Advertisement

ಗಡಿ ನಾಡಿನಲ್ಲಿ ಉತ್ತಮ ಮಳೆ-ಹಳ್ಳಗಳಿಗೆ ಕಳೆ

02:16 PM Jul 16, 2020 | mahesh |

ಬೀದರ: ಕಳೆದ ಹಲವು ದಿನಗಳಿಂದ ಮಳೆ-ಬಿಸಿಲಿನ ಕಣ್ಣಾ ಮುಚ್ಚಾಲೆಯಲ್ಲಿದ್ದ ಗಡಿ ನಾಡು ಬೀದರನಲ್ಲಿ ಈಗ ಮುಂಗಾರಿನ ವಾತಾವರಣ ಮೂಡಿದೆ. ಬೀದರ ನಗರ ಸೇರಿದಂತೆ ಜಿಲ್ಲಾದ್ಯಂತ ಬುಧವಾರ ಉತ್ತಮ ಮಳೆಯಾಗಿದೆ.

Advertisement

ಜೂನ್‌ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದ ಜಿಲ್ಲೆಯಲ್ಲಿ ರೈತರು ಬಿತ್ತನೆ ಮುಗಿಸಿ ಕಳೆ ತೆಗೆಯುವ ಚಟುವಟಿಕೆಯಲ್ಲಿ ತೊಡಗಿದ್ದರು. ಜುಲೈ ಆರಂಭದಲ್ಲಿ ಹೇಳಿಕೊಳ್ಳುವಂಥ ಮಳೆಯಾಗಿರಲಿಲ್ಲ. ಆದರೆ, ಮಂಗಳವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಮತ್ತೆ ಮರು ದಿನ ಬುಧವಾರ ಮಧ್ಯಾಹ್ನ 1ರಿಂದ ಸಂಜೆ 7ರವರೆಗೆ ಭರ್ಜರಿ ಮಳೆಯಾಗಿದೆ. ಹಳ್ಳ- ಕೊಳ್ಳಗಳು ತುಂಬಿಕೊಂಡಿವೆ.

ಮಳೆಯಿಂದಾಗಿ ದಿಢೀರ್‌ ಆಗಿ ಹವಾಗುಣ ಬದಲಾಗಿದ್ದು, ಸಾಧಾರಣ ಗಾಳಿ ಸಹಿತ ತುಂತುರು ಮಳೆ ಮುಂದುವರಿದಿದೆ. ಬೀದರ ನಗರದ ಪ್ರಮುಖ ವೃತ್ತ, ರಸ್ತೆಗಳು ಮಳೆಯಿಂದಾಗಿ ಜಲಾವೃತಗೊಂಡಿವೆ. ಚರಂಡಿಗಳು ಕಸ-ಕಡ್ಡಿಗಳು ತುಂಬಿಕೊಂಡಿದ್ದರಿಂದ ನೀರು ಹರಿದು ಹೋಗದೇ ನಿಂತುಕೊಂಡು ಜನರ ಸಂಚಾರಕ್ಕೆ ಅಡ್ಡಿಯಾಯಿತು. ಬುಧವಾರ ರಾತ್ರಿಯಿಂದ ಲಾಕ್‌ಡೌನ್‌ ಜಾರಿ ಹಿನ್ನಲೆಯಲ್ಲಿ ಅಗತ್ಯ ಸಾಮಗ್ರಿಗಳ ಖರೀದಿಗಾಗಿ ಮಾರುಕಟ್ಟೆಗೆ ಆಗಮಿಸಿದ್ದ ಜನರು ಕಿರಿಕಿರಿ ಅನುಭವಿಸಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next