Advertisement
ಬಂಟ್ವಾಳ ತಾಲೂಕಿನ ವಿವಿಧೆಡೆ ಶನಿವಾರ ಮುಂಜಾನೆ ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಕಲ್ಮಂಜ, ನೆರಿಯ, ಕನ್ಯಾಡಿ-1 ಮೊದಲಾದ ಗ್ರಾಮಗಳ ಕೆಲವು ಪ್ರದೇಶಗಳಲ್ಲಿ ಶನಿವಾರ ಮುಂಜಾನೆ ಉತ್ತಮ ಮಳೆಯಾಗಿದೆ. ಜತೆಗೆ ಸಿಡಿಲಿನ ಅಬ್ಬರವೂ ಇದ್ದು, ಹಲವರ ಪಂಪ್‌ಸೆಟ್, ಇನ್ವರ್ಟರ್ ಮೊದಲಾದ ವಿದ್ಯುತ್ ಉಪಕರಣಗಳು ಹಾನಿಗೀಡಾಗಿವೆ. ಕೃಷಿಗೆ ನೀರಿನ ತಾಪತ್ರಯ ಎದು ರಿಸುತ್ತಿದ್ದ ಈ ಭಾಗದ ಜನರು ಮಳೆಯಿಂದ ಒಂದಿಷ್ಟು ನಿರಾಳರಾಗಿದ್ದಾರೆ.