Advertisement
ಮಂಗಳೂರು ನಗರದಲ್ಲಿ ಬೆಳಗ್ಗಿನಿಂದ ಬಿಟ್ಟು ಬಿಟ್ಟು ಮಳೆಯಾಗಿದೆ. ಪುತ್ತೂರು, ಉಪ್ಪಿನಂಗಡಿ, ಕಡಬ, ಬೆಳ್ತಂಗಡಿ, ಮಡಂತ್ಯಾರು, ಧರ್ಮಸ್ಥಳ, ನಾರಾವಿ, ಪೂಂಜಾಲಕಟ್ಟೆ, ಬಂಟ್ವಾಳ, ಬಿ.ಸಿ. ರೋಡು, ಕಲ್ಲಡ್ಕ, ಸುಳ್ಯ, ಸುಬ್ರಹ್ಮಣ್ಯ, ಗುತ್ತಿಗಾರು, ವಿಟ್ಲ, ಕನ್ಯಾನ, ಸುರತ್ಕಲ್, ಮೂಡುಬಿದಿರೆ, ಉಳ್ಳಾಲ ಸೇರಿದಂತೆ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
Related Articles
ಕರಾವಳಿ ಭಾಗದಲ್ಲಿ ಆ.29 ಬೆಳಗ್ಗೆ 8.30ರಿಂದ ಆ.30ರ ಬೆಳಗ್ಗೆ 8.30ರವರೆಗೆ “ಆರೆಂಜ್ ಅಲರ್ಟ್’ ಘೊಷಿಸಲಾಗಿದೆ. ಈ ವೇಳೆ 115.6 ಮಿ.ಮೀ.ನಿಂದ 204.4 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ ಭಾರೀ ಮಳೆ-ಗಾಳಿ ಇರಲಿದ್ದು, ಕಡಲಿನ ಅಬ್ಬರ ಹೆಚ್ಚಿರುವ ಸಾಧ್ಯತೆ ಇದೆ. ಬಂಗಾಲಕೊಲ್ಲಿಯಲ್ಲಿ ಸದ್ಯದಲ್ಲಿಯೇ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Advertisement