Advertisement
ಗುರುವಾರ ನಗರದಲ್ಲಿ ಪ್ರಮುಖ ವಾಣಿಜ್ಯ ಕೇಂದ್ರ ಲಾಲ ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆ ಪ್ರದೇಶ, ಮಹಾತ್ಮಾ ಗಾಂಧೀಜಿ ವೃತ್ತ, ಸಿದ್ದೇಶ್ವರ ರಸ್ತೆ, ಬಸ್ ನಿಲ್ದಾಣ, ಎಪಿಎಂಸಿ ಪ್ರದೇಶದ ರಸ್ತೆಗಳು ಹೀಗೆ ಹಲವು ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆಯಿಂದ ತುಂತುರು ಮಳೆ ಸುರಿಯತ್ತಲೇ ಇದ್ದು, ನೀಲಿ ಮೋಡ ಬಿಳಿ ಮಿಶ್ರಿತ ನೀಲಿ ವರ್ಣದ ಹೊದಿಕೆ ಹಾಕಿಕೊಂಡಿರುವ ಕಾರಣ ಇಡೀ ದಿನ ಸೂರ್ಯ ರಜೆ ಘೋಷಿಸಿದ್ದ.
ನಿತ್ಯದ ಕೆಲಸಕ್ಕೆ ಹೊರಡುವ ಹಿರಿಯರು ಕೂಡ ಕೊಡೆ, ರೇನ್ ಕೋಟು ಧರಿಸಿಕೊಂಡು ಮನೆಯಿಂದ ಹೊರಗೆ ಅಡಿ ಇಟ್ಟರೆ, ಹಾನಗಳ ಮೇಲೆ ಸಾಗುವಾಗ ಮಳೆ ಹನಿಗಳಿಂದ ರಕ್ಷಣೆಗಾಗಿ ತಲೆ ಮೇಲೆ ನೀರು ನಿರೋಧಕ ಟೋಪಿ ಹಾಕಿಕೊಂಡು ಓಡಾಡುತ್ತಿದ್ದರೆ, ಹಲವರು ಮೈಗೆ ಮಳೆಯ ಹನಿ ನೀರಿನ ಸಿಂಚನವನ್ನು ತಾಗಿಸಿಕೊಂಡೇ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದವು. ತುಂತುರು ಮಳೆಯಲ್ಲೂ ರಸ್ತೆ ಸಂಚಾರ ನಿಯಂತ್ರಿಸುವ ಕರ್ತವ್ಯ ನಿಭಾಯಿಸುತ್ತಿದ್ದ ಪೊಲೀಸರು, ಮಕ್ಕಳನ್ನು ಶಾಲೆಗೆ ಕಳಿಸಿ-ಕರೆ ತರವಲು ಹೊರಟ ತಾಯಂದಿರು, ಕಾಲೇಜಿಗೆ ಹೊರಟ ಯುವ ಸಮೂಹ, ಮಾರುಕಟ್ಟೆಗೆ ಬಂದಿದ್ದ ಗ್ರಾಹಕರು, ಕೆಲಸಕ್ಕೆ ಹೊರಟವರು ಬಿಚ್ಚಿದ ಕೊಡೆ ಕೈಯಲ್ಲಿ ಹಿಡಿದೇ ಸಾಗುತ್ತಿದ್ದ ಹಲವು ಬಗೆಯ ವಿಭಿನ್ನ ನೋಟಗಳು ಕಂಡು ಬಂದವ