Advertisement

ಮಲೆನಾಡಲ್ಲಿ ಮಳೆ ಅಬ್ಬರ ಕೊಚ್ಚಿ ಹೋದ ಕಾಫಿ ತೋಟ

10:02 AM Oct 06, 2021 | Team Udayavani |

ಚಿಕ್ಕಮಗಳೂರು.ಅ.05: ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರೆದಿದ್ದು ಮೂವರು ರೈತರ ಸುಮಾರು ಒಂದೂವರೆ ಎಕರೆ ಕಾಫಿ ತೋಟ ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ಕಳಸ ತಾಲೂಕಿನ ಮುಳ್ಳೋಡಿ ಗ್ರಾಮದಲ್ಲಿ ನಡೆದಿದೆ. ಸಂಜೆ ತೋಟದಲ್ಲಿ ಅಡ್ಡಾಡಿ ಮನೆಗೆ ಹೋಗಿದ್ದ ಸಣ್ಣ ಬೆಳೆಗಾರ ಬೆಳಗ್ಗೆ ತೋಟಕ್ಕೆ ಬರುವಷ್ಟರಲ್ಲಿ ತೋಟವೇ ಅಲ್ಲೋಲ-ಕಲ್ಲೋಲವಾಗಿತ್ತು.

Advertisement

ತೋಟದ ಸ್ಥಿತಿಯನ್ನ ಕಣ್ಣಾರೆ ಕಂಡ ಸಣ್ಣ ಕಾಫಿ ಬೆಳೆಗಾರ ತಲೆ ಮೇಲೆ ಕೈ ಹೊದ್ದು ಕೂತಿದ್ದಾನೆ. ಮುಳ್ಳೋಡಿ ಗ್ರಾಮದ ಮೂವರು ರೈತರ ತೋಟದ ಸ್ಥಿತಿ ಇದೇ ಆಗಿದೆ. ಈ ರೀತಿ ಬೆಳೆಗಾರರ ತೋಟ ಕೊಚ್ಚಿ ಹೋಗಿರುವುದು ಇದೇ ಮೊದಲಲ್ಲ. ಕಳೆದ ಎರಡ್ಮೂರು ವರ್ಷವೂ ಸುರಿದ ಭಾರೀ ಮಳೆಗೆ ಕಳಸ ಭಾಗದ ಹಲವು ಬೆಳೆಗಾರರ ತೋಟ ಕೊಚ್ಚಿ ಹೋಗಿತ್ತು.

ಇದನ್ನೂ ಓದಿ;- ಮೌಢ್ಯಕ್ಕೆ ಸಡ್ಡುಹೊಡೆದು ಚಾಮರಾಜನಗರಕ್ಕೆ ಬರಲಿದ್ದಾರೆ ಬೊಮ್ಮಾಯಿ!

ಈ ವರ್ಷ ರಾತ್ರಿ ವೇಳೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಸಣ್ಣ ಬೆಳೆಗಾರರು ಕಂಗಾಲಾಗಿದ್ದಾರೆ. ಮುಳ್ಳೋಡಿ ಗ್ರಾಮದ ಸೇತುವೆಯಲ್ಲಿ ನೀರು ಕಟ್ಟಿಕೊಂಡು ಸೇತುವೆ ಕಳಚಿ ಬಿದ್ದ ಪರಿಣಾಮ ತೋಟದಲ್ಲಿ ಹರಿದ ಭಾರೀ ಪ್ರಮಾಣದ ನೀರಿನಿಂದ ತೋಟ ಕೊಚ್ಚಿ ಹೋಗಿದೆ.

ಅಷ್ಟೆ ಅಲ್ಲದೆ, ರಸ್ತೆ ಬದಿಯ ಮಣ್ಣು ಕುಸಿದಿರುವುದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಗ್ರಾಮದಲ್ಲಿ ಮೂಲಭೂತ ಸೌಕರ್ಯವಿಲ್ಲ. ರಸ್ತೆಯನ್ನಂತು ಕೇಳೋದೆ ಬೇಡ. ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜವಿಲ್ಲ. ಮಕ್ಕಳು ಶಾಲಾ-ಕಾಲೇಜಿಗೆ ಹೋಗಿಬರೋದು ಕಷ್ಟವಾಗಿದೆ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ನಿರಂತರವಾಗಿ ತೋಟವನ್ನ ಕಳೆದುಕೊಳ್ಳುತ್ತಿದ್ದೇವೆ.

Advertisement

ಆದರೆ, ಸರ್ಕಾರದಿಂದ ಯಾವುದೇ ಪರಿಹಾರ ಬಂದಿಲ್ಲ ಎಂದು ತೋಟ ಕಳೆದುಕೊಂಡು ಸಣ್ಣ ಬೆಳೆಗಾರರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಮೂಡಿಗೆರೆ ತಾಲೂಕಿನ ಗಬ್ಗಲ್ ಸುತ್ತಮುತ್ತಲೂ ಭಾರೀ ಮಳೆ ಸುರಿದ ಪರಿಣಾಮ ಗಬ್ಗಲ್ ಗ್ರಾಮದ ಕಿರು ಸೇತುವೆ ಕೊಚ್ಚಿ ಹೋಗಿದ್ದು, ಹತ್ತಾರು ಹಳ್ಳಿಯ ಸಂಪರ್ಕ ಸೇತುವೆಯೇ ಕಳಚಿಬಿದ್ದಂತಾಗಿದೆ. ಮಲೆನಾಡಲ್ಲಿ ರಾತ್ರಿ ವೇಳೆ ಸುರಿಯುತ್ತಿರು ಭಾರೀ ಮಳೆಯಿಂದ ಮಲೆನಾಡಿಗರ ಜನಜೀವನ ಅಸ್ತವ್ಯಸ್ತಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next