Advertisement
ಮಂಗಳೂರು ನಗರದ ವಿವಿಧ ಕಡೆಗಳಲ್ಲಿ ಬೆಳಗ್ಗೆ ಸಾಧಾರಣ ಮಳೆ ಸುರಿದಿದೆ. ಪರಿಣಾಮವಾಗಿ ದಿನವಿಡೀ ಉರಿ ಸೆಕೆ ತುಸು ಕಡಿಮೆ ಇತ್ತು. ಉಳಿದಂತೆ ಬಂಟ್ವಾಳ ತಾಲೂಕಿನ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಹಲವೆಡೆ ಮೋಡದಿಂದ ಕೂಡಿದ ವಾತಾವರಣ ಇತ್ತು. ಹವಾಮಾನ ಇಲಾಖೆ ಮಾಹಿತಿಯಂತೆ ರವಿವಾರ ಮಂಗಳೂರಿನಲ್ಲಿ 33 ಡಿ.ಸೆ. ಗರಿಷ್ಠ ಮತ್ತು 23.2 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು. ವಾಡಿಕೆಗಿಂತ 1 ಡಿ.ಸೆ. ಕಡಿಮೆ ಇತ್ತು.
ಉಡುಪಿ: ಉಡುಪಿ ನಗರ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ರವಿವಾರ ಮುಂಜಾನೆ ಸಾಧಾರಣ ಮಳೆ ಸುರಿದಿದೆ. ಮಧ್ಯಾಹ್ನದ ವರೆಗೆ ಮೋಡ ಕವಿದ ವಾತಾವರಣ ಇತ್ತಾದರೂ ಮಳೆ ಸುರಿಯಲಿಲ್ಲ. ಮಣಿಪಾಲ, ಪರ್ಕಳ, ಬ್ರಹ್ಮಾವರ, ಕೋಟ, ಮಧುವನ, ಶಿರಿಯಾರ, ಕಟಪಾಡಿ ಹಾಗೂ ಉದ್ಯಾವರ ಭಾಗದಲ್ಲಿಯೂ ಬೆಳಗ್ಗಿನ ವೇಳೆ ಮಳೆ ಸುರಿದಿತ್ತು. ಉಳಿದಂತೆ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಹನಿಹನಿ ಮಳೆಯಾಗಿತ್ತು.
Related Articles
ಬಂಟ್ವಾಳ: ಬಂಟ್ವಾಳ ತಾಲೂಕಿನ ಬಹುತೇಕ ಕಡೆ ರವಿವಾರ ಮುಂಜಾನೆ ಸಾಧಾರಣ ಮಳೆಯಾಗಿದೆ. ತಾಲೂಕಿನ ಹೆಚ್ಚಿನ ಕಡೆ ಈ ಬೇಸಗೆಯಲ್ಲಿ ಇದೇ ಮೊದಲ ಬಾರಿಗೆ ಮಳೆಯಾಗಿದ್ದು, ಬೆಳ್ಳಂಬೆಳಗ್ಗೆ ಮೋಡ ಕವಿದ ವಾತಾವರಣವಿತ್ತು. ಆದರೆ ಕೆಲವು ಕಡೆ ಒಂದೆರಡು ಹನಿ ಬಿದ್ದು ಮಳೆ ದೂರವಾಗಿತ್ತು.
Advertisement