ಬಪ್ಪನಾಡು ಸಾರ್ವಜನಿಕ ಶ್ರೀ ಗಣೇ ಶೋತ್ಸವ ಸಮಿತಿ ವತಿಯಿಂದ ನಡೆದ 44ನೇ ಸಾರ್ವಜನಿಕ ಗಣೇ ಶೋತ್ಸವ ಕಾರ್ಯ ಕ್ರಮದಲ್ಲಿ ಮಳೆ ಕೊಯ್ಲು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Advertisement
ಎಂಜಿನಿಯರ್ ಭರತ್ ಜೆ. ಮೇರಿಹಿಲ್, ಮಳೆಕೊಯ್ಲು ಅಳವಡಿಕೆಯ ಅಗತ್ಯ, ಇದರಿಂದ ಭವಿಷ್ಯದಲ್ಲಾಗುವ ಪ್ರಯೋಜನ ಮತ್ತು ಮಳೆಕೊಯ್ಲು ಅಳವಡಿಕೆಯ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಸುಮಾರು 250 ಮಂದಿ ಭಾಗವಹಿಸಿದ್ದರು.
ಕುಂಪಲದ ಸುಮಂಗಲಾ ಅವರ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿದ ಬಳಿಕ ಕಳೆದ ವರ್ಷಕ್ಕಿಂತ ಹೆಚ್ಚು ನೀರು ಈಬಾರಿ ಸಂಗ್ರಹವಾಗಿದೆ. ಎಪ್ರಿಲ್‌ನಲ್ಲೇ ನೀರಿನ ಸಮಸ್ಯೆ ತಲೆದೋರಿದ್ದರಿಂದ ಸುಮಂಗಲಾ ಅವರು, ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಸಿದರು. ಛಾವಣಿ ನೀರನ್ನು ಪೈಪ್ ಮುಖಾಂತರ ಬಾವಿಗೆ ಬಿಡುವ ಮೂಲಕ ಸರಳ ವಿಧಾನವನ್ನು ಅನುಸರಿಸಿ ಮಳೆಕೊಯ್ಲು ಮಾಡಿದ್ದಾರೆ. ನೀರು ಶುದ್ಧೀಕರಣಗೊಳ್ಳಲು ನಡುವೆ ಫಿಲ್ಟರ್ ವ್ಯವಸ್ಥೆ ಅಳವಡಿಸಲಾಗಿದೆ. ಮಳೆಕೊಯ್ಲು ಅಳವಡಿಕೆ ಮಾಡಿದ ಅನಂತರ ಅವರ ಮನೆಯ ಬಾವಿಯಲ್ಲಿ ಹಿಂದಿನ ಮಳೆಗಾಲಕ್ಕಿಂತ ಹೆಚ್ಚಿನ ನೀರು ಸಂಗ್ರಹವಾಗಿರುವುದನ್ನು ಗಮನಿಸಿದ್ದಾರೆ. “ಉದಯವಾಣಿ’ಯ ಮಳೆಕೊಯ್ಲು ಅಭಿಯಾನ ಪ್ರತಿಯೊಬ್ಬರಿಗೂ ಮಳೆಕೊಯ್ಲು ವ್ಯವಸ್ಥೆ ಮಾಡಲು ಪ್ರೇರಣೆಯಾಗಿದೆ. ಇಬ್ಬರು ಸಂಬಂಧಿಕರೂ ಈ ಅಭಿಯಾನ ನೋಡಿ ಮಳೆಕೊಯ್ಲು ಅಳವಡಿಸಿದ್ದಾರೆ’ ಎನ್ನುತ್ತಾರೆ ಸುಮಂಗಲಾ. ಸರಳ ವಿಧಾನದಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಮನೆಯಲ್ಲಿ ಮಾಡಿದ್ದೇವೆ. ಆದರೆ ಇದೀಗ ನೀರು ಹೆಚ್ಚಳವಾಗಿರುವುದನ್ನು ನೋಡಿ ಮನೆಮಂದಿಗೆಲ್ಲ ಖುಷಿಯಾಗುತ್ತಿದೆ. ಭವಿಷ್ಯದಲ್ಲಿ ನೀರಿನ ಸಮಸ್ಯೆ ಬಾರದು ಎಂಬ ವಿಶ್ವಾಸವಿದೆ ಎನ್ನುತ್ತಾರೆ ಅವರು. ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳ ಲ್ಲಿ
ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000