Advertisement

ಮಳೆ: ಚೆಕ್ ‌ಪೋಸ್ಟ್‌ ಸಿಬ್ಬಂದಿ ಕಂಗಾಲು

04:05 PM Jul 17, 2020 | Suhan S |

ನೆಲಮಂಗಲ: ವರುಣನ ಆರ್ಭಟಕ್ಕೆ ಚೆಕ್‌ಪೋಸ್ಟ್‌ ಸಿಬ್ಬಂದಿ ಕಂಗಾಲಾದರು. ಚೆಕ್‌ಪೋಸ್ಟ್‌ನ ಮೇಲ್ಚಾವಣಿಗೆ ಹಾನಿಯಾಗಿದ್ದರಿಂದ ಸಿಬ್ಬಂದಿ ಮಳೆಯಿಂದ ರಕ್ಷಣೆಗಾಗಿ ಪರದಾಡಿದರು.

Advertisement

ತಾಲೂಕಿನ ಯಂಟಗಾನಹಳ್ಳಿ ಹಾಗೂ ಹಳೆನಿಜಗಲ್ಲು ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಲು ಬಟ್ಟೆಯ ಪೆಂಡಾಲ್‌ ನಿರ್ಮಾಣ ಮಾಡಲಾಗಿದೆ. ಗುರುವಾರ ಮಧ್ಯಾಹ್ನದಿಂದಲೇ ವರುಣನ ಆರ್ಭಟ ಜೋರಾಗುತ್ತಿದ್ದಂತೆ ಪೆಂಡಾಲ್‌ ಮೇಲ್ಭಾಗ ನೀರು ತುಂಬಿ ಬೀಳುವ ಹಂತಕ್ಕೆ ಬರುತ್ತಿದ್ದಂತೆ, ಅಪಾಯದಿಂದ ಪಾರಾದ ಅಧಿಕಾರಿಗಳು ಸಮೀಪದ ಟೋಲ್‌ನಲ್ಲಿ ಆಶ್ರಯ ಪಡೆದರು.

ಮಳೆಯಲ್ಲಿಯೇ ಕೆಲಸ: ಚೆಕ್‌ಪೋಸ್ಟ್‌ಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಮಳೆಯಲ್ಲಿಯೇ ಕೆಲಸ ನಿರ್ವಹಿಸಿದರು. ಅವರ ಸುರಕ್ಷತೆಗೆ ಮೇಲಾಧಿಕಾರಿಗಳು ಸೌಲಭ್ಯ ನೀಡದಿರುವ ಹಿನ್ನೆಲೆಯಲ್ಲಿ ಕೋವಿಡ್ ಆತಂಕದ ಜತೆ ಬೇರೆ ಕಾಯಿಲೆಗಳು ಬರುವ ಆತಂಕದಲ್ಲಿದ್ದಾರೆ.

ಸೌಲಭ್ಯ ಕೊರತೆ: ಹೆದ್ದಾರಿ ಚೆಕ್‌ಪೋಸ್ಟ್‌ಗಳಲ್ಲಿ ಬ್ಯಾರಿಕೇಡ್‌ ಕೊರತೆ, ರಾತ್ರಿ ವೇಳೆ ವಿದ್ಯುತ್‌ ದೀಪಗಳಿಲ್ಲ, ಸಿಸಿ ಟೀವಿಗಳಿಲ್ಲ, ಮಳೆ ಬಂದರೆ ನಿಲ್ಲಲು ಜಾಗದ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಿದ್ದು, ಸೌಲಭ್ಯ ನೀಡುವಂತೆ ಸಿಬ್ಬಂದಿ ಮನವಿ ಮಾಡಿದ್ದಾರೆ. ಅವಶ್ಯಕತೆಯಿರುವ ಕಡೆ ನಿರ್ಮಿಸಿ: ವಾಹನ ನಿಯಂತ್ರಣ ಹಾಗೂ ತಪಾಸಣೆಗೆ ಸೂಕ್ತ ಸ್ಥಳವಲ್ಲದ ನಗರದ ನವಯುಗ ಟೋಲ್‌ ಬಳಿ ಬಿಬಿಎಂಪಿಯಿಂದ ತಗಡು ಸೀಟುಗಳ ಮೂಲಕ ಸುರಕ್ಷಿತ ಚೆಕ್‌ಪೋಸ್ಟ್‌ ಮಾಡಿದ್ದಾರೆ. ಆದರೆ ಗಡಿಯಲ್ಲಿ ವಾಹನ ನಿಯಂತ್ರಣ ಹಾಗೂ ತಪಾಸಣೆ ಮಾಡುವ ಸಿಬ್ಬಂದಿಗೆ ಸೂಕ್ತ ವ್ಯವಸ್ಥೆಗಳಿಲ್ಲದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next