿದೆ.
Advertisement