Advertisement

ವಿಂಡೀಸ್‌-ಲಂಕಾ ಟೆಸ್ಟ್‌ ಪಂದ್ಯಕ್ಕೆ ಮಳೆ ಅಡ್ಡಿ

11:28 PM Apr 02, 2021 | Team Udayavani |

ನಾರ್ತ್‌ ಸೌಂಡ್‌ (ಆ್ಯಂಟಿಗುವಾ): ವೆಸ್ಟ್‌ ಇಂಡೀಸ್‌-ಶ್ರೀಲಂಕಾ ನಡುವಿನ ದ್ವಿತೀಯ ಹಾಗೂ ಅಂತಿಮ ಟೆಸ್ಟ್‌ ಪಂದ್ಯದ ಕೊನೆಯ ದಿನದಾಟದ ಆರಂಭಕ್ಕೆ ಮಳೆ ಅಡ್ಡಿಪಡಿಸಿದೆ.

Advertisement

377 ರನ್ನುಗಳ ಚೇಸಿಂಗ್‌ ಟಾರ್ಗೆಟ್‌ ಪಡೆದಿರುವ ಶ್ರೀಲಂಕಾ 4ನೇ ದಿನದಾಟದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 38 ರನ್‌ ಮಾಡಿತ್ತು.
96 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಬಳಿಕ ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌ 4 ವಿಕೆಟಿಗೆ 280 ರನ್‌ ಬಾರಿಸಿ ಡಿಕ್ಲೇರ್‌ ಮಾಡಿತ್ತು.

ಇಲ್ಲೇ ನಡೆದ ಮೊದಲ ಟೆಸ್ಟ್‌ ಪಂದ್ಯ ಡ್ರಾಗೊಂಡಿತ್ತು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-354 ಮತ್ತು 4 ವಿಕೆಟಿಗೆ 280 ಡಿಕ್ಲೇರ್‌. ಶ್ರೀಲಂಕಾ-258 ಮತ್ತು ವಿಕೆಟ್‌ ನಷ್ಟವಿಲ್ಲದೆ 38.

Advertisement

Udayavani is now on Telegram. Click here to join our channel and stay updated with the latest news.

Next