Advertisement
ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಸ್ಥಳಕ್ಕೆ ಭೇಟಿ ನೀಡಿದ್ದು, ವಿವಿಧ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಕಿನಾರೆಯಲ್ಲಿ ಸುಮಾರು ಮೂರು ದಶಕಗಳ ಹಿಂದೆ ಹಾಕಲಾಗಿದ್ದ ಬಂಡೆಗಲ್ಲುಗಳು ಸಮುದ್ರ ಸೇರಿವೆ. ತೀರ ಪ್ರದೇಶದಲ್ಲಿ ಆಳವಾದ ಕಂದಕ ಸೃಷ್ಟಿಯಾಗಿದ್ದು, ಇದರಿಂದಾಗಿ ಮತ್ತಷ್ಟು ಭಾರೀ ಅಲೆಗಳು ದಡವನ್ನು ಅಪ್ಪಳಿಸುವಂತಾಗಿದೆ ಎಂದು ಮೊಗವೀರ ಮುಖಂಡರು ಹೇಳಿದ್ದಾರೆ.
ಕೊಲ್ಲೂರು: ಜಡ್ಕಲ್ ಗ್ರಾ.ಪಂ. ವ್ಯಾಪ್ತಿಯ ಮುದೂರಿನ ಉದಯ ನಗರ ಎಂಬಲ್ಲಿ ಗುರುವಾರ ಬೆಳಗ್ಗೆ ದಿಢೀರ್ ಆಗಿ ಬೀಸಿದ ಭಾರೀ ಗಾಳಿ ಮಳೆಗೆ ಹಲವು ಅಂಗಡಿಗಳು, ವಿದ್ಯುತ್ ಕಂಬಗಳು ಜಖಂಗೊಂಡು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಅಂಗಡಿಗಳ ಮೇಲ್ಛಾವಣಿ ಸಂಪೂರ್ಣವಾಗಿ ಹಾರಿಹೋಗಿದ್ದು, ಅಂಗಡಿಯ ಒಂದು ಪಾರ್ಶ್ವದ ಗೋಡೆ ಬಿರುಕುಬಿಟ್ಟಿದೆ. ಬೆಲೆ ಬಾಳುವ ಸಾಮಗ್ರಿಗಳು ನಾಶವಾಗಿವೆ. ಹಲವು ಮನೆಗಳ ಮೇಲ್ಛಾವಣಿ ಶೀಟ್‌ಗಳು ಹಾರಿಹೋಗಿವೆ. ಜಡ್ಕಲ್ ಗ್ರಾ.ಪಂ. ಅಧ್ಯಕ್ಷ ಅನಂತಮೂರ್ತಿ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.