Advertisement
ಬಜಪೆ ಗ್ರಾ. ಪಂ. ವ್ಯಾಪ್ತಿಯಲ್ಲಿ 17.65 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ. ಈ ಬಗ್ಗೆ ಈಗಾಗಲೇ ವರದಿಯನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಗೆ ಸಲ್ಲಿಸಲಾಗಿದೆ. ಸೇತುವೆಗೆ ಹಾನಿ, ಬೆಳೆ ಹಾನಿ, ಸಾಮಾಗ್ರಿ ನಷ್ಟ, ರಸ್ತೆ ಬಿರುಕು, ಆವರಣ ಗೋಡೆಗೆ ಹಾನಿ, ಮನೆ ಗೋಡೆ ಕುಸಿತಗಳು ಇದರಲ್ಲಿ ಸೇರಿವೆ. ಗ್ರಾಮ ಕರಣಿಕರ ಕಚೇರಿಯಲ್ಲಿ ಮೂರು ಮಂದಿ ವಾಸದ ಮನೆ, ಆವರಣಗೋಡೆ ಹಾನಿಯಾದ ಬಗ್ಗೆ ಒಟ್ಟು 1ಲಕ್ಷ 80 ಸಾವಿರ ರೂ. ನಷ್ಟವಾಗಿದೆ ಎಂದು ಮನವಿ ಸಲ್ಲಿಸಲಾಗಿದೆ. ಮನೆಮನೆ ಭೇಟಿಯಲ್ಲಿ 5ವರ್ಷಗಳ ಒಳಗಿನ ಮಕ್ಕಳಿಗೆ ಒಆರ್‌ಎಸ್ ಪ್ಯಾಕೇಜ್ ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಳವೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಮಳೆಯಿಂದಾಗಿ 75ಲಕ್ಷ ರೂ.ನಷ್ಟ ಉಂಟಾಗಿದೆ. ಇದರಲ್ಲಿ 2 ಮನೆಗಳು ಭಾಗಶಃ ಹಾನಿಯಾಗಿದೆ. ತಡೆಗೋಡೆ, ಆವರಣ ಗೋಡೆ, ಮಣ್ಣು ಕುಸಿತದ ಬಗ್ಗೆ ಹೆಚ್ಚು ಅರ್ಜಿಗಳು ಬಂದಿವೆ ಕಂದಾವರ: 10ಲ.ರೂ.ನಷ್ಟ
ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಂಬೆ ವಿಟ್ಲಬೆಟ್ಟುನಲ್ಲಿ 6ಮನೆಗೆ ಹಾನಿ, ರಸ್ತೆ, ಕುಡಿಯುವ ನೀರಿ ಪೈಪ್‌ಲೈನ್ ಹಾನಿ, ಚರಂಡಿ,ಅದ್ಯಪಾಡಿ ರಸ್ತೆ, ಗೋಡೆ ಹಾನಿ ಸಹಿತ ಒಟ್ಟು 10ಲ.ರೂ.ನಷ್ಟವಾಗಿದೆ.