Advertisement

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

01:00 AM May 09, 2024 | Team Udayavani |

ಬೆಳ್ತಂಗಡಿ: ತಾಲೂಕಿನ ದಿಡುಪೆ ಸುತ್ತಮುತ್ತ, ಶಿಶಿಲ, ಧರ್ಮಸ್ಥಳ ಭಾಗದಲ್ಲಿ ಬುಧವಾರ ಸಂಜೆ ಗಾಳಿ ಸಹಿತ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಮನೆ, ರಸ್ತೆಗೆ ಮರ ಬಿದ್ದು ಹಾನಿಯಾಗಿದೆ.

Advertisement

ಶಿಶಿಲ ಗ್ರಾಮದ ಉಮ್ಮಂತಿಮಾರಿನಲ್ಲಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ತೊಂದರೆಯಾಯಿತು. ಕೊಳಂಬೆಯಲ್ಲಿಯೂ ಮರಗಳು ರಸ್ತೆಗೆ ಬಿದ್ದಿವೆ. ವೈಕುಂಠಪುರ ಕಾಲನಿಯ ಸೇಸಪ್ಪ ಮಲೆಕುಡಿಯ ಅವರ ಮನೆ ಮೇಲೆ ಮರ ಬಿದ್ದು ಹಂಚಿನ ಮೇಲ್ಛಾವಣಿ ಸಂಪೂರ್ಣ ಹಾನಿಗೀಡಾಗಿದೆ.

ಅವರ ಮಗನಿಗೆ ಶೀಟ್‌ನ ಭಾಗ ಬಿದ್ದು ಗಾಯವಾಗಿದೆ. ಮನೆಮಂದಿ ಪಕ್ಕದಲ್ಲಿರುವ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಶೌರ್ಯ ವಿಪತ್ತು ನಿರ್ವಹಣ ತಂಡದ ಸದಸ್ಯರು ಮತ್ತು ಸ್ಥಳೀಯ ಯುವಕರ ಸಹಕಾರದಿಂದ ಮರ ತೆರವುಗೊಳಿಸಲಾಗಿದೆ. ಶಿಶಿಲ ಗ್ರಾ.ಪಂ. ಅಧ್ಯಕ್ಷ ಸುಧಿನ್‌ ಶಿಶಿಲ, ಗ್ರಾಮ ಸಹಾಯಕ ವೀರಪ್ಪ ಗೌಡ, ಸಿಬಂದಿ ಸುಂದರ ಶಿಶಿಲ ಭೇಟಿ ಸ್ಥಳಕ್ಕೆ ನೀಡಿದರು.

ಬಿಳಿನೆಲೆಯಲ್ಲಿ ಹೆದ್ದಾರಿಗುರುಳಿದ ಮರ
ಸುಳ್ಯ / ಸುಬ್ರಹ್ಮಣ್ಯ: ಕಡಬ ತಾಲೂಕಿನ ವಿವಿಧೆಡೆ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಬುಧವಾರ ಸಂಜೆ ಗುಡುಗು ಸಹಿತ ಗಾಳಿ ಮಳೆಯಾಗಿದ್ದು ಬಿಳಿನೆಲೆಯಲ್ಲಿ ಹೆದ್ದಾರಿಗೆ ಹಾಗೂ ಕೊಂಬಾರು-ಸುಂಕದಕಟ್ಟೆ ರಸ್ತೆಯಲ್ಲಿ ಮರ ಬಿದ್ದು ರಸ್ತೆ ಸಂಚಾರಕ್ಕೆ ತಡೆ ಉಂಟಾಯಿತು.

Advertisement

ಹಲವು ವಿದ್ಯುತ್‌ ಕಂಬಗಳು, ಲೈನ್‌ಗಳಿಗೆ ಹಾನಿಯುಂಟಾಗಿದೆ. ಸುಬ್ರಹ್ಮಣ್ಯ ಪರಿಸರದ ಸುಬ್ರಹ್ಮಣ್ಯ, ಐನೆಕಿದು, ಹರಿಹರ, ಕೊಲ್ಲಮೊಗ್ರು, ಕಲ್ಮಕಾರು ಪರಿಸರದಲ್ಲಿ ಮಳೆಯಾಗಿದೆ. ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಸಿಬಂದಿ ಸ್ಥಳೀಯರ ನೆರವಿನೊಂದಿಗೆ ಮರವನ್ನು ರಸ್ತೆಯಿಂದ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿವಿಧೆಡೆ ಹಾನಿ
ಸಂಪಾಜೆ ದೊಡ್ಡಡ್ಕದಲ್ಲಿ ರಾಮಚಂದ್ರ ಅವರ ಮನೆಗೆ ಮನೆಗೆ ಮರ ಬಿದ್ದು ಮನೆ, ಶೌಚಾಲಯಕ್ಕೆ ಹಾನಿಯಾಗಿದೆ. ಬೈಲೆಯ ಟೈಲರ್‌ ನಾಗೇಶ್‌ ಅವರ ಮನೆಗೆ ಮರ ಬಿದ್ದು ಹಾಣಿ, ದೊಡ್ಡಡ್ಕದ ಉಮ್ಮರ್‌ ಅವರ ಅಂಗಡಿಗೆ ಮರದ ಕೊಂಬೆ ಬಿದ್ದು ಹಾನಿ ಸಂಭವಿಸಿದೆ. ಎಣ್ಮೂರಿನಲ್ಲಿ ಗಾಳಿಗೆ ಮರ ಬಿದ್ದು ಅಲ್ಲಿಲ್ಲಿ ಹಾನಿ ಸಂಭವಿಸಿದೆ.

