Advertisement
ಕೃಷಿ ಇಲಾಖೆ ನೆಪ ಮಾತ್ರಕ್ಕೆ ಪರಿಶೀಲನೆ ನಡೆಸಿ ಕೈಚೆಲ್ಲಿ ಕುಳಿತಿದೆ. ಇನ್ನು ರೈತರ ಕಷ್ಟಕ್ಕೆ ಇಲ್ಲಿಯವರೆಗೂ ಯಾವ ಜನಪ್ರತಿನಿಧಿಯೂಸ್ಪಂದಿಸುತ್ತಿಲ್ಲ, ಇತ್ತ ತಿರುಗಿಯೂ ನೋಡುತ್ತಿಲ್ಲ.ತಾಲೂಕಿನಲ್ಲಿ ಈ ಹಿಂದೆ ಬೆಳೆಯುತ್ತಿದ್ದಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ತಗುಲಿದ್ದರಿಂದ ಬಹುತೇಕ ರೈತರು ಮುಸುಕಿನ ಜೋಳ ಬೆಳೆಯತ್ತ ಮುಖ ಮಾಡಿದರು. ಈಗಇಲ್ಲಿನ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಉಳುಮೆ, ರಸಗೊಬ್ಬರ,ಕೀಟನಾಶಕ, ಕಾರ್ಮಿಕರ ಕೂಲಿ ಹಣ ಹೆಚ್ಚಿರುವುದರಿಂದ ರೈತರು ಬೇಸಾಯವೇ ಬೇಡಪ್ಪ ಎನ್ನುವ ಸ್ಥಿತಿಗೆ ತಲುಪಿದ್ದಾರೆ.
Related Articles
Advertisement
ಇತ್ತೀಚಿಗೆ ಬಿದ್ದ ಧಾರಾಕಾರ ಮಳೆಯಿಂದ ಕಟಾವಿಗೆ ಬಂದ ಜೋಳ ಸಂಪೂರ್ಣ ನೆಲಕಚ್ಚಿದೆ. ಮೊದಲೇ ಶಿಲೀಂಧ್ರಬಾಧೆಯಿಂದ ಹಾಳಾಗಿದ್ದ ಜೋಳ, ಮಳೆಗೆ ಹಾಳಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಾರೀ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಕೃಷಿಕರು ದಿಕ್ಕುಕಾಣದ ಸ್ಥಿತಿಯಲ್ಲಿದ್ದಾರೆ.
ತಾಲೂಕು ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್ ಮಾತನಾಡಿ, ರೈತರುಅಂಗಮಾರಿ ಬಾಧೆಯಿಂದ ಆಲೂಗಡ್ಡೆ ಬಿಟ್ಟು ಮುಸುಕಿನಜೋಳದ ಕಡೆ ಮನಸ್ಸು ಮಾಡಿದ್ದಾರೆ.ಆದರೆ,ಜೋಳಬೆಳೆಯಲುಹೆಚ್ಚುವೆಚ್ಚವಾಗುತ್ತದೆ. ಇದರ ಜೊತೆಗೆ ಮಳೆಯು ಸಂಕಷ್ಟಕ್ಕೆ ಸಿಲುಕಿಸಿದೆ. ಮಲೆನಾಡು, ಅರೆಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಗೆ ಬೆಳೆ ನೀರಿನಲ್ಲಿ ಮುಳುಗಿದೆ. ಕೃಷಿ ಇಲಾಖೆ ಅಧಿಕಾರಿಗಳು ನೆಪ ಮಾತ್ರಕ್ಕೆ ಬೆಳೆ ಸಮೀಕ್ಷೆ ನಡೆಸಿ,ಕೇವಲ 635ಹೆಕ್ಟೇರ್ ಪ್ರದೇಶದಲ್ಲಿ ಕೇವಲ ಶೇ.33 ನಷ್ಟವಾಗಿದೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ ಎಂದು ದೂರಿದರು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಮುಸುಕಿನ ಜೋಳದ ಬೆಳೆ ತಮ್ಮನ್ನು ಕೈಹಿಡಿಯುತ್ತದೆ ಎಂದು ನಂಬಿದ್ದ ರೈತರಿಗೆ ಈಗ ದಾರಿ ಕಾಣದಂತಾಗಿದೆ.
ಕಂದಾಯ ಮತ್ತು ಕೃಷಿ ಇಲಾಖೆ ನಡೆಸಿದ ಸಮೀಕ್ಷೆ ನಿಜಕ್ಕೂ ಅವೈಜ್ಞಾನಿಕವಾಗಿದೆ. ತಕ್ಷಣವೇ ಸೂಕ್ತ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿನೀಡಬೇಕು. ಶೀಘ್ರ ರೈತರಿಗೆ ಪರಿಹಾರ ನೀಡಲು ಮುಂದಾಗಬೇಕು, ಇಲ್ಲವಾದರೆ ಹೋರಾಟ ಅನಿವಾರ್ಯ. –ಭೋಗಮಲ್ಲೇಶ್,ಅಧ್ಯಕ್ಷರು, ತಾಲೂಕು ರೈತ ಸಂಘ.
ತಾಲೂಕಿನಲ್ಲಿ ಶೇ.33ಕ್ಕಿಂತ ಹೆಚ್ಚು ಮುಸುಕಿನ ಜೋಳದ ಬೆಳೆ ಹಾನಿಯಾಗಿದೆ. ಈಗಾಗಲೇ 684 ಹೆಕ್ಟೇರ್ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ, 4 ಸಾವಿರ ರೈತರಿಗೆ ಪರಿಹಾರ ಒದಗಿಸಲು ಇಲಾಖೆಯ ವೆಬ್ ಸೈಟ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡುತ್ತಿದ್ದೇವೆ. ಪ್ರತಿ ಹೆಕ್ಟೇರ್‌ಗೆ 6800 ರೂ. ಪರಿಹಾರ ಕೊಡಲಾಗುತ್ತದೆ. ತಾಲೂಕಿನಕಸಬಾ, ಹಳೇಬೀಡು,ಹಗರೆ, ಮಾದಿಹಳ್ಳಿ, ಬಿಕ್ಕೋಡು ಹೋಬಳಿಯಲ್ಲಿ 200ರಿಂದ 300 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಶೀಘ್ರ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು. – ಪರಮೇಶ್, ಸಹಾಯಕ ಕೃಷಿ ನಿರ್ದೇಶಕ. ಬೇಲೂರು.
-ಡಿ.ಬಿ.ಮೋಹನ್‌ಕುಮಾರ್