ಸೌಥಂಪ್ಟನ್: ಆತಿಥೇಯ ಇಂಗ್ಲೆಂಡ್ ಮತ್ತು ಪ್ರವಾಸಿ ಪಾಕಿಸ್ಥಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಮಳೆಯಿಂದಲೇ ಸುದ್ದಿಯಾಗುತ್ತಿದೆ. ಮೂರನೇ ದಿನದ ಪಂದ್ಯ ಸಂಪೂರ್ಣ ಮಳೆಗಾಹುತಿಯಾದ ಬಳಿಕ ನಾಲ್ಕನೇ ದಿನದಾಟವು ನಡೆದಿದ್ದು ಕೇವಲ 10.2 ಓವರ್ ಮಾತ್ರ.
ಒಂಬತ್ತು ವಿಕೆಟ್ ಗೆ 223 ರನ್ ಗಳಿಸಿದ್ದಲ್ಲಿಂದ ನಾಲ್ಕನೇ ದಿನದಾಟ ಆರಂಭಿಸಿದ ಪಾಕಿಸ್ಥಾನ 236 ರನ್ ಆಲ್ ಔಟ್ ಆಯಿತು. ಮೊಹಮ್ಮದ್ ರಿಜ್ವಾನ್ 72 ರನ್ ಗೆ ಔಟಾದರು.
ನಂತರ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಮೊದಲ ಓವರ್ ನಲ್ಲೇ ವಿಕೆಟ್ ಕಳೆದುಕೊಂಡಿತು. ರೋರಿ ಬರ್ನ್ಸ್ ಕಳಪೆ ಫಾರ್ಮ್ ಇಲ್ಲಿಯೂ ಮುಂದುವರಿಯಿತು.
ಇದನ್ನೂ ಓದಿ: ಚೆನ್ನೈ ಚಾಂಪಿಯನ್ ಆದರೆ ಐಪಿಎಲ್‌ಗೂ ಧೋನಿ ಗುಡ್‌ಬೈ?
ಜ್ಯಾಕ್ ಕ್ರಾವ್ಲಿ ಐದು ರನ್ ಗಳಿಸಿದ್ದು, ಡಾಮ್ ಡೆನ್ಲಿ ಎರಡು ರನ್ ಗಳಿಸಿ ಆಡುತ್ತಿದ್ದಾರೆ. ಇಂಗ್ಲೆಂಡ್ ಏಳು ರನ್ ಗಳಿಸಿದ್ದಾಗ ಮತ್ತೆ ಮಳೆ ಆರಂಭವಾಗಿ ಪಂದ್ಯಕ್ಕೆ ಅಡಚಣೆಯಾಯಿತು. ಇಂದು ಪಂದ್ಯದ ಕೊನೆಯ ದಿನವಾಗಿದ್ದು, ಡ್ರಾನಲ್ಲಿ ಅಂತ್ಯವಾಗುವುದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ: ಐಪಿಎಲ್: ಮೊದಲ ಸುತ್ತಿಗೆ ಆಸೀಸ್, ಇಂಗ್ಲೆಂಡ್ ಆಟಗಾರರು ಗೈರು