ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಸತತವಾಗಿ ಬೀಳುತ್ತಿ ನಾಗರಿಕರು ನಗರಸಭೆ ಸದಸ್ಯ ನಾಗರಾಜ್ ನೇತೃತ್ವದಲ್ಲಿ ಕೆರೆಗೆ ಬಾಗಿನ ಅರ್ಪಿಸಿದರು. ರುವ ಮಳೆಯಿಂದ ಹಲವು ಕೆರೆಗಳಿಗೆ ನೀರು ಹರಿದು ಸಂತಸಕ್ಕೆ ಕಾರಣವಾಗಿದ್ದರೆ, ಮತ್ತೆ ಕೆಲವೆಡೆ ಅವಾಂತರ ಸೃಷ್ಟಿಸಿ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ.
ನಗರದ ಹೊರವಲಯದ ಕರೇನಹಳ್ಳಿಯ ಪ್ರೇಮನಾಥ್ ಎಂಬುವರ ಮನೆ ಕುಸಿದು ಬಿದ್ದಿದೆ. ಅದೃಷ್ಟವಷಾತ್ ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಅನಾಹುತವಾಗಿಲ್ಲ. ಈಗ ಕುಸಿದು ಬಿದ್ದಿರುವ ಮನೆಯಲ್ಲಿ ಪ್ರೇಮನಾಥ್ ಮಗ್ಗಗಳನ್ನು ಹಾಕಿದ್ದರು. ಇತ್ತೀಚೆಗಷ್ಟೇ ಮಗ್ಗಗಳನ್ನು ಬೇರೆಡೆಗೆ ಸ್ಥಳಾಂತರಿಸಿ, ಮನೆ ಖಾಲಿ ಇತ್ತು. ಸೋಮವಾರ ರಾತ್ರಿ ಸುರಿದ ಮಳೆಗೆ ಮನೆ ಕುಸಿದು ಬಿದ್ದಿದ್ದು, ಲಕ್ಷಾಂತರ ರೂ. ಹಾನಿಯಾಗಿದೆ. ತಾಲೂಕಿನ ಕುರುಬರಹಳ್ಳಿಯಲ್ಲಿಯೂ ಒಂದು ಹಳೆಯ ಮನೆ ಕುಸಿದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
ಬೆಳೆ ಹಾನಿ: ತಾಲೂಕಿನ ಕೊಡಿಗೆಹಳ್ಳಿ, ಮೆಣಸಿ ಕ್ರಾಸ್, ಹುಸ್ಕೂರು ಮೊದಲಾದ ಗ್ರಾಮಗಳ ತೋಟಗಳಿಗೆ ಮಳೆ ನೀರು ನುಗ್ಗಿ ಬೆಳೆ ಹಾನಿಯಾಗಿವೆ. ಹುಸ್ಕೂರು ಗ್ರಾಮದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿವೆ. ತಾಲೂಕಿನ ಕೊಡಿಗೆಹಳ್ಳಿಯಲ್ಲಿ ಮಳೆ ನೀರು ನುಗ್ಗಿ, ಅಡಕೆ, ಬಾಳೆ, ರಾಗಿ ಹಾಗೂ ಜೋಳ ಬೆಳೆ ಹಾನಿಯಾಗಿವೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ತೆರವಾಗಬೇಕು. ಜಮೀನಿಗೆ ಮಳೆ ನೀರು ಹರಿಯಲು ಕಾರಣವಾಗಿರುವ ಹಳ್ಳಗಳನ್ನು ತೆರವು ಮಾಡಲು ಕ್ರಮ ವಹಿಸಬೇಕು ಎಂದು ಗ್ರಾಮದ ಅಶ್ವತ್ಥಪ್ಪ ಒತ್ತಾಯಿಸಿದ್ದಾರೆ.
ಸಂಪರ್ಕ ಸೇತುವೆ ಕಡಿತ: ಸತತ 5 ವರ್ಷಗಳಿಂದ ಸಂಪರ್ಕ ಸೇತುವೆ ಕಡಿತಗೊಂಡು ತಾತ್ಕಾಲಿಕ ಸೇತುವೆಯನ್ನೆ ಆಶ್ರಯಿಸಿರುವ ತಾಲೂಕಿನ ಕೊಟ್ಟಿಗೇಮಾಚೇನಹಳ್ಳಿ ಗ್ರಾಮಸ್ಥರಿಗೆ ಮಳೆ ಮತ್ತೆ ಸಂಕಷ್ಟ ತಂದೊಡ್ಡಿದೆ. ಸೋಮವಾರ ಸುರಿದ ಮಳೆಯಿಂದ ತಾತ್ಕಾಲಿಕ ಸೇತುವೆ ಒಂದು ಭಾಗ ಕುಸಿದಿದ್ದು, ಮತ್ತೆ ಗ್ರಾಮಕ್ಕೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿ¨
ಆರು ಮೇಕೆ ಸಾವು-
ತಾಲೂಕಿನ ಕೂಗೋನಹಳ್ಳಿ ಕಾಲೋನಿಯಲ್ಲಿ ಗೋಡೆ ಕುಸಿದ ಪರಿಣಾಮ 6 ಮೇಕೆ ಸಾವನ್ನಪ್ಪಿವೆ. ಸೋಮವಾರ ರಾತ್ರಿ ಸುರಿದ ಮಳೆಗೆ ಕೂಗೋನಹಳ್ಳಿ ಕಾಲೋನಿಯಲ್ಲಿ ಚೆನ್ನಪ್ಪ ಎನ್ನುವರ ಕೊಟ್ಟಿಗೆಯ ಮೇಲೆ ಗೋಡೆ ಕುಸಿದ ಪರಿಣಾಮ ಕೊಟ್ಟಿಗೆಯಲ್ಲಿದ್ದ 6 ಮೇಕೆ ಸಾವನಪ್ಪಿವೆ. ಇದರಿಂದ ರೈತ ಚೆನ್ನಪ್ಪರಿಗೆ ಸಾವಿರಾರು ರೂ. ನಷ್ಟವಾಗಿದೆ.