Advertisement
ನೀರಿನ ಹೊಡೆತಕ್ಕೆ ಅಣೆಕಟ್ಟಿನ ಅಡಿಪಾಯ ಕುಸಿದಿದೆ. ಬೇಸಗೆಯಲ್ಲಿ ಅಣೆಕಟ್ಟಿಗೆ ಹಲಗೆ ಹಾಸಲಾಗಿತ್ತು. ಹಠಾತ್ತಾಗಿ ಹೊಳೆಗೆ ಭಾರಿ ಪ್ರಮಾಣದ ನೀರು ಬಂದಿದ್ದು, ಅಣೆಕಟ್ಟಿನ ಬದಿಯಲ್ಲಿ ಹರಿದು ಮಣ್ಣು ಕೊಚ್ಚಿ ಹೋಯಿತು. ಪಕ್ಕದಲ್ಲಿರುವ ನಾರಾಯಣ ಆಚಾರ್ಯ ಅವರ ಅಡಿಕೆ ತೋಟದ ಬದಿ ಕುಸಿದು, ಅಪಾರ ನಷ್ಟ ಸಂಭವಿಸಿದೆ. ಹಲಗೆ ಶೇಖರಣೆಯ ಕಟ್ಟಡವೂ ಜರಿದಿದೆ. ಈ ಅಣೆಕಟ್ಟಿನ ಸಮೀಪದಲ್ಲೇ ಎರಡು ವರ್ಷಗಳ ಹಿಂದೆ ನಿರ್ಮಾಣಗೊಂಡ ರೆಂಜ – ಸೆರ್ತಾಜೆ – ಅಜಲಡ್ಕ ಸೇತುವೆಯೂ ಅಪಾಯದ ಸ್ಥಿತಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಬುಧವಾರ ಭೇಟಿ ನೀಡಿದರು. ಕಂದಾಯ ಇಲಾಖೆಯಿಂದ ಸಿಗುವ ನಷ್ಟ ಪರಿಹಾರ ಒದಗಿಸುವ ಭರವಸೆ ನೀಡಿದರು. ಸಣ್ಣ ನೀರಾವರಿ ಇಲಾಖೆಯ ಮೂಲಕ ಕಿಂಡಿ ಅಣೆಕಟ್ಟು ದುರಸ್ತಿಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಜಿಲ್ಲಾ ಬಿ.ಜೆ.ಪಿ ಕಾರ್ಯಕಾರಿಣಿ ಸದಸ್ಯ ಆರ್.ಸಿ. ನಾರಾಯಣ ರೆಂಜ, ಪುತ್ತೂರು ನಗರ ಮಂಡಲ ಬಿಜೆಪಿ ಕಾರ್ಯದರ್ಶಿ ರಾಮದಾಸ್ ಹಾರಾಡಿ, ನಿತೀಶ್ ಕುಮಾರ್, ಅನಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ತಾರಾನಾಥ ರೈ ಗುಬ್ರಿಕಲ್ಲು, ಪಾಣಾಜೆ ಸಿ.ಎ. ಬ್ಯಾಂಕ್ ಅಧ್ಯಕ್ಷ ಪದ್ಮನಾಭ ಬೋರ್ಕರ್ ಬ್ರಹ್ಮರಗುಂಡ, ಜಯರಾಮ ರೈ ಅನಾಜೆ, ಸತ್ಯನಾರಾಯಣ ರೈ ನುಳಿಯಾಲು, ಪದ್ಮನಾಭ ರೈ ಆನಾಜೆ, ಕೆ.ಎನ್. ಪಾಟಾಳಿ, ವೆಂಕಟ್ರಮಣ ಬೋರ್ಕರ್ ಬ್ರಹ್ಮರಗುಂಡ, ಪುರುಷೋತ್ತಮ ಭಟ್ ಘಾಟೆ, ಉದಯ ಕುಮಾರ್ ಆಚಾರ್ಯ ಉಪಸ್ಥಿತರಿದ್ದರು. ಕುದುರೆಕುಮೇರು ಎಂಬಲ್ಲಿ ಕಿಂಡಿ ಅಣೆಕಟ್ಟಿನ ಅಡಿಪಾಯ ಕುಸಿದಿದ್ದು, ಶಾಸಕ ಸಂಜೀವ ಮಠಂದೂರು ಪರಿಶೀಲಿಸಿದರು.