Advertisement
ಬೆಳ್ತಂಗಡಿ ತಾಲೂಕಿನ ಶಿರ್ಲಾಲು, ಕರಂಬಾರು, ಮದ್ದಡ್ಕ, ನಾರಾವಿ, ಅಳದಂಗಡಿ, ಉಜಿರೆ, ಕರಂಬಾರು, ಬೆಳ್ತಂಗಡಿ ಪೇಟೆ, ಉಜಿರೆ ಸೇರಿದಂತೆ ಹಲವೆಡೆ ಮಳೆಯಾಗಿದೆ.
Related Articles
ಕಾಸರಗೋಡು ಸಹಿತ ಜಿಲ್ಲೆಯ ವಿವಿಧೆಡೆ ಮಂಗಳವಾರ ಬೆಳಗ್ಗೆ ಗುಡುಗು ಸಿಡಿಲು ಸಹಿತ ಸಾಮಾನ್ಯ ಮಳೆಯಾಗಿದೆ. ಮಾನ್ಯ ಮೇಗಿನಡ್ಕದ ನಾರಾಯಣ ನಾಯ್ಕ ಅವರ ಮನೆ ಸಿಡಿಲು ಬಡಿದು ಹಾನಿಗೀಡಾಗಿದೆ. ಕಿಟಕಿ ಸಮೀಪ ಮಲಗಿದ್ದ ನಾರಾಯಣ ನಾಯ್ಕ ಗಾಯಗೊಂಡಿದ್ದಾರೆ. ಕಿಟಕಿ, ಗೋಡೆ, ವಿದ್ಯುತ್ ಮೀಟರ್ ಹಾಗೂ ವಯರಿಂಗ್ ಉರಿದು ಹೋಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಮಳೆ ನೀರು ಹರಿದು ಹೋಗದೆ ಚೆರ್ಕಳ ಪೇಟೆಯ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು.
Advertisement
ಬಾನಿಗೆ ಕೆಂಬಣ್ಣಸುಳ್ಯ: ಸುಳ್ಯ ಹಾಗೂ ಸುಬ್ರಹ್ಮಣ್ಯ ಪರಿಸರದ ಕೆಲವೆಡೆ ಬಾನು ಕೆಂಪು ಬಣ್ಣದಿಂದ ಗೋಚರಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯ, ಸುಳ್ಯ ತಾಲೂಕಿನ ಕೆಲವೆಡೆ ಸಂಜೆ 7ರ ಸುಮಾರಿಗೆ ಬಾನು
ಕೆಂಪು ಬಣ್ಣಕ್ಕೆ ತಿರುಗಿದೆ. ಸ್ಥಳೀಯರು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಜಾಲ ತಾಣಗಳಲ್ಲಿ ವೈರಲ್ ಆಗಿದೆ.