Advertisement
ಉತ್ತಮ ಬೇಸಗೆ ಮಳೆ ನಿರೀಕ್ಷೆಕರಾವಳಿ ಭಾಗದಲ್ಲಿ ಪೂರ್ವ ಮುಂಗಾರು ವೇಳೆ (ಮಾರ್ಚ್‌ನಿಂದ ಮೇ ಅಂತ್ಯದವರೆಗೆ) 171 ಮಿ.ಮೀ. ವಾಡಿಕೆ ಮಳೆಯಾಗಬೇಕು. ಐದು ವರ್ಷಗಳಲ್ಲಿ ಕಳೆದ ವರ್ಷ ಅತೀ ಕಡಿಮೆ ಮಳೆಯಾಗಿತ್ತು. 2015ರಲ್ಲಿ ಶೇ. 22ರಷ್ಟು ಹೆಚ್ಚಳ, 2016ರಲ್ಲಿ ಶೇ. 42, 2017ರಲ್ಲಿ ಶೇ. 13, 2018ರಲ್ಲಿ ಶೇ. 82ರಷ್ಟು ಹೆಚ್ಚಳ, 2019ರಲ್ಲಿ ಶೇ. 74ರಷ್ಟು ಮಳೆ ಕಡಿಮೆಯಾಗಿತ್ತು. ಈ ಬಾರಿ ಬೇಸಗೆ ಮಳೆ ಈಗಾಗಲೇ ಆರಂಭವಾಗಿದ್ದು ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹವಾಮಾನ ತಜ್ಞರು.