Advertisement

ಜಾತ್ರೆ ಸಂದರ್ಭ ಮಳೆ-ಶುಭಸೂಚನೆ

04:14 PM Apr 06, 2022 | Niyatha Bhat |

ಸಾಗರ: ಮಹಾಗಣಪತಿ ದೇವರು ನಮ್ಮೂರಿನ ಆರಾಧ್ಯ ಧೈವ. ಗಣಪತಿ ಜಾತ್ರೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ನಡೆದಿದ್ದು, ಸಹಸ್ರಾರು ಜನರ ಸಮ್ಮುಖದಲ್ಲಿ ಮಹಾಗಣಪತಿ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆದಿದೆ ಎಂದು ಶಾಸಕ, ಎಂಎಸ್‌ಐಎಲ್‌ ಅಧ್ಯಕ್ಷ ಎಚ್‌.ಹಾಲಪ್ಪ ಹರತಾಳು ತಿಳಿಸಿದರು.

Advertisement

ಇಲ್ಲಿನ ಮಹಾಗಣಪತಿ ಜಾತ್ರೋತ್ಸವ ಅಂಗವಾಗಿ ಮಂಗಳವಾರ ನೆರವೇರಿದ ಮಹಾಗಣಪತಿ ಮಹಾಸ್ಯಂದನ ರಥೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಹಾಗಣಪತಿ ಜಾತ್ರೆ ಪ್ರಾರಂಭವಾಗಿದೆ ಎಂದರೆ ಭೂಮಿಗೆ ಮೊದಲ ಮಳೆ ಬರುತ್ತದೆ ಎಂಬ ವಾಡಿಕೆ ಮಾತಿತ್ತು. ಅದೇ ರೀತಿ ಎರಡು ದಿನಗಳಿಂದ ಉತ್ತಮ ಮಳೆ ಸಹ ಆಗಿದ್ದು ಇದು ಶುಭ ಸೂಚನೆಯಾಗಿದೆ.

ಗಣಪತಿ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಪ್ರತಿದಿನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಬುಧವಾರದಿಂದ ಪ್ರತಿದಿನ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ. ಭಕ್ತಾದಿಗಳು ಶಾಂತಿ ಮತ್ತು ಸೌಹಾರ್ದತೆ ಕಾಯ್ದುಕೊಳ್ಳುವ ಮೂಲಕ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next