ಗುಂಡ್ಲುಪೇಟೆ: ಕಳೆದ 20 ದಿನಗಳಿಂದಲೂ ಸತತ ವಾಗಿ ಮಳೆ ಸುರಿಯುತ್ತಿರುವ ಪರಿಣಾಮ ತಾಲೂಕಿ ನಲ್ಲಿ ಹುರುಳಿ ಬೆಳೆ ಕೊಳುವ ಹಂತಕ್ಕೆ ತಲುಪಿದೆ. ಇದ ರಿಂದ ಬೆಳೆ ಬೆಳೆದ ರೈತ ನಷ್ಟದ ಭೀತಿ ಎದುರಾಗಿದೆ. ತಾಲೂಕಿನಲ್ಲಿ ಒಟ್ಟು 12,744 ಹೆಕ್ಟೇರ್ ಪ್ರದೇಶ ದಲ್ಲಿ ಹುರುಳಿಯನ್ನು ಕಳೆದ 2 ತಿಂಗಳ ಹಿಂದೆ ಬಿತ್ತನೆ ಮಾಡಲಾಗಿತ್ತು.
ಇದಾದ ನಂತರದಲ್ಲಿ ಮಳೆಯಿ ಲ್ಲದೇ ಬೆಳೆ ಒಣಗುವ ಹಂತದಲ್ಲಿತ್ತು. ಹಲವು ದಿನ ಗಳ ಬಳಿಕ ಮಳೆಯಾದ ಕಾರಣ ಬೆಳೆ ಚೇತರಿಸಿ ಕೊಂಡಿತು. ಕುಡಿಯೊಡೆದು ಹುರುಳಿ ಗಿಡಗಳು ಹಬ್ಬಿಕೊಂಡವು. ಗಿಡದ ಕೆಳಗೆ ತೇವಾಂಶ ಉಳಿ ಯುವ ಕಾರಣ ಮುಂದೆ ಮಳೆಯಾಗದಿದ್ದರೂ ಚಳಿ ವಾತವರಣಕ್ಕೆ ಹುರುಳಿ ಬೆಳೆ ಬರುತ್ತದೆ ಎಂಬ ನಿರೀಕ್ಷೆ ರೈತರಲ್ಲಿತ್ತು. ಆದರೆ, 20 ದಿನಗಳಂದಲೂ ನಿರಂತರವಾಗಿ ಮಳೆಯಾಗುತ್ತಲೇ ಬಂದ ಕಾರಣ ಹುರುಳಿ ಗಿಡ ತೇವಾಂಶ ಹೆಚ್ಚಾಗಿ ಕೊಳೆತಿವೆ.
ಇದನ್ನೂ ಓದಿ:- ಭ್ರಷ್ಟಾಚಾರ-ಸ್ವಜನ ಪಕ್ಷ ಪಾತ ಮುಕ್ತ ಕಸಾಪ ನನ್ನ ಗುರಿ: ಮುಲಾಲಿ
ಇನ್ನೂ ಹೆಚ್ಚು ಬಿಸಿಲು ಬಂದರೂ ಗಿಡ ಉಳಿಯುವ ಸಾಧ್ಯತೆಗಳು ಕಡಿಮೆ ಇವೆ. 2016-17ನೇ ಸಾಲಿನಲ್ಲಿ ಬೆಳೆ ವಿಮೆ ಪಾವತಿಸಿ ದ್ದರೂ ಬೆಳೆ ನಷ್ಟ ಅನುಭವಿಸಿದ ರೈತರಿಗೆ ವಿಮಾ ಕಂಪನಿ ಪರಿಹಾರ ನೀಡಲಿಲ್ಲ. ಈಗಾಗಿ ತಾಲೂಕಿನಲ್ಲಿ ಬೆರೆಳಿಣಿಕೆಯಷ್ಟು ಮಂದಿಗೂ ಬೆಳೆ ವಿಮೆ ಪಾವತಿ ಮಾಡಿಲ್ಲ. ಹಿಂದಿನ ವರ್ಷ ಉತ್ತಮ ಬೆಲೆ ಇದ್ದ ಕಾರಣ ಜಾನುವಾರುಗಳ ಮೇವಿಗೆ ಅನುಕೂಲ ಆಗುತ್ತದೆ ಎಂದು ಹುರುಳಿ ಬಿತ್ತನೆ ಮಾಡಲು, ಗೊಬ್ಬರ ಹಾಕಲು ಇತರೆ ಉದ್ದೇಶಗಳಿಗೆ ರೈತರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ.
ಈಗ ಬೆಳೆ ಹಾಳಾಗಿರುವ ಕಾರಣ ರೈತರು ಚಿಂತಾಕ್ರಾಂತರಾಗಿ ದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಆವರ್ತ ನಿಧಿಯಿಂದ ರೈತರಿಗೆ ಹುರುಳಿ ಬೆಳೆ ನಷ್ಟದ ಕಾರಣಕ್ಕೆ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಹಂಗಳ ಮಾಧು ಆಗ್ರಹಿಸಿದ್ದಾರೆ. ಪರಿಹಾರ ನೀಡಿ: ತಾಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಅಧಿಕ ಕಡೆ ಹುರುಳಿ ಬೆಳೆ ಕೊಳೆತು ಹೋಗಿದೆ. ಇದರಿಂದ ರೈತನು ಸಾಲದ – ಸುಳಿಗೆ ಸಿಲುಕುವಂತಾಗಿದೆ. ಆದ್ದರಿಂದ ಹುರುಳಿ ಬೆಳೆಗೆ ಜಿಲ್ಲಾಧಿಕಾರಿಗಳ ಆವರ್ತ ನಿಧಿ ಯಿಂದ ಪರಿಹಾರ ನೀಡಬೇಕು ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ ಆಗ್ರಹಿಸಿದ್ದಾರೆ.