Advertisement
ಯಾಕಂದರೆ ಮನೆಯಲ್ಲಿ ಯಾರೂ ಕೂಡ ಮಳೆಯಲ್ಲಿ ನೆನೆಯೋಕೆ ಬಿಡ್ತಾ ಇರಲಿಲ್ಲ.
Related Articles
Advertisement
ಮಳೆ ಮೇಲೆ ಎಷ್ಟು ಕೋಪ ಇತ್ತು ಅಂದರೆ ಮಳೆ ನೀರು ಆದಷ್ಟು ನನ್ನ ಸ್ಪರ್ಶಿಸಬಾರದು ಅಂತ ರೈನ್ ಕೋಟು ಹಾಕಿಕೊಂಡು ಹೋಗ್ತಿದ್ದೆ. ಬರಿ ಪಾದಗಳು ಅಷ್ಟೇ ಒದ್ದೆ ಆಗ್ತಿತ್ತು. ಹೀಗಿರುವಾಗ ಮುಂಗಾರು ಮಳೆ ಚಿತ್ರ ರಿಲೀಸ್ ಆಯ್ತು. ಅದರ ಹಾಡುಗಳು ಅದ್ಭುತವಾಗಿದ್ದವು. ಅದರ ಸಾಲುಗಳು ಯಾಕೋ ಮತ್ತೆ ಮತ್ತೆ ನೆನಪಾಗುತ್ತಿದ್ದವು. ಆದರೆ ಬರೆದವರು ಯಾರೂ ಎಂಬುದು ಮಾತ್ರ ನನಗೆ ಅಸ್ಪಷ್ಟ. ನಿಜ ಹೇಳಬೇಕೆಂದರೆ ಅದರ ಬಗ್ಗೆ ನಾನು ಅಷ್ಟೊಂದು ಗಮನ ಕೊಟ್ಟೆ ಇರಲಿಲ್ಲ.
ಆಗ ಇಂಟರ್ನೆಟ್ ಅಂತೂ ಇರಲಿಲ್ಲ. ಒಂದು ದಿನ ಟಿವಿಯಲ್ಲಿ ಹಾಡು ಪ್ರಸಾರ ಆದಾಗ ಸಾಹಿತಿ ಜಯಂತ್ ಕಾಯ್ಕಿಣಿ ಅಂತ ಇತ್ತು. ಒಂದೆರಡು ದಿನ ಅದ ಮೇಲೆ ಪೇಪರ್‌ನಲ್ಲಿ ಅವರ ಕಥೆನು ಬಂತು. ಅದೂ ಕೂಡ ಇಷ್ಟ ಆಯ್ತು.
ಇದೆಲ್ಲ ಆಗಿ ಒಂದು ತಿಂಗಳು ಆದ ಮೇಲೆ ಮಳೆಗಾಲ. ಹಾಡು ಇನ್ನೂ ಕಿವಿ ಮತ್ತು ಮನಸ್ಸಲ್ಲಿ ಗುಂಯ್ಯಿಡುತ್ತಿತ್ತು. ಮಳೆ ಅಂದ್ರೆ ಕೋಪ ಬರುತ್ತಿದ್ದ ಇದ್ದ ನನಗೆ ಒಂದು ಹಾಡು ಮನ ಪರಿವರ್ತನೆ ಮಾಡಿತ್ತು. ರೈನ್ ಕೋಟು ಬಿಟ್ಟು ಕೊಡೆ ಹಿಡಿದು ಶಾಲೆಗೆ ಹೋಗಿದ್ದೆ. ಅದೆಷ್ಟು ಖುಷಿ ಆಯ್ತು ಆದಿನ ಅಂತೂ ಬಣ್ಣಿಸೋಕೆ ಆಗಲ್ಲ.ಮಳೆಗೆ ಒದ್ದೆಯಾಗಿ ಚಳಿ ಆಗುತ್ತಿದ್ದರೂ ಏನೋ ಖುಷಿ, ಉತ್ಸಾಹ.
ಜ್ವರಾನು ಬಂದಿತ್ತು. ಆದ್ರೆ ಕೋಪ ಬರಲೇ ಇಲ್ಲ. ಈಗ ಮಳೆ ಅಂದ್ರೆ ನನ್ ಲವರ್ ಥರ. ತುಂಬ ತುಂಬ ಇಷ್ಟ. ಜತೆಗೆ ಕಾಯ್ಕಿಣಿ ಅಭಿಮಾನಿ ಕೂಡ ಆದೆ ನಾನು. ಅವರ ಹಾಡುಗಳಲ್ಲಿ ಹೆಚ್ಚಿನದು ಮಳೆ ಹಾಡುಗಳೇ. ಅದಕ್ಕೆ ಅವರು ಅಂದರೆ ಅಭಿಮಾನ,ಮಳೆ ಅಂದರೆ ಪ್ರೀತಿ. ಮಳೆ ಮೇಲೆ ಪ್ರೀತಿ ಹುಟ್ಟಿಸಿದ್ದು ಕಾಯ್ಕಿಣಿ ಸರ್‌ಗೆ ವಂದನೆಗಳು.