Advertisement

ರಾಜ್ಯದಲ್ಲಿ ನೆರೆ ಹಾವಳಿ: “ಆಳ್ವಾಸ್ ನುಡಿಸಿರಿ ವಿರಾಸತ್”ಮುಂದೂಡಿಕೆ

11:07 AM Aug 29, 2019 | mahesh |

ಮೂಡಬಿದರೆ : ರಾಜ್ಯದಲ್ಲಿ ನೆರೆ ಹಾವಳಿಯಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದು, ಸಾವಿರಾರು ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ. ಸ್ವಾಭಿಮಾನದಿಂದ ಬದುಕಿದ ನಮ್ಮ ಬಂಧುಗಳು ಸಂಕಷ್ಟವನ್ನು ಎದುರಿಸುತ್ತಿರಬೇಕಾದರೆ ನಾವು ಸಂಭ್ರಮಿಸುವುದರಲ್ಲಿ ಅರ್ಥವಿಲ್ಲ. ಹೀಗಾಗಿ ನವೆಂಬರ್ ನಲ್ಲಿ ನಡೆಯಬೇಕಿದ್ದ ಈ ಬಾರಿಯ ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಯಕ್ರಮವನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ ಎಂ ಮೋಹನ್ ಆಳ್ವ ತಿಳಿಸಿದ್ದಾರೆ .

Advertisement

ಸಂಸ್ಥೆಯು ಕಳೆದ 25 ವರ್ಷಗಳಿಂದ ”ಆಳ್ವಾಸ್ ವಿರಾಸತ್” ಮತ್ತು 15 ವರ್ಷದಿಂದ ‘ಆಳ್ವಾಸ್ ನುಡಿಸಿರಿ’ ಎನ್ನುವ ಎರಡು ಬೃಹತ್ ಕಾರ್ಯಕ್ರಮಗಳನ್ನು ಸಾಂಗವಾಗಿ ನೆರವೇರಿಸುತ್ತಾ ಬಂದಿದ್ದು, ಈ ಬಾರಿಯ “ಆಳ್ವಾಸ್ ನುಡಿಸಿರಿ ವಿರಾಸತ್” ಆಚರಿಸಲು ದಿನಾಂಕ ನಿಗದಿಪಡಿಸಲಾಗಿದ್ದರೂ, ನಮ್ಮ ಜನ ದುಃಖದಲ್ಲಿ ಮುಳುಗಿರುವಾಗ ಉತ್ಸವಗಳ ಮೂಲಕ ನಾವು ಸಂಭ್ರಮಿಸಿದರೆ ಅರ್ಥವಿಲ್ಲ. ಆ ಹಿನ್ನಲೆಯಲ್ಲಿ ಅವರ ಕಷ್ಟಗಳಲ್ಲಿ ಭಾಗಿಯಾಗಬೇಕೆಂದು ಯೋಚಿಸಿ, ಸಹಾಯ ಹಸ್ತ ನೀಡಲು ಸಂಸ್ಥೆ ಮುಂದಾಗಿದ್ದು, ಸಂಸ್ಥೆ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ದೊಡ್ಡ ಮೊತ್ತವನ್ನು ಮುಖ್ಯಮಂತ್ರಿಯ ನೆರೆ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next