Advertisement
ಬೆಳ್ವೆ, ಸಿದ್ದಾಪುರ, ಅಮಾಸೆಬೈಲು ಸಹಿತ ಕೆಲವೆಡೆ ಗಳಲ್ಲಿ ಗುರುವಾರ ಸಂಜೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
Related Articles
ಅಜೆಕಾರು, ಎಣ್ಣೆಹೊಳೆ, ಹಿರ್ಗಾನ, ಮುನಿಯಾಲು, ಕಡ್ತಲ, ಕುಕ್ಕುಜೆ, ದೊಂಡೇರಂಗಡಿ, ಅಂಡಾರು, ಮುಟ್ಲುಪಾಡಿ, ಕಾಡುಹೊಳೆ, ಶಿರ್ಲಾಲು, ಹೆರ್ಮುಂಡೆ, ಕೆರ್ವಾಶೆ ಪ್ರದೇಶಗಳಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಭಾರೀ ಮಳೆ ಸುರಿದಿದೆ.
Advertisement
ವಿಪರೀತ ಬೀಸಿದ ಗಾಳಿಯಿಂದಾಗಿ ಕೆಲ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವುಂಟಾಗಿದ್ದರೆ ತಗಡಿನ ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಸಂಜೆ ಸಮಯ ಗಾಳಿ ಮಳೆ ಬಂದಿರುವುದರಿಂದ ವಿದ್ಯಾರ್ಥಿಗಳು ಕೊಡೆ ಇಲ್ಲದೆ ಪರದಾಡುವಂತಾಗಿತ್ತು.
ಕಾರ್ಕಳಕಾರ್ಕಳ, ಹೆಬ್ರಿಯ ಕೆಲ ಪ್ರದೇಶಗಲಲ್ಲಿಯೂ ಗುಎಉಗು ಸಹಿತ ಮಳೆಯಾಗಿದೆ. ಕಾರ್ಕಳ ಬಸ್ ನಿಲ್ದಾಣದ ಬಳಿ ಮೊದಲ ಮಳೆಗೆ ರಸ್ತೆಯಲ್ಲಿಯೇ ನೀರು ಹರಿದಿದೆ. ನೇಮಕ್ಕೆ ಅಡ್ಡಿ
ಶಿರ್ಲಾಲು ಗ್ರಾಮದ ಸೂಡಿ ನಿಡ್ಡೆದ ಕಟ್ಟೆ ಹನಿಮುಗ್ಗೇರ್ಕಳ ದೈವಸ್ಥಾನದ ವಾರ್ಷಿಕ ನೇಮ ಸಂದರ್ಭ ಭಾರೀ ಗಾಳಿ ಮಳೆ ಸುರಿದು ನೇಮಕ್ಕೆ ಸ್ವಲ್ಪ ಕಾಲ ಅಡ್ಡಿಯುಂಟಾಯಿತು. ಶಿರ್ಲಾಲು ಸುತ್ತಮುತ್ತ ಪ್ರದೇಶಗಳಲ್ಲಿ ಕಳೆದ 2-3 ದಿನಗಳಿಂದ ಸಂಜೆ ವೇಳೆಯಲ್ಲಿ ಮಳೆ ಸುರಿಯುತ್ತಿದ್ದು ಎ.4ರಂದು ಮದ್ಯಾಹ್ನ ಮುಗ್ಗೇರ್ಕಳ ದೈವಸ್ಥಾನದ ಹಲೇರ ಪಂಜುರ್ಲಿ ದೈವದ ನೇಮದ ಸಂದರ್ಭ ಭಾರೀ ಗಾಳಿ ಸಹಿತ ಸಿಡಿಲು ಮಳೆ ಸುರಿದಿದೆ. ಇದರಿಂದಾಗಿ ಧಾರ್ಮಿಕ ಕಾರ್ಯಗಳಿಗೆ ಕೆಲ ಸಮಯ ಅಡಚಣೆಯುಂಟಾಯಿತು.