ಜೀಪು, ರಿಕ್ಷಾ ಪಾರು
ಮರ ಮುರಿದು ಬೀಳುವ ಮುಂಚೆ ಕೊಂಬಾರಿನ ಚಿದಾನಂದ ದೇವುಪಾಲ್‌ ತನ್ನ ಜೀಪಿನಲ್ಲಿ ಕೊಂಬಾರಿಗೆ ಹೊರಟಿದ್ದರು. ಅವರ ಹಿಂದೆಯೇ ಭವಾನಿ ಶಂಕರ್‌ ತನ್ನ ಆಟೋ ರಿಕ್ಷಾದಲ್ಲಿ ಸಾಗುತ್ತಿದ್ದರು. ಜೀಪು ಸಾಗಿ ದಾಟಿ ಹೋದ ಕೆಲವೇ ಕ್ಷಣದಲ್ಲಿ ರಸ್ತೆಗೆ ಮರ ಬಿದ್ದಿದೆ. ಹಿಂದಿದ್ದ ರಿಕ್ಷಾ ಚಾಲಕ ಮರ ಬೀಳುವುದನ್ನು ಗಮನಿಸಿ ವಾಹನವನ್ನು ತತ್‌ಕ್ಷಣ ನಿಯಂತ್ರಿಸಿದ ಕಾರಣ ಅಪಾಯದಿಂದ ಪಾರಾಗಿದ್ದಾರೆ.

ಮರ ಬಿದ್ದು ಮನೆಗೆ ಹಾನಿ
ಅರಂತೋಡು: ಸಂಪಾಜೆ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಗುಡುಗು, ಗಾಳಿ ಸಹಿತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಸಂಪಾಜೆ ದೊಡ್ಡಡ್ಕದ ರಾಮಚಂದ್ರ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಇಲ್ಲಿ ಮನೆ, ಶೌಚಾಲಯಕ್ಕೆ ಹಾನಿಯಾಗಿದೆ. ಬೈಲೆಯ ಟೈಲರ್‌ನಾಗೈಶ ಎಂಬವರ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದೆ. ದೊಡ್ಡಡ್ಕದ ಉಮ್ಮರ್‌ ಅವರ ಅಂಗಡಿಗೆ ಮರದ ಕೊಂಬೆ ಮುರಿದು ಬಿದ್ದಿದೆ. ಅರಂತೋಡು, ಪೆರಾಜೆ, ತೊಡಿಕಾನ ಕಲ್ಲುಗುಂಡಿ,ಆಲೆಟ್ಟಿ, ಅಜ್ಜಾವರ ಇತರ ಭಾಗದಲ್ಲಿ ಮಳೆಯಾಗಿದೆ.

ಕೊಡಗು: ಆಲಿಕಲ್ಲು
ಮಳೆಯಿಂದ ಹಾನಿ
ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಬುಧವಾರ ಉತ್ತಮ ಮಳೆಯಾಗಿದೆ. ಮಡಿಕೇರಿ, ಸೋಮವಾರಪೇಟೆ, ಕುಶಾಲ ನಗರ, ಸುಂಟಿಕೊಪ್ಪ, ನಾಪೋಕ್ಲು ಸೇರಿದಂತೆ ವಿವಿಧೆಡೆ ಗಾಳಿ ಸಹಿತ ಮಳೆ ಸುರಿದಿದೆ.

ಮಡಿಕೇರಿ ತಾಲ್ಲೂಕಿನ ಕೆಲವು ಗ್ರಾಮಗಳು ಹಾಗೂ ನಗರ ವ್ಯಾಪಿಯಲ್ಲಿ ಉತ್ತಮ ಮಳೆ ಯಾಗಿದೆ. ಹಲವು ಗ್ರಾಮಗಳಲ್ಲಿ ಆಲಿಕಲ್ಲು ಮಳೆಯೂ ಸುರಿದಿದೆ. ಇದರಿಂದ ಹಸಿಮೆಣಸು ಬೆಳೆಗೆ ಹಾನಿಯಾಗಿದೆ. ನಾಪೋಕ್ಲು ಹಾಗೂ ಚೆರಿಯಪರಂಬು ವ್ಯಾಪ್ತಿಯಲ್ಲಿ ಭಾರೀ ಗಾಳಿ, ಗುಡುಗು ಸಹಿತ ಮಳೆಯಾಗಿದ್ದು, ನೀರು ಹಲವು ಮನೆಗಳನ್ನು ಆವರಿಸಿ ಆತಂಕವನ್ನು ಸೃಷ್ಟಿಸಿತು. ಮರ ಮತ್ತು ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದ್ದು, ನಾಪೋಕ್ಲು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ.

ಕಾಫಿ ತೋಟಗಳಿಗೆ ಆವಶ್ಯಕತೆಯಿದ್ದಷ್ಟು ಮಳೆಯಾಗಿದೆ ಎಂದು ರೈತರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next